- Home
- Astrology
- Festivals
- ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಪ್ರೀತಿಸಿದವರನ್ನು ಬಿಟ್ಟುಕೊಡಲ್ಲ; ಇವರು ಲೈಫಲ್ಲಿ ಬರಬೇಕಂದ್ರೆ ಅದೃಷ್ಟ ಬೇಕು
ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಪ್ರೀತಿಸಿದವರನ್ನು ಬಿಟ್ಟುಕೊಡಲ್ಲ; ಇವರು ಲೈಫಲ್ಲಿ ಬರಬೇಕಂದ್ರೆ ಅದೃಷ್ಟ ಬೇಕು
ಈ ದಿನಾಂಕಗಳಂದು ಜನಿಸಿದವರ ಮೇಲೆ ಶನಿ ಗ್ರಹದ ಪ್ರಭಾವವಿರುತ್ತದೆ. ಈ ಸಂಖ್ಯೆಯ ಹುಡುಗಿಯರು ಶಿಸ್ತುಬದ್ಧರು, ಕಷ್ಟಪಟ್ಟು ದುಡಿಯುವವರು ಮತ್ತು ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಇವರು ತಮ್ಮ ನಿರ್ಧಾರಗಳಲ್ಲಿ ದೃಢವಾಗಿದ್ದು, ವೃತ್ತಿಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ಸಂಖ್ಯಾಶಾಸ್ತ್ರ ಏನು ಹೇಳುತ್ತೆ?
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ವ್ಯಕ್ತಿತ್ವದ ಬಗ್ಗೆ ವಿಶೇಷ ಸಂಕೇತಗಳನ್ನು ನೀಡುತ್ತದೆ. ಹುಟ್ಟಿದ ದಿನಾಂಕ ನಮ್ಮ ಆಲೋಚನೆ, ಗುಣ, ಭವಿಷ್ಯದ ದಿಕ್ಕನ್ನು ಪ್ರಭಾವಿಸುತ್ತೆ ಅಂತ ನಂಬಲಾಗಿದೆ. ಅದ್ರಲ್ಲಿ 8ನೇ ಸಂಖ್ಯೆಯನ್ನು ಶಕ್ತಿಶಾಲಿ ಸಂಖ್ಯೆ ಅಂತ ಪರಿಗಣಿಸಲಾಗುತ್ತದೆ.
ಯಾರಿಗೆ 8ನೇ ಸಂಖ್ಯೆ ಅನ್ವಯಿಸುತ್ತೆ?
ಯಾವುದೇ ತಿಂಗಳ 8, 17 ಅಥವಾ 26ನೇ ತಾರೀಖಿನಂದು ಹುಟ್ಟಿದವರನ್ನು ಸಂಖ್ಯಾಶಾಸ್ತ್ರದಲ್ಲಿ ನಂಬರ್ 8ರ ವ್ಯಕ್ತಿಗಳೆಂದು ಗುರುತಿಸಲಾಗುತ್ತೆ. ಈ ಸಂಖ್ಯೆಯ ಮೇಲೆ ಶನಿ ಗ್ರಹದ ಪ್ರಭಾವವಿರುತ್ತೆ. ಹೀಗಾಗಿ ಈ ಹುಡುಗಿಯರು ಧೈರ್ಯವಂತರು, ಶಿಸ್ತುಬದ್ಧರು ಹಾಗೂ ಕಷ್ಟಪಟ್ಟು ದುಡಿಯುವ ಸ್ವಭಾವದವರು
ನಂಬರ್ 8
ಯಾವುದೇ ತಿಂಗಳ 8, 17 ಅಥವಾ 26ನೇ ತಾರೀಖಿನಂದು ಹುಟ್ಟಿದವರನ್ನು ಸಂಖ್ಯಾಶಾಸ್ತ್ರದಲ್ಲಿ ನಂಬರ್ 8ರ ವ್ಯಕ್ತಿಗಳೆಂದು ಗುರುತಿಸಲಾಗುತ್ತೆ. ಈ ಸಂಖ್ಯೆಯ ಮೇಲೆ ಶನಿ ಗ್ರಹದ ಪ್ರಭಾವವಿರುತ್ತೆ. ಹೀಗಾಗಿ ಈ ಹುಡುಗಿಯರು ಧೈರ್ಯವಂತರು, ಶಿಸ್ತುಬದ್ಧರು ಹಾಗೂ ಕಷ್ಟಪಟ್ಟು ದುಡಿಯುವ ಸ್ವಭಾವದವರು.
ಸಂಬಂಧಗಳಲ್ಲಿ ಹೇಗಿರುತ್ತಾರೆ?
ಈ ಸಂಖ್ಯೆಯ ಹುಡುಗಿಯರು ಪ್ರಾಮಾಣಿಕತೆ ಮತ್ತು ನಂಬಿಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ನಕಲಿ ವ್ಯವಹಾರ, ಮೋಸ, ಹೊಗಳುಭಟರನ್ನು ಇಷ್ಟಪಡಲ್ಲ. ಯಾರನ್ನಾದ್ರೂ ತಮ್ಮ ಜೀವನಕ್ಕೆ ಸೇರಿಸಿಕೊಳ್ಳುವ ಮುನ್ನ ತುಂಬಾ ಯೋಚಿಸ್ತಾರೆ. ಒಮ್ಮೆ ನಂಬಿದ್ರೆ, ಜೀವನಪೂರ್ತಿ ಜೊತೆಗಿರುತ್ತಾರೆ. ಇಂಥವರು ಸಂಗಾತಿಯಾಗಿ ಸಿಗಬೇಕಂದ್ರೆ ಅದೃಷ್ಟ ಮಾಡಿರಬೇಕು.
ಇದನ್ನೂ ಓದಿ: ಸಂಖ್ಯಾಶಾಸ್ತ್ರದ ಪ್ರಕಾರ 2026ರ ಅದೃಷ್ಟ ಸಂಖ್ಯೆಗಳು ಇವು
ವೃತ್ತಿ ಜೀವನ
ನಂಬರ್ 8ರ ಹುಡುಗಿಯರು ನಿರ್ಧರಿಸಿದ್ದನ್ನು ಪಟ್ಟುಹಿಡಿದು ಸಾಧಿಸುತ್ತಾರೆ. ಅಡೆತಡೆಗಳಿಗೆ ಹೆದರಲ್ಲ. ಆಡಳಿತ, ಕಾನೂನು, ಹಣಕಾಸು, ನಾಯಕತ್ವ, ಶಿಕ್ಷಣ ಕ್ಷೇತ್ರಗಳಲ್ಲಿ ಯಶಸ್ಸು ಕಾಣುತ್ತಾರೆ.
ಗಮನಿಸಿ: ಇದು ಅಂತರ್ಜಾಲದ ಮಾಹಿತಿ ಆಧರಿಸಿದೆ, ವೈಜ್ಞಾನಿಕ ಆಧಾರವಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: Name-Based Astrology: ಚಂದ್ರನು ಸಿಂಹ ರಾಶಿಗೆ ಪ್ರವೇಶ- ನಿಮ್ಮ ಹೆಸರಿನ ಮೊದಲಕ್ಷರಲ್ಲಿ ಅಡಗಿದೆ ನಾಳೆಯ ಭವಿಷ್ಯ!

