ಶನಿಯಿಂದಾಗಿ ಜುಲೈ 26, 2026 ರವರೆಗೆ ಅಪಾರ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಪ್ರಗತಿ
ಶನಿಯು ನೇರ ಚಲನೆ ಆರಂಭಿಸಲಿದ್ದು, ಇದರ ಧನಾತ್ಮಕ ಪ್ರಭಾವವು ಜುಲೈ 26, 2026 ರವರೆಗೆ ಇರಲಿದೆ. ಈ ಅವಧಿಯಲ್ಲಿ 3 ರಾಶಿಯವರಿಗೆ ಅಪಾರ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಸ್ಥಗಿತಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಶನಿ ಮಾರ್ಗ 2025
ಶನಿ ಮಾರ್ಗ 2025: ನ್ಯಾಯದ ದೇವರು ಮತ್ತು ಕರ್ಮಫಲ ನೀಡುವ ಶನಿದೇವನ ಚಲನೆಯಲ್ಲಿ ಪ್ರಮುಖ ಬದಲಾವಣೆ ಸಂಭವಿಸಲಿದೆ. ಶನಿಯ ನೇರ ಚಲನೆಯಿಂದ ಜುಲೈ 26, 2026 ರವರೆಗೆ ಕೆಲವು ರಾಶಿಗಳ ಮೇಲೆ ಅಪಾರ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಬೆಳವಣಿಗೆ ಕಾಣಲಿದೆ. ರಾಶಿಚಕ್ರಗಳ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡುತ್ತವೆ. ಇಷ್ಟು ಮಾತ್ರವಲ್ಲ ಸ್ಥಗಿತಗೊಂಡ ಕೆಲಸಗಳು ಪೂರ್ಣವಾಗುತ್ತವೆ.
ಅತ್ಯಧಿಕ ಲಾಭ
ಶನಿ ಮೀನರಾಶಿಯಲ್ಲಿ ಹಿಮ್ಮುಖವಾಗಿತ್ತು. ನವೆಂಬರ್ 28ರ ಬೆಳಗ್ಗೆ 9:20 ಕ್ಕೆ ನೇರ ರಾಶಿಯಾಗಿದ್ದಾನೆ. ನೇರ ರಾಶಿಗೆ ಬದಲಾದ ನಂತರ ಶನಿಯು ತನ್ನ ಸಂಪೂರ್ಣ ಶಕ್ತಿಯನ್ನು ಪೂರ್ಣಗೊಳಿಸುತ್ತಾನೆ. ಇದರಿಂದ ಮೂರು ರಾಶಿಯವರಿಗೆ ಅತ್ಯಧಿಕ ಲಾಭಗಳು ಸಿಗಲಿವೆ. ನೇರ ರಾಶಿಯ ಚಲನೆಯ ಧನಾತ್ಮಕ ಪರಿಣಾಮಗಳು ಜುಲೈ 26, 2026 ರವರೆಗೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಮಕರ ರಾಶಿ
ಶನಿ ಮಕರ ರಾಶಿಯ ನೇರವಾಗಿ ಮೂರನೇ ಮನೆಗೆ (ಶೌರ್ಯ, ಸಹೋದರರು) ಚಲಿಸುತ್ತಾನೆ. ಈ ಸ್ಥಾನವು ಮಕರ ರಾಶಿಯವರಿಗೆ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳೋದರ ಜೊತೆಯಲ್ಲಿ ಆರ್ಥಿಕ ಪರಿಸ್ಥಿತಿ ಗಮನಾರ್ಹ ಸುಧಾರಣೆಯಾಗುತ್ತದೆ. ಹಳೆಯ ಹೂಡಿಕೆಗಳಿಂದ ಲಾಭಗಳನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ಬಾಕಿ ಉಳಿದಿರುವ ಹಣ ಮರಳಿ ಪಡೆಯಬಹುದಾಗಿದೆ.
ಶನಿಯ ನೇರ ಚಲನೆಯಿಂದಾಗಿ ಮಕರ ರಾಶಿಯವರಿಗೆ ಒಡಹುಟ್ಟಿದವರು ಮತ್ತು ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಕುಟುಂಬದ ವಾತಾವರಣ ಆಹ್ಲಾದಕರವಾಗಿರುತ್ತದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಬಲಗೊಳ್ಳುತ್ತವೆ.
ಮೀನ ರಾಶಿ
ಮೀನ ರಾಶಿಚಕ್ರದ ಮೊದಲ ಮನೆಯಲ್ಲಿ ಶನಿ ನೇರವಾಗಿ ಇರುತ್ತಾನೆ. ಪ್ರಸ್ತುತ ಸಾಡೇ ಸಾತಿಯ ಮೊದಲ ಹಂತ ಅನುಭವಿಸುತ್ತಿದ್ದರೂ, ಈ ಸಮಯದಲ್ಲಿ ನೇರ ಶನಿಯು ಗಮನಾರ್ಹ ಪರಿಹಾರವನ್ನು ನೀಡುತ್ತಾನೆ.
* ಹೊಸ ಆದಾಯದ ಮೂಲಗಳ ರಚನೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಹೂಡಿಕೆಗೆ ಸೂಕ್ತ ಸಮಯ
* ವೃತ್ತಿ ಜೀವನದಲ್ಲಿ ಅಡೆತಡೆ ನಿವಾರಣೆ, ಕೆಲಸದಲ್ಲಿ ಪ್ರಗತಿ, ಬಡ್ತಿ ಸಾಧ್ಯತೆ
* ಆತ್ಮವಿಶ್ವಾಸ ಹೆಚ್ಚಳ, ಮಾನಸಿಕ ಒತ್ತಡ ನಿವಾರಣೆ, ದೀರ್ಘಕಾಲದ ಸಮಸ್ಯೆಗಳ ನಿವಾರಣೆ
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ, ಶನಿಯು ಒಂಬತ್ತನೇ ಮನೆಯಲ್ಲಿ (ಭಾಗ್ಯದ ಮನೆ) ನೇರವಾಗಿ ತಿರುಗುತ್ತಿದ್ದಾನೆ. ಈ ಸ್ಥಾನವು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.
* ಹಠಾತ್ ಆರ್ಥಿಕ ಲಾಭದ ಸಾಧ್ಯತೆ, ಪೂರ್ವಜರ ಆಸ್ತಿ ಲಭ್ಯತೆ
* ಕೆಲಸದಲ್ಲಿ ಪ್ರಮುಖ ಯಶಸ್ಸು, ಸ್ಥಳಾಂತರ ಅಥವಾ ಬಡ್ತಿ ಸಾಧ್ಯತೆ, ವ್ಯವಹಾರ ವಿಸ್ತರಣೆ
* ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಳ.
* ತಂದೆ ಮತ್ತು ಶಿಕ್ಷಕರಿಂದ ಬೆಂಬಲ ಸಿಗುತ್ತದೆ
* ವಿದೇಶಾಂಗ ವ್ಯವಹಾರಗಳಲ್ಲಿ ಯಶಸ್ಸು
ಇದನ್ನೂ ಓದಿ:
ಇತರ ರಾಶಿಚಕ್ರ ಚಿಹ್ನೆಗಳ ಶನಿಯ ಸಂಚಾರದ ಲಾಭಗಳು
ವೃಷಭ ರಾಶಿ: ಆದಾಯದಲ್ಲಿ ಹೆಚ್ಚಳ.
ಮಿಥುನ ರಾಶಿ: ವೃತ್ತಿ ಪ್ರಗತಿ
ಕುಂಭ ರಾಶಿ: ಆರ್ಥಿಕ ಬಲ
ಇದನ್ನೂ ಓದಿ: Numerology Secrets: ಯಾರನ್ನಾದ್ರೂ ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳೋ ಜನರು ಹುಟ್ಟಿರುವ ದಿನಾಂಕಗಳು

