ಬೆರಳು ಈ ರೀತಿ ಇದ್ದರೆ, ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗುತ್ತಂತೆ !
ಹಸ್ತ ಸಾಮುದ್ರಿಕದಲ್ಲಿ ಬೆರಳುಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ. ನಿಮ್ಮ ಬೆರಳಿನ ಆಕಾರ ಮತ್ತು ಅದರ ರಚನೆ ಮತ್ತು ಅವುಗಳ ಮೇಲಿನ ಗುರುತುಗಳನ್ನು ನೋಡುವ ಮೂಲಕ ನೀವು ಬಹಳಷ್ಟು ತಿಳಿದುಕೊಳ್ಳಬಹುದು. ನೀವು ವ್ಯಾಪಾರ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಬೆರಳಿನ ವಿನ್ಯಾಸದಿಂದ ತಿಳಿದುಕೊಳ್ಳಬಹುದು ಎಂದು ಹಸ್ತ ಸಾಮುದ್ರಿಕಶಾಸ್ತ್ರದಲ್ಲಿ ತಿಳಿಸಲಾಗಿದೆ. ವ್ಯವಹಾರದಲ್ಲಿ ಯಾರು ನಷ್ಟವನ್ನು ಅನುಭವಿಸಬಹುದು ಎಂಬುದನ್ನು ಸಹ ಬೆರಳು ನೋಡುವ ಮೂಲಕವೂ ತಿಳಿಯಬಹುದು.
ಬೆರಳುಗಳಿಂದ(Fingers) ವ್ಯಕ್ತಿಯ ವ್ಯವಹಾರವು ಹೇಗೆ ಇರುತ್ತೆ ಎಂದು ತಿಳಿಯಿರಿ
ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ನೀವು ಕೈಗಳ ರೇಖೆಗಳಿಂದ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಕಲಿಯೋದು ಮಾತ್ರವಲ್ಲದೆ, ಬೆರಳುಗಳ ಆಕಾರದಿಂದ ನಿಮ್ಮ ವಿಶೇಷ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಎಲ್ಲಿ ಲಾಭವಾಗಬಹುದು ಮತ್ತು ಎಲ್ಲಿ ಹಾನಿಯಾಗಬಹುದು ಎಂದು ಬೆರಳು ನೋಡುವ ಮೂಲಕ ನೀವು ತಿಳಿದುಕೊಳ್ಳಬಹುದು.
ವ್ಯಕ್ತಿಗಳ ಕೈಗಳಲ್ಲಿ ಕಂಡುಬರುವ ಬೆರಳುಗಳು, ಸಣ್ಣ ಮತ್ತು ದೊಡ್ಡ, ವಕ್ರ, ತೆಳ್ಳಗಿನ, ಇತ್ಯಾದಿ, ಇದರಿಂದ ನೀವು ವ್ಯಕ್ತಿಯ ಸಂಪೂರ್ಣ ವಿಷಯ ತಿಳಿದುಕೊಳ್ಳಬಹುದು. ಅಂತಹ ಬೆರಳು ಯಾರದ್ದಾದರೂ ಕೈಯಲ್ಲಿ(Hand) ಕಂಡುಬಂದರೆ, ಅವರು ವ್ಯವಹಾರದಲ್ಲಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಇವರಿಗೆ ಮಹತ್ವಾಕಾಂಕ್ಷೆಯ ಕೊರತೆಯಿದೆ
ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ವ್ಯಕ್ತಿಯ ಉಂಗುರ ಬೆರಳು ತೋರುಬೆರಳಿಗಿಂತ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ಕಲೆ ಮತ್ತು ಸಾಹಿತ್ಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾನೆ ಆದರೆ ಅವರಲ್ಲಿ ಮಹತ್ವಾಕಾಂಕ್ಷೆಯ ಕೊರತೆ ಇದೆ. ಈ ಕಾರಣದಿಂದಾಗಿ ಅವರು ಯಶಸ್ವಿ ಫಲಿತಾಂಶ(Failure) ಪಡೆಯೋದಿಲ್ಲ. ಹಾಗೆಯೇ, ಉಂಗುರ ಬೆರಳು ಮತ್ತು ತೋರುಬೆರಳು ಸಮಾನವಾಗಿದ್ದರೆ, ಅಂತಹ ವ್ಯಕ್ತಿಯು ಸಾಕಷ್ಟು ಹಣ ಮತ್ತು ಗೌರವವನ್ನು ಪಡೆಯುತ್ತಾನೆ.
ಇಂತಹ ಜನರು ತುಂಬಾ ದುಃಖಿತರಾಗುತ್ತಾರೆ(Sad)
ವ್ಯಕ್ತಿಯ ಮಧ್ಯದ ಬೆರಳು ತೋರುಬೆರಳಿಗಿಂತ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ತುಂಬಾ ದುಃಖಿತನಾಗಿರುತ್ತಾನೆ ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅವರ ನಿರ್ಧಾರಗಳಿಂದಾಗಿ, ಅವರೇ ಮಾಡಿದ ಕೆಲಸ ಹಾಳಾಗುತ್ತದೆ ಮತ್ತು ಮನೆ ಮತ್ತು ಕುಟುಂಬವನ್ನು ಸಹ ತೊರೆಯುತ್ತಾರೆ.
ವ್ಯಕ್ತಿಯ ಮಧ್ಯದ ಬೆರಳು ತೋರುಬೆರಳಿಗಿಂತ ತುಂಬಾ ಚಿಕ್ಕದಾಗಿದ್ದರೆ, ಅದನ್ನು ಸರಿ ಎಂದು ಪರಿಗಣಿಸಲಾಗೋದಿಲ್ಲ. ಅಂತಹ ವ್ಯಕ್ತಿಯು ಹೆಚ್ಚು ಅರ್ಹತೆ ಹೊಂದಿರೋದಿಲ್ಲ ಮತ್ತು ಹೆಚ್ಚಾಗಿ ಅವನು ಮಾತಿನಲ್ಲೇ(Talk) ಅರಮನೆ ಕಟ್ಟುವವನಾಗಿರುತ್ತಾನೆ.
ಹಾಗೆಯೇ, ಈ ಎರಡು ಬೆರಳುಗಳು ಸಮಾನವಾಗಿದ್ದರೆ, ಅಂತಹ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತಾನೆ(Success) ಮತ್ತು ತನ್ನ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಆತ ಪ್ರತಿಷ್ಠೆ ಗಳಿಸುವ ಮೂಲಕ ತನ್ನ ಆಸೆಗಳನ್ನು ಪೂರೈಸಿಕೊಳ್ಳುತ್ತಾನೆ.
ಇಂತಹ ವ್ಯಕ್ತಿಯು ತುಂಬಾ ಕಷ್ಟಪಡುತ್ತಾನೆ(Hard work)
ಮಧ್ಯದ ಬೆರಳು ಉಂಗುರದ ಬೆರಳಿಗೆ ಸಮನಾಗಿದ್ದರೆ, ಅಂತಹ ವ್ಯಕ್ತಿಯು ತಪ್ಪು ವಿಷಯಗಳಲ್ಲಿ ಹೆಚ್ಚು ಸಿಕ್ಕಿಹಾಕಿಕೊಳ್ಳುತ್ತಾನೆ ಮತ್ತು ಮನಸ್ಸು ಸಹ ಈ ಎಲ್ಲಾ ವಿಷಯಗಳಲ್ಲಿ ಚಲಿಸುತ್ತೆ. ಮಧ್ಯದ ಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿದ್ದರೆ, ಅಂತಹ ವ್ಯಕ್ತಿಯು ವ್ಯಾಪಾರ ಮಾಡುತ್ತಾನೆ ಆದರೆ ಲಾಭದ ಭರವಸೆ ಇರೋದಿಲ್ಲ. ಅವರ ನಡವಳಿಕೆ ಸಹ ಇತರ ಜನರಿಗಿಂತ ಭಿನ್ನವಾಗಿರುತ್ತೆ, ಈ ಕಾರಣದಿಂದಾಗಿ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಾರೆ.
ಇವರು ಮಿಶ್ರ ಫಲಿತಾಂಶ(Mixed result) ಪಡೆಯುತ್ತಾರೆ
ಉಂಗುರ ಬೆರಳು ಮಧ್ಯದ ಬೆರಳಿಗಿಂತ ತುಂಬಾ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾನೆ. ಇವರು ಮಾಡುವ ವ್ಯವಹಾರ ಅಥವಾ ಕೆಲಸದಲ್ಲಿ ಒಂದೋ ಹೆಚ್ಚು ಲಾಭ ಅಥವಾ ಹೆಚ್ಚು ನಷ್ಟದ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ, ಉಂಗುರ ಬೆರಳು ಮತ್ತು ಕಿರಿಯ ಬೆರಳು ಒಂದೇ ಗಾತ್ರದಲ್ಲಿದ್ದರೆ, ಅಂತಹ ವ್ಯಕ್ತಿಯು ತನ್ನ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾನೆ.