ಅಷ್ಟಕ್ಕೂ, ನಾವೆಲ್ಲರೂ ಕುಲದೇವತೆಯನ್ನು ಏಕೆ ಪೂಜಿಸುತ್ತೇವೆ ಗೊತ್ತಾ?
ನೀವೆಲ್ಲರೂ ನಿಮ್ಮ ಕುಲದೇವಿ ಅಥವಾ ಕುಲದೇವತೆಯ ಬಗ್ಗೆ ಕೇಳಿರಬಹುದು ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಅವರನ್ನು ಪೂಜಿಸಿಯೂ ಇರುತ್ತೀರಿ. ಅವರನ್ನು ಏಕೆ ಪೂಜಿಸಲಾಗುತ್ತೆ ಮತ್ತು ಅವುಗಳ ಪ್ರಾಮುಖ್ಯತೆ ಏನು ಎಂದು ತಿಳಿದುಕೊಳ್ಳೋಣ.
ಕುಲದೇವಿ ಅಥವಾ ಕುಲದೇವತೆ ಯಾವುದೇ ಕುಟುಂಬವನ್ನು ಪ್ರತಿನಿಧಿಸುತ್ತೆ. ಅವರನ್ನು ಹಿಂದೂ ಧರ್ಮದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತೆ ಮತ್ತು ಮದುವೆ(Marriage), ಹೊಸ ಸೊಸೆಯ ಆಗಮನ, ಮಗುವಿನ ಜನನದ ಸಮಯ ಮತ್ತು ಇತರ ಅನೇಕ ಧಾರ್ಮಿಕ ವಿಧಿಗಳಂತಹ ಯಾವುದೇ ಶುಭ ಸಂದರ್ಭದಲ್ಲಿ ಪೂಜಿಸಲಾಗುತ್ತೆ.
ಕುಲದೇವಿ(Kuladevi) ಅಥವಾ ಕುಲದೇವತೆಯನ್ನು ಒಂದು ನಿರ್ದಿಷ್ಟ ರಾಜವಂಶ ಅಥವಾ ಕುಲದ ಪ್ರಧಾನ ದೇವತೆ ಎಂದು ಪರಿಗಣಿಸಲಾಗುತ್ತೆ. ಕುಲದೇವಿ ಅಥವಾ ಕುಲದೇವತೆಯ ಪರಿಕಲ್ಪನೆಯು ಹಿಂದೂ ಸಂಪ್ರದಾಯಗಳಲ್ಲಿ ಕಂಡುಬರುತ್ತೆ ಮತ್ತು ವಿವಿಧ ಸಮುದಾಯಗಳ ನಡುವೆ ಬದಲಾಗುತ್ತೆ. ನಾವೆಲ್ಲರೂ ಕುಲದೇವಿ ಅಥವಾ ಕುಲದೇವತೆಯನ್ನು ಏಕೆ ಹೊಂದಿದ್ದೇವೆ ಮತ್ತು ಅವರನ್ನು ಪೂಜಿಸುವ ಪ್ರಾಮುಖ್ಯತೆ ಏನು ಎಂಬುದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಅವುಗಳ ಪ್ರಾಮುಖ್ಯತೆ ಮತ್ತು ಅವುಗಳ ಅವಶ್ಯಕತೆಯ ಬಗ್ಗೆ ಕಲಿಯೋಣ.
ಕುಲದೇವಿ ಅಥವಾ ಕುಲದೇವತೆಯನ್ನು ಪೂಜಿಸುವ ಪ್ರಾಮುಖ್ಯತೆ: ಪ್ರತಿಯೊಂದು ಕುಟುಂಬ(Family) ಅಥವಾ ಕುಲವು ತಲೆಮಾರುಗಳ ಮೂಲಕ ಹಾದುಹೋಗುವ ನಿರ್ದಿಷ್ಟ ದೈವಿಕ ಸಂಬಂಧವನ್ನು ಹೊಂದಿದೆ ಎಂದು ನಂಬಲಾಗಿದೆ. ಯಾವುದೇ ಕುಲದೇವಿ ಅಥವಾ ಕುಲದೇವತೆಯನ್ನು ಕುಲದ ರಕ್ಷಕನಾಗಿ ನೋಡಲಾಗುತ್ತೆ, ಆ ಕುಲದ ಎಲ್ಲಾ ಸದಸ್ಯರನ್ನು ರಕ್ಷಿಸುತ್ತೆ.
ಕುಲದೇವಿ ಅಥವಾ ಕುಲದೇವತೆಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಆಶೀರ್ವಾದ ಸಿಗುತ್ತೆ ಮತ್ತು ಇದು ಸಮೃದ್ಧಿಯನ್ನು ತರುತ್ತೆ. ಕುಲದೇವಿ ಮತ್ತು ದೇವತೆಯನ್ನು ಗೌರವಿಸುವ ಮೂಲಕ ಮತ್ತು ಅವರ ಅನುಗ್ರಹವನ್ನು ಪಡೆಯುವ ಮೂಲಕ, ಇಡೀ ಕುಟುಂಬದ ಮೇಲೆ ಅನುಗ್ರಹ ಉಳಿಯುತ್ತೆ. ಅವರ ಆರಾಧನೆಯು(Worship) ಕುಟುಂಬ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.
ಕುಲದೇವತೆಯನ್ನು ಪೂಜಿಸೋದರಿಂದ ಕುಟುಂಬ ಸದಸ್ಯರ ನಡುವೆ ಏಕತೆ ಮತ್ತು ಸಾಮರಸ್ಯ(Bonding) ಹೆಚ್ಚಾಗುತ್ತೆ. ಅಷ್ಟೇ ಅಲ್ಲ, ಹೊಸದಾಗಿ ಮದುವೆಯಾದ ದಂಪತಿಗಳು ಕುಲ ದೇವಿ ಮತ್ತು ದೇವತೆಯ ದರ್ಶನ ಪಡೆದ್ರೆ, ಅವರ ಸಂಬಂಧದಲ್ಲಿ ಯಾವಾಗಲೂ ಸಾಮರಸ್ಯವಿರಲಿದೆ ಎಂಬ ನಂಬಿಕೆಯಿದೆ.
ಕುಲದೇವತೆಯನ್ನು ಹೇಗೆ ಪೂಜಿಸಲಾಗುತ್ತೆ?: ಕುಲದೇವತೆಯನ್ನು ಪೂಜಿಸುವ ಅಭ್ಯಾಸವು ಬೇರೆ ಬೇರೆ ಸಮುದಾಯಗಳಲ್ಲಿ ವಿಭಿನ್ನವಾಗಿದೆ ಮತ್ತು ಎಲ್ಲಾ ಕುಲಗಳ ದೇವರು ಮತ್ತು ದೇವತೆಗಳು ಸಹ ವಿಭಿನ್ನವಾಗಿದ್ದಾರೆ. ಕುಲದ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಯಾವುದೇ ವಿವಾಹ ಸಮಾರಂಭಕ್ಕೆ ಇವರನ್ನು ಆಹ್ವಾನಿಸೋದು ಮತ್ತು ಇವರ ಆಶೀರ್ವಾದವನ್ನು(Blessings) ಪಡೆಯೋದು ಕಡ್ಡಾಯವೆಂದು ಪರಿಗಣಿಸಲಾಗಿದೆ.
ಕುಲದೇವಿ ಅಥವಾ ಕುಲದೇವತೆಯನ್ನು ನಮ್ಮ ರಾಜವಂಶದ ರಕ್ಷಕನೆಂದು ಪರಿಗಣಿಸಲಾಗಿದೆ, ಆದ್ದರಿಂದ ಮಗುವಿನ ಜನನದ(New born) ನಂತರ, ಅವನ ಆರೋಗ್ಯವು ಯಾವಾಗಲೂ ಉತ್ತಮವಾಗಿರಲು ಮತ್ತು ಜೀವನದಲ್ಲಿ ಯಾವುದೇ ಸಮಸ್ಯೆಯಾಗದಂತೆ ಇರಲು ಮಗುವನ್ನು ದರ್ಶನಕ್ಕೆ ಕರೆದೊಯ್ಯಬೇಕು ಎಂದು ಹೇಳಲಾಗುತ್ತೆ.
ಕುಲದೇವಿ ಅಥವಾ ಕುಲದೇವತೆ ಏಕೆ ಇದ್ದಾರೆ? ಇವರ ಪೂಜೆ ಏಕೆ ಮುಖ್ಯ?: ಕುಲದೇವಿಯು ಒಂದು ನಿರ್ದಿಷ್ಟ ಕುಟುಂಬ ಅಥವಾ ಕುಲದ ಆದಿ ದೇವಿಯಾದ ದೇವತೆ. ಆ ಕುಲದೇವಿಗಳನ್ನು ಪೂಜಿಸುವಾಗ, ಅವಳ ವಿಗ್ರಹವನ್ನು(Idol) ಪೂಜಿಸಲಾಗುತ್ತೆ. ಕುಲದೇವತೆಯನ್ನು ಆ ಕುಲದ ದೇವತೆಯಾಗಿ ಪೂಜಿಸಲಾಗುತ್ತೆ. ಅವರನ್ನು ಆ ಕುಲದ ಪ್ರಾಚೀನ ದೇವತೆ ಎಂದು ಪರಿಗಣಿಸಲಾಗುತ್ತೆ.
ಯಾವುದೇ ಕುಲದ ದೇವರ ನಿರ್ಣಯವು ನಮ್ಮ ಪೂರ್ವಜರ ಕಾಲದಿಂದಲೂ ನಡೆಯುತ್ತಿದೆ. ಆ ಸಮಯದಲ್ಲಿ, ಅವರ ಆಯ್ಕೆಯ ಉದ್ದೇಶವೆಂದರೆ ಕುಲದೇವಿ ಮತ್ತು ಕುಲದೇವತೆ ಮೂಲಕ ಕುಲದ ಎಲ್ಲಾ ಜನರು(People) ತಮ್ಮ ಸಂದೇಶವನ್ನು ದೇವರಿಗೆ ತಿಳಿಸುತ್ತಾರೆ, ಪೂರ್ವಜರು ಸೂಕ್ತವಾದ ಕುಲದೇವತೆ ಅಥವಾ ಕುಲದೇವಿಯನ್ನು ಆಯ್ಕೆ ಮಾಡಿದ್ದರು ಮತ್ತು ಅವರನ್ನು ಪೂಜಿಸುವ ಅಭ್ಯಾಸವನ್ನು ಪ್ರಾರಂಭಿಸಿದ್ದರು. ಅದನ್ನೇ ನಾವು ಇಂದಿಗೂ ಪೂಜಿಸಿಕೊಂಡು ಬರುತ್ತೇವೆ.
ಕುಲದೇವತೆಯ ಪೂಜೆಯಿಲ್ಲದೆ ಶುಭ ಸಮಾರಂಭ ಅಪೂರ್ಣವೆಂದು ಪರಿಗಣಿಸಲಾಗುತ್ತೆ: ಕುಲದೇವಿ ಅಥವಾ ಕುಲದೇವತೆಯನ್ನು ಕುಟುಂಬ ಅಥವಾ ಕುಲದ ರಕ್ಷಕ ಎಂದು ಪರಿಗಣಿಸಲಾಗುತ್ತೆ ಮತ್ತು ಯಾವುದೇ ಶುಭ ಸಂದರ್ಭವನ್ನು ಅವರ ಪ್ರಾರ್ಥನೆಯಿಲ್ಲದೆ(Prayer) ಪೂರ್ಣವೆಂದು ಪರಿಗಣಿಸಲಾಗೋದಿಲ್ಲ. ಕುಲದೇವತೆ ಕೆಲವು ಕಾರಣಗಳಿಗಾಗಿ ಕೋಪಗೊಂಡರೆ, ಕುಟುಂಬದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತೆ ಮತ್ತು ಮಾಡಿದ ಕೆಲಸವೂ ಹದಗೆಡಬಹುದು ಎಂದು ನಂಬಲಾಗಿದೆ.