ಮಂಗಳ ಗೋಚರ 2026: ಇಂದಿನಿಂದ 5 ರಾಶಿಗಳ ಜೀವನ ಬದಲು; ಪರಿಶ್ರಮಕ್ಕೆ ಸಿಗಲಿದೆ ಶುಭ ಫಲ
ಆಗಸ್ಟ್ 2 ರಿಂದ ಮಂಗಳ ಗ್ರಹವು ಮಿಥುನ ರಾಶಿಗೆ ಪ್ರವೇಶಿಸಲಿದ್ದು, ಸೆಪ್ಟೆಂಬರ್ 18 ರವರೆಗೆ ಅಲ್ಲಿಯೇ ಇರುತ್ತದೆ. ಈ ಮಂಗಳ ಗೋಚರವು 5 ರಾಶಿಯವರ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಲಿದೆ.

Mangala Gochara
ಇಂದಿನಿಂದ ಅಂದ್ರೆ ಆಗಸ್ಟ್ 2ರಿಂದ ಮಂಗಳ ಗ್ರಹ ಬುಧನ ರಾಶಿಯಾದ ಮಿಥುನ ರಾಶಿಗೆ ಸಾಗುತ್ತದೆ. ಇಂದಿನಿಂದ ಸೆಪ್ಟೆಂಬರ್ 18ರವರೆಗೆ ಮಂಗಳ ಗ್ರಹ ಮಿಥುನ ರಾಶಿಯಲ್ಲಿರುತ್ತಾನೆ. ಈ ಚಲನೆ ನಾಲ್ಕು ರಾಶಿ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ, ಆ ನಾಲ್ಕು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
ಧನು ರಾಶಿ
ಮಂಗಳ ತನ್ನದೇ ರಾಶಿ ಸಪ್ತಮ ಭಾವದಲ್ಲಿ ಗೋಚರವಾಗಲಿದೆ. ಈ ಗೋಚರತೆ ವ್ಯಾಪಾರ ಮತ್ತು ಪಾಲುದಾರಿಕೆಯಂತಹ ವಿಷಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಂಗಳ ಗೋಚರದಿಂದ ಹೊಸ ವೃತ್ತಿ ಅವಕಾಶಗಳು, ವ್ಯವಹಾರ ವಿಸ್ತರಣೆ ಸಾಧ್ಯತೆಗಳಿವೆ. ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಅಥವಾ ಕಲಹಗಳು ಬಗೆಹರಿಯುತ್ತವೆ. ಮಾತುಗಳ ಮೇಲೆ ನಿಗಾ ಇರಲಿ.
ಮಿಥುನ ರಾಶಿ
ಮಂಗಳ ಈ ಚಲನೆಯಿಂದಾಗಿ ಶಕ್ತಿ, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಮಿಥುನ ರಾಶಿಯವರಿಗೆ ವಿಶೇಷವಾದ ಮನ್ನಣೆ ಸಿಗಲಿದೆ. ಆರೋಗ್ಯ ಸುಧಾರಣೆಯೊಂದಿಗೆ ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳುತ್ತದೆ. ಇದರಿಂದ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ.
ಮೇಷ ರಾಶಿ
ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಕಠಿಣ ಪರಿಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಸಿಗಲಿದ್ದು, ಅಲ್ಪ ದೂರದ ಪ್ರಯಾಣದ ಅವಕಾಶ ಒದಗಿ ಬರಲಿದೆ. ನೀವು ಮಾಡುವ ಕೆಲಸಗಳಲ್ಲಿ ಸಹೋದರರಿಂದ ಸಂಪೂರ್ಣವಾದ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮೂಲಗಳು ಸಿಗಲಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು.
ಕನ್ಯಾ ರಾಶಿ
ಈ ರಾಶಿಯವರ ವೃತ್ತಿಜೀವನ ಸಕ್ರಿಯವಾಗುತ್ತದೆ. ಮಾಡುವ ಕೆಲಸದ ಸ್ಥಳದಲ್ಲಿ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಅವಕಾಶ ಲಭ್ಯವಾಗುತ್ತದೆ. ಮೇಲಾಧಿಕಾರಿಗಳಿಂದ ಹೊಸ ಜವಾಬ್ದಾರಿಗಳು ಸಿಗಲಿದ್ದು, ಇದರಿಂದ ಆದಾಯ ಪರಿಸ್ಥಿತಿ ಸುಧಾರಣೆಯಾಗುತ್ತದೆ. ದೀರ್ಘಕಾಲದ ಕಠಿಣ ಪರಿಶ್ರಮಕ್ಕೆ ಸಕಾರಾತ್ಮಕ ಫಲಲಿತಾಂಶಗಳು ಸಿಗಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಸಿಂಹ ರಾಶಿ
ಆದಾಯ ಹೆಚ್ಚಳಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಜೊತೆ ಹೆಚ್ಚುವರಿ ಕೆಲಸದ ಮೇಲಸ್ತುವಾರಿ ನಿಮ್ಮದಾಗಲಿದೆ. ಪ್ರಭಾವಿ ಜನರ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ಆಸ್ತಿ ಅಥವಾ ವಾಹನ ಖರೀದಿಗೆ ಇದು ಸೂಕ್ತ ಸಮಯವಾಗಲಿದೆ. ಹೂಡಿಕೆ ವಿಷಯಗಳು ನಿಮಗೆ ಲಾಭವನ್ನು ನೀಡಲಿವೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

