ಹೆಂಡ್ತಿಗೆ ಈ 5 ಗಿಫ್ಟ್ ಕೊಟ್ಟರೆ… ಲಕ್ಷ್ಮೀ ಕೃಪೆಯಿಂದ ನೀವು ಕೋಟ್ಯಾಧಿಪತಿಗಳಾಗುತ್ತೀರಿ
ನಿಮ್ಮ ಹೆಂಡತಿಗೆ ಈ 5 ಉಡುಗೊರೆಗಳನ್ನು ನೀವು ನೀಡಿದ್ದೇ ಆದರೆ, ಶ್ರೀ ಲಕ್ಷ್ಮಿ ದೇವಿಯು ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತಾರೆ. ಹಾಗಿದ್ರೆ ಆ ಐದು ಉಡುಗೊರೆ ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ಲಕ್ಷ್ಮೀ ದೇವಿಯ ಕೃಪೆ :
ಹೆಚ್ಚಿನ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಾರೆ. ಲಕ್ಷ್ಮೀ ದೇವಿಯ ಕೃಪೆ ತಮ್ಮ ಮೇಲೆ ಇರಬೇಕು. ಜೀವನದ ಆರ್ಥಿಕ ಸಮಸ್ಯೆಗಳೆಲ್ಲಾ ದೂರ ಆಗಬೇಕು. ಜೀವನದಲ್ಲಿ ಸಂಪತ್ತು, ಧನ, ಧಾನ್ಯಗಳೆಲ್ಲಾ ತುಂಬಿರಬೇಕೆಂದು ಬಯಸುತ್ತಾರೆ. ಆದರೆ ಅವರು ತಮ್ಮ ಮನೆಯಲ್ಲಿರುವ ಲಕ್ಷ್ಮಿ ದೇವಿಯನ್ನು ಸಂತೋಷವಾಗಿಡುವುದಿಲ್ಲ.
ಹೆಂಡತಿಯನ್ನು ಸಂತೋಷವಾಗಿರಿಸಿ
ಮನೆಯಲ್ಲಿರುವ ಲಕ್ಷ್ಮೀ ಅಂದ್ರೆ ಅದು ಹೆಂಡತಿ. ಯಾವ ವ್ಯಕ್ತಿ ತನ್ನ ಹೆಂಡತಿಯನ್ನು ಸಂತೋಷವಾಗಿಡುತ್ತಾನೆಯೋ, ಅಂತವರಿಗೆ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಸಂಪತ್ತಿನ ಸುರಿಮಳೆಗೈಯುತ್ತಾಳೆ ಎಂದು ಜ್ಯೋತಿಷಿ ಹೇಳುತ್ತಾರೆ. ನಿಮ್ಮ ಪತ್ನಿಯನ್ನು ಸಂತೋಷವಾಗಿಡಬೇಕು ಅಂದ್ರೆ ನೀವು ಆಕೆಗೆ ಈ ಐದು ಉಡುಗೊರೆಗಳನ್ನು ನೀಡಬೇಕು. ಇದರಿಂದ ಹೆಂಡತಿಯೂ ಸಂತೋಷಪಡುತ್ತಾಳೆ. ಜೊತೆಗೆ ಲಕ್ಷ್ಮೀ ದೇವಿಯ ಕೃಪೆ ಕೂಡ ನಿಮ್ಮ ಮೇಲಿರುತ್ತದೆ.
ಪಾಕೆಟ್ ಮನಿ
ಮೊದಲನೇಯದಾಗಿ ನಿಮ್ಮ ಗಳಿಕೆಯ ಒಂದು ಭಾಗವನ್ನು ನಿಮ್ಮ ಹೆಂಡತಿಗೆ ಪಾಕೆಟ್ ಮನಿ ಆಗಿ ನೀಡಿ. ಇದರಿಂದ ಆಕೆ ಖಂಡಿತವಾಗಿಯೂ ಸಂತೋಷ ಪಡುತ್ತಾಳೆ. ಅಷ್ಟೇ ಅಲ್ಲ ನಿಮ್ಮ ಮನೆ ಲಕ್ಷ್ಮಿಗೆ ನಿಮ್ಮ ಸಂಬಳದ ಮೊದಲ ಹಣವನ್ನು ನೀಡುತ್ತಾ ಬಂದರೆ, ನಿಮ್ಮ ಜೀವನದಲ್ಲಿ ಹಣದ ಕೊರತೆ ಎಂದಿಗೂ ಇರೋದೆ ಇಲ್ಲ. ನೀವು ಆರ್ಥಿಕವಾಗಿ ಸಹ ಪ್ರಗತಿ ಹೊಂದುತ್ತಾ ಸಾಗುತ್ತೀರಿ.
ಪತ್ನಿಯ ಒಪ್ಪಿಗೆಯನ್ನು ಕೇಳಿ ನಿರ್ಧಾರ ತೆಗೆದುಕೊಳ್ಳಿ
ಯಾವುದೇ ದೊಡ್ಡ ಅಥವಾ ಸಣ್ಣ ನಿರ್ಧಾರ ತೆಗೆದುಕೊಳ್ಳುವಾಗ ಪತ್ನಿ ಜೊತೆ ಮೊದಲು ಮಾತನಾಡಿ. ಆಕೆಯೂ ನಿಮ್ಮ ಜೀವನದ ಒಂದು ಭಾಗವಾಗಿರೋದರಿಂದ ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ನಿಮ್ಮ ಹೆಂಡತಿಯನ್ನು ತೊಡಗಿಸಿಕೊಳ್ಳಿ. ನಿಮ್ಮ ಹೆಂಡತಿಯನ್ನು ಗೌರವಿಸಿದಾಗ ತಾಯಿ ಲಕ್ಷ್ಮೀ ದೇವಿ ಕೂಡ ನಿಮ್ಮನ್ನು ಆಶೀರ್ವದಿಸುತ್ತಾರೆ.
ಶುಕ್ರವಾರ ಸಿಹಿ ತಿನ್ನಿಸಿ
ಶುಕ್ರವಾರ ನಿಮ್ಮ ಹೆಂಡತಿಗೆ ಬಿಳಿ ಬಣ್ಣದ ಸಿಹಿತಿಂಡಿಗಳನ್ನು ತಿನ್ನಿಸಿ. ಉದಾಹರಣೆಗೆ ರಸಗುಲ್ಲ, ರಸ್ ಮಲೈ, ಬರ್ಫಿ, ಪೇಡಾ ಹೀಗೆ ಯಾವುದೇ ರೀತಿಯ ಸಿಹಿ ತಿಂಡಿಗಳನ್ನು ನೀಡಬಹುದು. ಬಿಳಿ ಬಣ್ಣದ ಸಿಹಿತಿಂಡಿಗಳು ಲಕ್ಷ್ಮೀ ದೇವಿಗೆ ತುಂಬಾನೆ ಪ್ರಿಯವಾದುವು. ಹಾಗಾಗಿ ಲಕ್ಷ್ಮೀ ದೇವಿಯಂತಿರುವ ನಿಮ್ಮ ಪತ್ನಿಗೆ ಸಿಹಿ ತಿನಿಸು ನೀಡೋದನ್ನು ಮರಿಬೇಡಿ.
ಹೆಂಡತಿಯನ್ನು ನಿಂದಿಸಬೇಡಿ
ಕೆಲವು ಗಂಡಸರಿಗೆ ಕೆಟ್ಟದಾದ ಅಭ್ಯಾಸ ಎಂದರೆ ಅದು ಪತ್ನಿಯನ್ನು ಎಲ್ಲರೆದುರು ನಿಂದಿಸುವುದು. ಅದರಿಂದ ಅವರಿಗೆ ಏನು ಖುಷಿ ಸಿಗುತ್ತೋ ಗೊತ್ತಿಲ್ಲ. ಆದರೆ ಪತ್ನಿಯನ್ನು ನಿಂದಿಸುವ ಪುರುಷನ ಜೀವನಕ್ಕೆ ಲಕ್ಷ್ಮೀ ದೇವಿ ಎಂಟ್ರಿ ಕೊಡೋದೆ ಇಲ್ಲ. ಅಷ್ಟೇ ಅಲ್ಲ, ಇದರಿಂದ ಆತ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಪತ್ನಿಯನ್ನು ಸಂತಸವಾಗಿಡಿ.
ಅಡುಗೆಮನೆ ತುಂಬಿರಲಿ
ನಿಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಸಾಮಗ್ರಿಗಳನ್ನು ಸಂಗ್ರಹಿಸಿಡಿ. ಯಾವತ್ತೂ ಯಾವುದೇ ವಸ್ತುಗಳು ಖಾಲಿಯಾಗಲು ಬಿಡಬೇಡಿ. ಇದೆಲ್ಲಾ ಹೆಂಡತಿ ಕೆಲಸ ಅಂದುಕೊಳ್ಳಬೇಡಿ. ಇದು ಇಬ್ಬರ ಜವಾಬ್ಧಾರಿಯೂ ಹೌದು, ಹಾಗಾಗಿ ಅಡುಗೆ ಮನೆಯಲ್ಲಿ ಅಕ್ಕಿ, ಉಪ್ಪು, ಸಕ್ಕರೆ, ಧವಸ ಧಾನ್ಯ ಸ್ವಲ್ಪ ಉಳಿದುಕೊಂಡಿರುವ ಸಮಯದಲ್ಲಿ ಮತ್ತೆ ತಂದು ತುಂಬಿಸಿಡಿ. ಉಪ್ಪು ಮತ್ತು ಅಕ್ಕಿಯನ್ನು ಯಾವತ್ತೂ ಖಾಲಿ ಮಾಡಲು ಬಿಡಬೇಡಿ.