Astrology: ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ, 4 ರಾಶಿಗಳಿಗೆ ಅದೃಷ್ಟದ ಮಳೆ
ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಸಿಂಹ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದೆ. ಇದರಿಂದ 4 ರಾಶಿಯವರಿಗೆ ಆರ್ಥಿಕ ಪ್ರಗತಿ, ಉದ್ಯೋಗಾವಕಾಶ ಹಾಗೂ ಅದೃಷ್ಟ ಒಲಿಯಲಿದೆ.

Gajakesari Yoga
ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಸಿಂಹ ರಾಶಿಯಲ್ಲಿ ಗುರು-ಚಂದ್ರರ ಸಂಯೋಗ ನಡೆಯಲಿದೆ. ಇದರಿಂದ ಕೆಲವು ರಾಶಿಯವರು ಆರ್ಥಿಕ ಪ್ರಗತಿ, ಉದ್ಯೋಗಾವಕಾಶ, ವ್ಯಾಪಾರದಲ್ಲಿ ಬೆಳವಣಿಗೆ ಮತ್ತು ಕುಟುಂಬದಲ್ಲಿ ಸಂತೋಷದಂತಹ ಸಕಾರಾತ್ಮಕ ಫಲಗಳನ್ನು ಪಡೆಯಲಿದ್ದಾರೆ. ಚಂದ್ರನು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ದಿನಗಳು ಮಾತ್ರ ಇರುವುದರಿಂದ, ಈ ಸಂಯೋಗದ ಅವಧಿ ಚಿಕ್ಕದಾಗಿರುತ್ತದೆ. ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಈ ಯೋಗದ ಪ್ರಭಾವ ಇರಲಿದೆ ಎಂದು ಅಂದಾಜಿಸಲಾಗಿದೆ.
ಕಟಕ ರಾಶಿ - ಪ್ರಗತಿ
ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಹಣ ಕೈಸೇರುವ ಅವಕಾಶಗಳು ಸೃಷ್ಟಿಯಾಗಲಿವೆ.
ಆದಾಯ ಹೆಚ್ಚಿಸಲು ಹೊಸ ಅವಕಾಶಗಳು ಸಿಗಲಿವೆ. ಬಾಕಿ ಉಳಿದಿದ್ದ ಹಣ ವಾಪಸ್ ಬರುವ ಸಾಧ್ಯತೆ ಇದೆ.
ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ಮತ್ತು ಒಪ್ಪಂದಗಳು ಸಿಗಲಿವೆ.
ಕುಟುಂಬದಲ್ಲಿ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.
ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.
ಧನಸ್ಸು ರಾಶಿ - ಅದೃಷ್ಟ ಮತ್ತು ಪ್ರಗತಿ
ಬಹಳ ದಿನಗಳಿಂದ ಕಾಯುತ್ತಿದ್ದ ಕೆಲವು ಸಿಹಿ ಸುದ್ದಿಗಳು ಸಿಗಬಹುದು. ನಿಂತುಹೋಗಿದ್ದ ಪ್ರಯತ್ನಗಳಲ್ಲಿ ಪ್ರಗತಿ ಕಾಣಲಿದೆ.
ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ವಿದೇಶಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಅನುಕೂಲಕರ ವಾತಾವರಣವಿದೆ.
ವ್ಯಾಪಾರ ವಿಸ್ತರಿಸುವ ಪ್ರಯತ್ನಗಳು ಫಲ ನೀಡಲಿವೆ. ಹೊಸ ಸಂಪರ್ಕಗಳ ಮೂಲಕ ಬೆಳವಣಿಗೆ ಸಾಧ್ಯ.
ದೇವಾಲಯಗಳ ದರ್ಶನ, ಆಧ್ಯಾತ್ಮಿಕ ಪ್ರಯಾಣ ಮತ್ತು ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಮೇಷ ರಾಶಿ - ಪ್ರಯತ್ನಗಳಲ್ಲಿ ಯಶಸ್ಸು
ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಗಮನಹರಿಸಿ ಉತ್ತಮ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಲ್ಲಿ ಆತ್ಮವಿಶ್ವಾಸ
ಹೊಸ ಆದಾಯದ ಮೂಲಗಳು ಸಿಗಬಹುದು. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಈಗ ತಕ್ಕ ಫಲ ಸಿಗುವ ವಾತಾವರಣ
ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಅವಕಾಶ, ಪ್ರತಿಭೆ ಪ್ರದರ್ಶಿಸಲು ವೇದಿಕೆ
ಮಕ್ಕಳಿಗೆ ಸಂಬಂಧಿಸಿದಂತೆ ಸಂತೋಷದ ಸುದ್ದಿ
ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ
ಸಿಂಹ ರಾಶಿ
ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶ, ಕೆಲಸದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿ/ಬಡ್ತಿ ಯೋಗ
ವ್ಯವಹಾರದಲ್ಲಿ ಹೊಸ ಪ್ರಯತ್ನಗಳನ್ನು ಮಾಡಲು ಆಸಕ್ತಿ, ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಉತ್ತಮ ಬದಲಾವಣೆಗಳು ಆಗಲಿವೆ.
ಆದಾಯ ಹೆಚ್ಚಿಸುವ ಮಾರ್ಗಗಳು ಗೋಚರಿಸಲಿವೆ. ಉಳಿತಾಯದ ಕಡೆ ಗಮನಹರಿಸುವ ಮೂಲಕ ಭವಿಷ್ಯದ ಆರ್ಥಿಕ ಸ್ಥಿತಿಯನ್ನು ಭದ್ರಪಡಿಸಿಕೊಳ್ಳಬಹುದು.
ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ಪ್ರಮುಖ ಕೆಲಸಗಳನ್ನು ಮರುಪ್ರಾರಂಭಿಸಲು ಅವಕಾಶಗಳು ಸೃಷ್ಟಿ















