- Home
- Astrology
- Festivals
- ಈ ರಾಶಿಯವರನ್ನ ಮದ್ವೆಯಾದ್ರೆ ಬದಲಾಗುತ್ತೆ ಅದೃಷ್ಟ; ಇವರು ಪ್ರೀತಿಯ ಸಂಕೇತ, ಮೋಸ-ಕಪಟ ಗೊತ್ತಿರಲ್ಲ
ಈ ರಾಶಿಯವರನ್ನ ಮದ್ವೆಯಾದ್ರೆ ಬದಲಾಗುತ್ತೆ ಅದೃಷ್ಟ; ಇವರು ಪ್ರೀತಿಯ ಸಂಕೇತ, ಮೋಸ-ಕಪಟ ಗೊತ್ತಿರಲ್ಲ
Kannada Marriage Astrology" ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಈ 5 ರಾಶಿಯವರನ್ನು ಮದುವೆಯಾಗುವುದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ.

ಯಾವ ರಾಶಿ?
ಜ್ಯೋತಿಷ್ಯದ ಪ್ರಕಾರ, ಪ್ರತಿ ರಾಶಿಯವರಿಗೂ ವಿಭಿನ್ನ ಗುಣಗಳಿರುತ್ತವೆ. ಕೆಲವರು ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಅಂತಹ ಪ್ರೀತಿಯುಳ್ಳ ಸಂಗಾತಿಯನ್ನು ಪಡೆಯಲು ಅದೃಷ್ಟ ಬೇಕು. ಹಾಗಾದ್ರೆ, ಯಾವ ರಾಶಿಯವರನ್ನು ಮದುವೆಯಾದರೆ ಅದೃಷ್ಟವಂತರು ಆಗುತ್ತಾರೆಂದು ನೋಡೋಣ.
ವೃಷಭ ರಾಶಿ
ಶುಕ್ರನು ಆಳುವ ವೃಷಭ ರಾಶಿಯವರು ಪ್ರೀತಿಗೆ ಇನ್ನೊಂದು ಹೆಸರು. ಇವರು ಶಾಂತಿಯುತ, ಸಂತೋಷದ ಜೀವನ ನಡೆಸಲು ಇಷ್ಟಪಡುತ್ತಾರೆ. ತಮ್ಮ ಜೀವನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಇವರನ್ನು ಮದುವೆಯಾದರೆ ನೀವೇ ಅದೃಷ್ಟವಂತರು.
ಕರ್ಕಾಟಕ ರಾಶಿ
ಚಂದ್ರನು ಆಳುವ ಕರ್ಕಾಟಕ ರಾಶಿಯವರು ಯಾವಾಗಲೂ ಸಕಾರಾತ್ಮಕ ಚಿಂತನೆ ಹೊಂದಿರುತ್ತಾರೆ. ಮೋಸ, ನಟನೆ ಇವರಿಗೆ ಬರುವುದಿಲ್ಲ. ತಮ್ಮ ಸುತ್ತಮುತ್ತಲಿನವರ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಹಾಗಾಗಿ, ಈ ರಾಶಿಯವರನ್ನು ಮದುವೆಯಾದರೆ ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ.
ಧನು ರಾಶಿ
ಗುರು ಗ್ರಹವು ಧನು ರಾಶಿಯನ್ನು ಆಳುತ್ತದೆ. ಈ ರಾಶಿಯವರು ವೈವಾಹಿಕ ಜೀವನದಲ್ಲಿ ತಮ್ಮ ಸಂಗಾತಿಗೆ ಅಪಾರ ಪ್ರೀತಿ ನೀಡುತ್ತಾರೆ. ಕುಟುಂಬ ಜೀವನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತಮ್ಮ ಜೀವನಕ್ಕೆ ಬಂದ ವ್ಯಕ್ತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ತುಲಾ ರಾಶಿ
ಶುಕ್ರನು ತುಲಾ ರಾಶಿಯನ್ನೂ ಆಳುತ್ತಾನೆ. ಹಾಗಾಗಿ, ತುಲಾ ರಾಶಿಯವರು ತಾಳ್ಮೆಯಿಂದ ಇರುತ್ತಾರೆ. ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ತಾವು ಬಯಸಿದ ಸಂಗಾತಿಯನ್ನು ಹುಡುಕಲು ಇಷ್ಟಪಡುತ್ತಾರೆ. ತಮ್ಮನ್ನು ಪ್ರೀತಿ, ನಂಬಿಕೆಯಿಂದ ನೋಡಿಕೊಳ್ಳಬೇಕೆಂದು ಬಯಸುತ್ತಾರೆ.
ಇದನ್ನೂ ಓದಿ: ಶನಿಯಿಂದಾಗಿ ಜುಲೈ 26, 2026 ರವರೆಗೆ ಅಪಾರ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಪ್ರಗತಿ
ಮಕರ ರಾಶಿ
ಶನಿ ಆಳುವ ಮಕರ ರಾಶಿಯವರು ಶಿಸ್ತಿನ ಜೀವನ ನಡೆಸಲು ಬಯಸುತ್ತಾರೆ. ಸಂಬಂಧಗಳಲ್ಲಿ ನಂಬಿಕೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತಪ್ಪು ಮಾಡಿದವರನ್ನು ಕ್ಷಮಿಸುವ ಗುಣ ಇವರಿಗಿದೆ. ಹಾಗಾಗಿ, ಮಕರ ರಾಶಿಯವರನ್ನು ಮದುವೆಯಾದವರು ಅದೃಷ್ಟವಂತರು.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಮಂಗಳ - ಗುರು ಯೋಗ, ಅನಿರೀಕ್ಷಿತ ಅದೃಷ್ಟ ಜನವರಿ ವರೆಗೆ ಈ ರಾಶಿಗೆ ಹಣವೇ ಹಣ

