Asianet Suvarna News Asianet Suvarna News

ವಯಸ್ಸಾದರೂ ನಿಮ್ಮ ಮಗಳಿಗೆ ಮದುವೆ ಆಗಿಲ್ಲವೆ?: ಈ ವಾಸ್ತು ಪ್ರಕಾರ ಸಮಸ್ಯೆ ಬಗೆಹರಿಸಿ, ಕಂಕಣ ಭಾಗ್ಯ ತನ್ನಿ...

ಮದುವೆ ಎಂಬುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ.ಇದು ಜೀವನದ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಇನ್ನು ಮದುವೆಯ ವಯಸ್ಸಾದರೂ ಕೆಲವರಿಗೆ ಮದುವೆ ನಡೆಯುವುದಿಲ್ಲ. ಅದಕ್ಕೆ ಕೆಲ ಕಾರಣಗಳು ಇವೆ.
 

Astro Vastu Tips for Marriage and Relationship suh
Author
First Published Jun 3, 2023, 12:27 PM IST

ಮದುವೆ ಎಂಬುದು ಸ್ವರ್ಗ (heaven)ದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಹುಟ್ಟು, ಸಾವು ಹಾಗೂ ಮದುವೆ ಈ ಮೂರು ದೇವರ ಇಚ್ಛೆ. ಮದುವೆ (marriage)ಎರಡು ಜೀವಗಳನ್ನು ಒಟ್ಟಿಗೆ ಬೇಸೆಯುವ ಸುಂದರ ಬಂಧ. ಇದು ಜೀವನದ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಮದುವೆ ಆಗಬೇಕು. ಮದುವೆಯ ನಿರ್ಧಾರ (decision) ತೆಗೆದುಕೊಳ್ಳುವಲ್ಲಿ ಆತುರಪಡಬಾರದು. ಹಾಗೂ ತಡವಾಗಿ ಕೂಡ ಮದುವೆ ಆಗಬಾರದು ಎನ್ನುತ್ತಾರೆ. ಆದರೆ ಮದುವೆಯ ವಯಸ್ಸಾದರೂ ಕೆಲವರಿಗೆ ಮದುವೆ ನಡೆಯುವುದಿಲ್ಲ. ಅದಕ್ಕೆ ಕೆಲ ಕಾರಣಗಳು ಇವೆ.

ಸರಿಯಾದ ಸಮಯಕ್ಕೆ ಮದುವೆ ಆದರೆ ಒಳ್ಳೆಯ ಸಂಗಾತಿ (life partner) ಸಿಗಬಹುದು. ಆದರೆ ಕಾಲಕ್ರಮೇಣ ವಯಸ್ಸು ಕಳೆದಂತೆ ಜೀವನ ಸಂಗಾತಿಯನ್ನು ಹುಡುಕುವುದು ಕಷ್ಟವಾಗುತ್ತದೆ. ದಾಂಪತ್ಯದಲ್ಲಿ ಹಲವು ಬಾರಿ ನಾನಾ ಅಡೆತಡೆ (obstruction)ಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ವಾಸ್ತುಶಾಸ್ತ್ರವು ಕೆಲವು ಪರಿಹಾರಗಳನ್ನು ಸೂಚಿಸಿದೆ. ಪರಿಹಾರಗಳು ಯಾವುವು ಎಂದು ನೋಡೋಣ ಬನ್ನಿ.

1. ನಿಮ್ಮ ಮನೆಯಲ್ಲಿ ಹುಡುಗಿ (girl)ಇದ್ದರೆ ಮದುವೆ ವಯಸ್ಸಾದ ಮೇಲೂ ಮದುವೆ ನಡೆಯದೇ ಇದ್ದರೆ, ಹುಡುಗಿಯ ಕೋಣೆ ಪಶ್ಚಿಮ ದಿಕ್ಕಿ (West direction)ನಲ್ಲಿರಲಿ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಹುಡುಗಿಗೆ ಬೇಗ ಮದುವೆ ((marriage)) ಆಗುತ್ತದೆ ಎಂದು ನಂಬಲಾಗಿದೆ.

2. ಕೋಣೆಯ ದಿಕ್ಕು ಇಲ್ಲದೆ ತಾಜಾ ಗಾಳಿ (fresh air) ಮತ್ತು ಸೂರ್ಯನ ಬೆಳಕು ಇರುವಲ್ಲಿ ಕೊಠಡಿ ಇರಬೇಕು. ಕೋಣೆ ಯಲ್ಲಿ ಕಿಟಕಿ(window)ಗಳಿರುವುದು ತುಂಬಾ ಮಂಗಳಕರ. ಈ ಕುರಿತು ಹುಡುಗಿಯ ಕೋಣೆ (room)ಯನ್ನು ಬದಲಿಸಬೇಕು.

3. ಲ್ಯಾಪ್‌ಟಾಪ್, ಟಿವಿಯಂತಹ ಎಲೆಕ್ಟ್ರಾನಿಕ್ (Electronic)ವಸ್ತುಗಳನ್ನು ಹುಡುಗಿಯ ಮಲಗುವ ಕೋಣೆಯಲ್ಲಿ ಇಡಬಾರದು. ಕೋಣೆಗೆ ಪ್ರವೇಶಿಸುವ ಮೊದಲು, ಬೂಟುಗಳು (shoes)ಮತ್ತು ಚಪ್ಪಲಿಗಳನ್ನು ತೆಗೆದುಹಾಕಿ.

Ambubachi Mela: ಈ ದೇವಿಯ ಮುಟ್ಟಿನ ದಿನಗಳ ಹಬ್ಬಕ್ಕೆ ಹರಿದು ಬರುವ ಸಾಧುಸಂತರು!

 

4. ಮಲಗುವಾಗ ಹಾಸಿಗೆ (Bed)ಯ ಮೇಲೆ ಗುಲಾಬಿ ಬಣ್ಣದ ಬೆಡ್‌ ಶೀಟ್‌ನ್ನು ಬಳಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದರೊಂದಿಗೆ ಹಾಗೇ ಹುಡುಗಿ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ಕೆಂಪು ಬಟ್ಟೆ (red clothes) ಯನ್ನು ಧರಿಸಬೇಕು.

5. ಯಾವುದೇ ಶುಭ ಸಂದರ್ಭ (Good occasion)ದಲ್ಲಿ ಪಾರ್ವತಿ ಮತ್ತು ಶಿವನ ವಿವಾಹದ ಚಿತ್ರವನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಒಳ್ಳೆಯ ಸುದ್ದಿ ಕೇಳುವರು.

6. ಅನೇಕ ಬಾರಿ ಜಾತಕ (Horoscope) ದೋಷಗಳು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನಿಮ್ಮ ಕುಟುಂಬ (family)ದಲ್ಲಿ ವಯಸ್ಸಿನ ಹೊರತಾಗಿಯೂ ಮದುವೆಯಾಗದ ಮಗು ಇದ್ದರೆ, ಮಕ್ಕಳು ಶುಕ್ರವಾರ (Friday)ಉಪವಾಸ ಮಾಡಬೇಕು.

ವಟ ಪೂರ್ಣಿಮಾ 2023: ಈ ದಿನ ವಟ ಸಾವಿತ್ರಿ ವ್ರತ ಆಚರಿಸಿ, ಪತಿಯ ಆಯಸ್ಸು ...

 

7.ತಮ್ಮ ಕುಂಡಲಿಯಲ್ಲಿ ಮಂಗಳದೋಷವನ್ನು ಹೊಂದಿರುವವರು, ಕುಟುಂಬದವರು ಹುಡುಗಿಯ ಕೋಣೆಯ ಬಾಗಿಲು (door೦ ಗಳನ್ನು ಗಾಢವಾದ ಕೆಂಪು ಮತ್ತು ಗುಲಾಬಿ ಬಣ್ಣಗಳಿಂದ ಚಿತ್ರಿಸಲು ಸಲಹೆ ನೀಡುತ್ತಾರೆ ಏಕೆಂದರೆ ಇದು ದೋಷದ ನಕಾರಾತ್ಮಕ (Negative) ಪರಿಣಾಮವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ.

25 ವರ್ಷ (25 years) ದಾಟಿದ ಮೇಲೆ ಸಾಮಾನ್ಯವಾಗಿ ಮದುವೆಯ ಒತ್ತಡ ಬರಲು ಶುರುವಾಗುತ್ತದೆ. ಮದುವೆಯ ನಿರ್ಧಾರವು ತುಂಬಾ ವೈಯಕ್ತಿಕ (Personal)ವಾಗಿದ್ದು, ಆದರೆ ಅದನ್ನು ಸರಿಯಾದ ಸಮಯಕ್ಕೆ ಆಗಬೇಕು. ನಿಮ್ಮ ಮನೆಯಲ್ಲಿ ಯಾರಾದರೂ ಮದುವೆ ಆಗದಿದ್ದರೆ ಈ ಮೇಲಿನ ಅಂಶಗಳನ್ನು ಪಾಲಿಸಿ…

Follow Us:
Download App:
  • android
  • ios