ಜುಲೈ 16ರ ನಂತ್ರ 3 ರಾಶಿಗಳ ಜೀವನ ಬದಲು; ಸೂರ್ಯ-ಚಂದ್ರ ಸಂಯೋಗದಿಂದ ರಾಶಿ ಪರಿವರ್ತನ ಯೋಗ
ಜ್ಯೋತಿಷ್ಯದ ಪ್ರಕಾರ, ಜುಲೈ 16 ರಂದು ಸೂರ್ಯ ಮತ್ತು ಚಂದ್ರನ ಸಂಯೋಗದಿಂದ 'ರಾಶಿ ಪರಿವರ್ತನ ಯೋಗ' ಉಂಟಾಗಲಿದೆ. ಈ ಯೋಗದಿಂದಾಗಿ 3 ರಾಶಿಯವರ ಜೀವನವೇ ಬದಲಾಗಲಿದೆ. ಆ ಅದೃಷ್ಟದ ಮಳೆಯಲ್ಲಿ ಮಿಂದೇಳಲಿರುವ 3 ರಾಶಿಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

ಗ್ರಹ ಸಂಚಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಜುಲೈ ತಿಂಗಳು ಬಹಳ ಮುಖ್ಯವಾಗಿದೆ. ಈ ತಿಂಗಳು ನಡೆಯುವ ಗ್ರಹ ಸಂಚಾರಗಳಿಂದ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಇದರ ಪರಿಣಾಮ ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ಮೇಲೂ ಇರುತ್ತೆ. ಆದರೂ, ಕೆಲವು ನಿರ್ದಿಷ್ಟ ರಾಶಿಯವರಿಗೆ ಇದು ಸುವರ್ಣಕಾಲವಾಗಲಿದೆ.
ರಾಶಿ ಪರಿವರ್ತನ ಯೋಗ
ಈ ಹಿನ್ನೆಲೆಯಲ್ಲಿ, ಬರುವ ಜುಲೈ 16 ಜ್ಯೋತಿಷ್ಯದ ದೃಷ್ಟಿಯಿಂದ ಒಂದು ಪ್ರಮುಖ ದಿನ. ಅಂದು ಸೂರ್ಯ ಮತ್ತು ಚಂದ್ರ ಗ್ರಹಗಳು ಒಂದೇ ಸಮಯದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಸೂರ್ಯನು ಕರ್ಕಾಟಕ ರಾಶಿಗೆ ಮತ್ತು ಚಂದ್ರನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ 'ರಾಶಿ ಪರಿವರ್ತನ ಯೋಗ' ಉಂಟಾಗುತ್ತದೆ. ಜ್ಯೋತಿಷ್ಯದಲ್ಲಿ ಈ ಗ್ರಹಗಳ ವಿನಿಮಯವನ್ನು ಅತ್ಯಂತ ಅಪರೂಪದ ಮತ್ತು ಶಕ್ತಿಶಾಲಿ ಘಟನೆ ಎಂದು ಪರಿಗಣಿಸಲಾಗಿದೆ. ಈ ಅಪೂರ್ವ ಯೋಗದಿಂದಾಗಿ ಭಾರಿ ಬೆಳವಣಿಗೆ ಮತ್ತು ಅದೃಷ್ಟವನ್ನು ಪಡೆಯಲಿರುವ 3 ರಾಶಿಯವರು ಯಾರು ಎಂದು ನೋಡೋಣ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಪರಿವರ್ತನ ಯೋಗವು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತದೆ. ಸಂಬಳ ಹೆಚ್ಚಳ ಅಥವಾ ಬಯಸಿದ ಬಡ್ತಿಯಂತಹ ಸಕಾರಾತ್ಮಕ ಫಲಗಳು ನಿಮ್ಮನ್ನು ಹುಡುಕಿ ಬರುತ್ತವೆ. ಕೆಲಸದ ಹೊರೆ ಕಡಿಮೆಯಾಗಿ ನೆಮ್ಮದಿ ಹೆಚ್ಚುತ್ತದೆ. ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಲಿದೆ. ಮಗುವಿಗಾಗಿ ಕಾಯುತ್ತಿರುವ ದಂಪತಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಮಾನಸಿಕ ಒತ್ತಡಗಳು ದೂರವಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ. ಆಧ್ಯಾತ್ಮಿಕ ಪ್ರಯಾಣಗಳನ್ನು ಕೈಗೊಳ್ಳಲು ನೀವು ಆಸಕ್ತಿ ತೋರಿಸುತ್ತೀರಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಸೂರ್ಯನ ಪ್ರವೇಶ ಮತ್ತು ಚಂದ್ರನ ಸಂಚಾರವು ಈ ರಾಶಿಯವರಿಗೆ ಯೋಗಕಾರಕವಾಗಲಿದೆ. ಈ ಸಮಯದಲ್ಲಿ ನಿಮ್ಮ ಚೈತನ್ಯ ಮತ್ತು ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಹಣಕಾಸಿನ ಲಾಭ ಕೈಸೇರಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಾರೆ. ಸಹೋದರರಿಂದ ಲಾಭ ಮತ್ತು ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ. ಆರೋಗ್ಯ ಸುಧಾರಿಸಿ, ನೀವು ಉಲ್ಲಾಸದಿಂದ ಇರುತ್ತೀರಿ.
ಮೇಷ ರಾಶಿ
ಸೂರ್ಯ-ಚಂದ್ರರ ಪರಿವರ್ತನ ಯೋಗವು ಮೇಷ ರಾಶಿಯವರಿಗೆ ಅನೇಕ ಸಕಾರಾತ್ಮಕ ತಿರುವುಗಳನ್ನು ನೀಡಲಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಶುಭ ಸುದ್ದಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಖಚಿತ. ಹೊಸ ವ್ಯಾಪಾರ ಆರಂಭಿಸುವ ನಿಮ್ಮ ಪ್ರಯತ್ನಗಳಿಗೆ ನಿರೀಕ್ಷೆಗಿಂತ ಉತ್ತಮ ಫಲ ಸಿಗಲಿದೆ. ಕುಟುಂಬ ಸಂಬಂಧಗಳಲ್ಲಿದ್ದ ಮನಸ್ತಾಪಗಳು ದೂರವಾಗಿ, ಸಂತೋಷ ಮತ್ತು ನೆಮ್ಮದಿ ನೆಲೆಸುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಇರುವುದರಿಂದ, ಕೈ ಹಾಕಿದ ಕೆಲಸಗಳೆಲ್ಲಾ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ.

