ಹಸ್ತ ರೇಖೆ ಹೇಳುತ್ತೆ ನಿಮ್ಮ ಭವಿಷ್ಯ, ಗೆರೆಗಳೇ ಇಲ್ಲ ಅಂದ್ರೇನರ್ಥ?
ನಮ್ಮ ಹಸ್ತದಲ್ಲಿ ನಮ್ಮ ಭವಿಷ್ಯ ಅಡಗಿದೆ. ಅದ್ರಲ್ಲಿರುವ ರೇಖೆ ನಮ್ಮ ಸ್ವಭಾವ, ನಮ್ಮ ಆಯಸ್ಸು ಸೇರಿದಂತೆ ನಮ್ಮ ಜೀವನದ ಪ್ರಮುಖ ವಿಷ್ಯಗಳನ್ನು ಬಹಿರಂಗೊಡಿಸುತ್ತದೆ. ಕೆಲವರ ಹಸ್ತದಲ್ಲಿ ರೇಖೆಗಳೇ ಸರಿಯಾಗಿ ಕಾಣೋದಿಲ್ಲ. ಹಾಗಿದ್ರೆ ಇದು ಅಶುಭವಾ?.

ಹಸ್ತ ಮುದ್ರಿಕಾ ಶಾಸ್ತ್ರ
ಹಸ್ತ ಮುದ್ರಿಕಾ ಶಾಸ್ತ್ರದಲ್ಲಿ ಅಂಗೈನ ರೇಖೆಗಳು ಮಹತ್ವದ ಪಾತ್ರವಹಿಸುತ್ತವೆ. ಪ್ರತಿಯೊಬ್ಬರ ಕೈ ರೇಖೆ ಭಿನ್ನವಾಗಿರುತ್ತದೆ. ನಮ್ಮ ಕೈನ ಪ್ರತಿಯೊಂದು ರೇಖೆ ನಮ್ಮ ಜೀವನದ ಪ್ರತಿಯೊಂದ ಘಟ್ಟದ ಜೊತೆ ಸಂಬಂಧ ಹೊಂದಿದೆ. ನಮ್ಮ ಆರ್ಥಿಕ ಸ್ಥಿತಿ, ದಾಂಪತ್ಯ, ಮಕ್ಕಳು, ಆಯಸ್ಸು, ಆರೋಗ್ಯ ಸೇರಿದಂತೆ ಸ್ವಭಾವದ ಬಗ್ಗೆ ಇದು ತಿಳಿಸುತ್ತದೆ. ಹಸ್ತ ನೋಡಿ ಅನೇಕ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ.
ರೇಖೆ ಇಲ್ಲದ ಹಸ್ತ
ಕೆಲವರ ಕೈನಲ್ಲಿ ರೇಖೆಗಳು ಅಸ್ಪಷ್ಟವಾಗಿರುತ್ತವೆ. ಸ್ಪಷ್ಟವಾಗಿ ಯಾವುದೇ ರೇಖೆ ಕಾಣಿಸೋದಿಲ್ಲ. ಕೇವಲ ಒಂದು ಬಿಂದು ಇರೋದಿದೆ. ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಇದು ಅಶುಭವಲ್ಲ. ಇದನ್ನು ಶುಭವೆಂದೇ ನಂಬಲಾಗುತ್ತದೆ.
ವ್ಯಕ್ತಿತ್ವ ಹೇಗಿರುತ್ತದೆ?
ಅಸ್ಪಷ್ಟ ಅಥವಾ ರೇಖೆಗಳಿಲ್ಲದ ಹಸ್ತ ಹೊಂದಿರುವ ವ್ಯಕ್ತಿ ಕಠಿಣ ಪರಿಶ್ರಮಿಯಾಗಿರುತ್ತಾನೆ. ಅವನ ಆಲೋಚನೆಗಳು ಸ್ಪಷ್ಟವಾಗಿರುತ್ತವೆ. ಯಾವುದೇ ವ್ಯಕ್ತಿ ಅಥವಾ ಸಂದರ್ಭಗಳು ಇವರನ್ನು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ. ಇವರು ಅದೃಷ್ಟಕ್ಕಿಂತ ಹೆಚ್ಚಾಗಿ ತಮ್ಮ ಕಠಿಣ ಪರಿಶ್ರಮವನ್ನು ನಂಬುತ್ತಾರೆ. ಪ್ರತಿಯೊಂದು ಸವಾಲನ್ನು ಎದುರಿಸುತ್ತಾರೆ.
ಸರಳ ಸ್ವಭಾವ
ಹಸ್ತದಲ್ಲಿ ಕಡಿಮೆ ರೇಖೆ ಇರುವ ಅಥವಾ ಅಸ್ಪಷ್ಟ ರೇಖೆ ಹೊಂದಿರುವ ವ್ಯಕ್ತಿ ಸ್ವಭಾವವು ತುಂಬಾ ಸರಳವಾಗಿರುತ್ತದೆ. ಅವರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಅನವಶ್ಯಕ ಗಲಾಟೆಯನ್ನು ತಪ್ಪಿಸುತ್ತಾರೆ. ತಮ್ಮ ಕೆಲ್ಸದಲ್ಲಿ ಸದಾ ಬ್ಯುಸಿಯಾಗಿರುವ ಇವರು ಬೇರೆಯವರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ರೇಖೆ ಯಾಕಿರೋದಿಲ್ಲ?
ನಮ್ಮ ಅಂಗೈಯಲ್ಲಿರುವ ರೇಖೆಗಳ ಸಂಖ್ಯೆಗೆ ನಮ್ಮ ಮೆದುಳು ಕಾರಣ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. ಮೆದುಳನ್ನು ಹೆಚ್ಚಾಗಿ ಬಳಸುವವರ ಅಂಗೈಗಳಲ್ಲಿ ಹೆಚ್ಚಿನ ರೇಖೆಗಳಿರುತ್ತವೆ. ಆದರೆ ಕಡಿಮೆ ಬಾರಿ ಮೆದುಳನ್ನು ಬಳಸುವವರ ಅಂಗೈಗಳಲ್ಲಿ ಕಡಿಮೆ ರೇಖೆಗಳಿರುತ್ತವೆ. ಇದರರ್ಥ ಚಿಂತನಶೀಲರು ಅಥವಾ ಬೌದ್ಧಿಕ ಅನ್ವೇಷಣೆಗಳಲ್ಲಿ ತೊಡಗಿರುವ ಜನರು ತಮ್ಮ ಅಂಗೈಗಳಲ್ಲಿ ಹೆಚ್ಚಿನ ರೇಖೆಗಳನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.
ಹಸ್ತದಲ್ಲಿರುವ ಪ್ರಮುಖ ರೇಖೆ
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಮೂರು ರೇಖೆಗಳನ್ನು ಹೊಂದಿರುತ್ತಾನೆ. ಜೀವನ ರೇಖೆ, ಮಿದುಳಿನ ರೇಖೆ ಮತ್ತು ಹೃದಯ ರೇಖೆ. ಈ ಮೂರು ರೇಖೆಗಳು ಒಬ್ಬ ವ್ಯಕ್ತಿಯು ತನ್ನ ಭವಿಷ್ಯದ ಬಗ್ಗೆ ಬಹಳಷ್ಟು ತಿಳಿಯಲು ಸಹಾಯ ಮಾಡುತ್ತದೆ.

