ಸಂಜೆ 7 ಗಂಟೆ 24 ನಿಮಿಷಕ್ಕೆ ಸಿಂಹ ರಾಶಿಗೆ ಬುಧನ ಪ್ರವೇಶ: 5 ರಾಶಿಗೆ ನೆಮ್ಮದಿ, ಅದೃಷ್ಟ
ಇಂದು ಸಂಜೆ ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಈ ಸಂಚಾರವು ಕೆಲವು ನಿರ್ದಿಷ್ಟ ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಈ ಬದಲಾವಣೆಯಿಂದಾಗಿ 5 ರಾಶಿಯವರಿಗೆ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಕೌಟುಂಬಿಕ ಜೀವನದಲ್ಲಿ ಶುಭ ಫಲಗಳು ಕಾದಿವೆ.
16

Image Credit : Gemini
ರಾಶಿಗಳ ಮೇಲೆ ಧನಾತ್ಮಕ ಪರಿಣಾಮ
ಇಂದು ಸಂಜೆ 7 ಗಂಟೆ 24 ನಿಮಿಷಕ್ಕೆ ಬುಧ ಗ್ರಹ ಸೂರ್ಯನ ರಾಶಿಯಾದ ಸಿಂಹ ಪ್ರವೇಶ ಮಾಡಲಿದೆ. ಈ ಚಲನೆಯಿಂದ ಕೆಲವು ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಯಾವೆಲ್ಲಾ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ ಬನ್ನಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
Image Credit : SOCIAL MEDIA
ಮೇಷ ರಾಶಿ
- ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಅಂದ್ರೆ ಸಂಬಳ ಏರಿಕೆ, ಆದಾಯದ ಮೂಲಗಳ ಸಂಖ್ಯೆ ಹೆಚ್ಚಳ
- ಕೆಲಸ ಮಾಡುವ ಸ್ಥಳದಲ್ಲಿ ವಿಶೇಷ ಗೌರವ, ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ.
- ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಮತ್ತು ಪ್ರಶಂಸೆ
- ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಮೊದಲ ಆದ್ಯತೆ
- ವ್ಯಾಪಾರಿಗಳಿಗೆ ಹೊಸ ಒಪ್ಪಂದ ಮತ್ತು ಉದ್ಯಮದ ವಿಸ್ತರಣೆ
36
Image Credit : SOCIAL MEDIA
ಸಿಂಹ ರಾಶಿ
- ಆತ್ಮವಿಶ್ವಾಸ ಹೆಚ್ಚಳ, ದೃಢ ನಿರ್ಧಾರ ಮೇಲಾಧಿಕಾರಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತೀರಿ
- ನಿಮ್ಮ ನೇತೃತ್ವದಲ್ಲಿಯೇ ಪ್ರಮುಖವಾದ ಕೆಲಸಗಳು ನಡೆಯಲಿವೆ
- ಉದ್ಯೋಗದಲ್ಲಿ ಬಡ್ತಿ ಜೊತೆ ಹೊಸ ಅವಕಾಶಗಳು ಸೃಷ್ಟಿ
- ವ್ಯಾಪಾರಿಗಳಿಗೆ ಹೆಚ್ಚಿನ ಗ್ರಾಹಕರಿಂದು ನಿರೀಕ್ಷಿತಕ್ಕಿಂತ ಅಧಿಕ ಆದಾಯ
46
Image Credit : OTHERS
ತುಲಾ ರಾಶಿ
- ದೀರ್ಘಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳಿಗೆ ಪುನಃ ಚಾಲನೆ ಸಿಗಲಿದೆ
- ದೊಡ್ಡಮಟ್ಟದ ಲಾಭ ನೀಡುವ ಯೋಜನೆಗಳ ಜೊತೆ ಒಪ್ಪಂದ ಸಾಧ್ಯತೆ
- ಉದ್ಯೋಗಿಗಳಿಗೆ ಹೊಸ ಅವಕಾಶಗಳು ಬರಲಿವೆ
- ಮೇಲಾಧಿಕಾರಿಗಳಿಂದ ಮೆಚ್ಚುಗೆ ಮತ್ತು ಭವಿಷ್ಯದಲ್ಲಿ ಲಾಭ ಸಿಗುವ ಕೆಲಸ
56
Image Credit : OTHERS
ಧನು ರಾಶಿ
- ಶಿಕ್ಷಣ, ಮಾಧ್ಯಮ, ಕಲೆ ಸೇರಿದಂತೆ ರಚನಾತ್ಮಕ ವಿಭಾಗಗಳಲ್ಲಿ ಕೆಲಸ ಮಾಡೋರಿಗೆ ಅದೃಷ್ಟ
- ವೃತ್ತಿ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ
- ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ
- ಹೆಚ್ಚುವರಿ ಜವಾಬ್ದಾರಿ, ಕುಟುಂಬದಲ್ಲಿ ನೆಮ್ಮದಿ
66
Image Credit : OTHERS
ಮಿಥುನ ರಾಶಿ
- ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ
- ನಿಮ್ಮ ಅಭಿಪ್ರಾಯಗಳು ಪರಿಣಾಮಕಾರಿಯಾಗಿ ಪ್ರಭಾವ ಬೀರಲಿವೆ
- ವೃತ್ತಿಜೀವನದಲ್ಲಿ ಮಹತ್ವದ ಬೆಳವಣಿಗೆ, ಮೇಲಧಿಕಾರಿಗಳಿಂದ ಬೆಂಬಲ
- ನಿಮ್ಮ ದಕ್ಷತೆಗೆ ಹೊಸ ಮತ್ತು ಹೆಚ್ಚು ಜವಾಬ್ದಾರಿ ಸಿಗಲಿದೆ.
- ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
Latest Videos

