Astro Tips : ಅಹಂಕಾರ ಬಿಟ್ಟು ಪತ್ನಿ ಪಾದ ಸ್ಪರ್ಶಿಸಿ .. ಕೆಲವೇ ದಿನದಲ್ಲಿ ಬದಲಾಗುತ್ತೆ ನಿಮ್ಮ ಅದೃಷ್ಟ
ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಜನರು ನಾನಾ ಕಸರತ್ತು ಮಾಡ್ತಾರೆ. ಪೂಜೆ, ಹವನಗಳ ಮೊರೆ ಹೋಗ್ತಾರೆ. ಇಷ್ಟೆಲ್ಲ ಮಾಡುವ ಬದಲು ಮನೆಯಲ್ಲಿ ನಿತ್ಯ ಒಂದು ಕೆಲಸ ಮಾಡಿದ್ರೆ ಸಾಕು. ನಿಮ್ಮ ಅದೃಷ್ಟದ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತೆ.
ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ಹಿರಿಯರು, ಸಂತರು, ಮಹಾತ್ಮರ ಪಾದಗಳನ್ನು ಸ್ಪರ್ಶಿಸುತ್ತಾರೆ. ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ. ಶಾಸ್ತ್ರಗಳ ಪ್ರಕಾರ, ಮಹಾನ್ ವ್ಯಕ್ತಿಗಳ ಪಾದಗಳನ್ನು ಸ್ಪರ್ಶಿಸುವುದರಿಂದ ನಮ್ಮ ಪುಣ್ಯವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಅವರ ಆಶೀರ್ವಾದದ ರೂಪದಲ್ಲಿ ನಮ್ಮ ದುರದೃಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಿರಿಯರ ಜೊತೆ ಪತಿಯ ಪಾದ ಸ್ಪರ್ಶಿಸಬೇಕೆಂಬ ಸಂಪ್ರದಾಯವೂ ಇದೆ. ಬಹುತೇಕ ಹೆಣ್ಣು ಮಕ್ಕಳು ಮದುವೆ ಸಮಯದಲ್ಲಿ ಪತಿಯ ಪಾದಕ್ಕೆ ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಪತಿಯ ಪಾದ ಸ್ಪರ್ಶಕ್ಕೆ ಹಿಂದೂ ಧರ್ಮದಲ್ಲಿ ಕೆಲವೊಂದು ಕಾರಣ ನೀಡಲಾಗಿದೆ. ಬರೀ ಪತ್ನಿ, ಪತಿಯ ಪಾದಕ್ಕೆ ನಮಸ್ಕರಿಸುವುದು ಮಾತ್ರವಲ್ಲ ಪತಿಯಾದವನು ಕೂಡ ಪತ್ನಿಯ ಪಾದವನ್ನು ಸ್ಪರ್ಶಿಸಬೇಕು. ಆತ ಪ್ರತಿ ದಿನ ಬೆಳಿಗ್ಗೆ ಪತ್ನಿಯ ಪಾದವನ್ನು ಸ್ಪರ್ಶಿಸಬೇಕು ಇಲ್ಲವೆ ಮಸಾಜ್ ಮಾಡಬೇಕು. ಅದಕ್ಕೆ ಕಾರಣವೇನು, ಅದ್ರಿಂದ ಲಾಭವೇನು ಎಂಬುದನ್ನು ನಾವು ಹೇಳ್ತೇವೆ.
ಪತ್ನಿ (Wife) ಯಾದವಳು ಪತಿಯ ಪಾದ (Foot) ವನ್ನು ಸ್ಪರ್ಶಿಸಿ ನಮಸ್ಕಾರ ಮಾಡುವುದರಿಂದ ಯಾವಾಗ ಮನಸ್ಸಿನಲ್ಲಿ ಭಕ್ತಿಯ ಭಾವನೆ ಬರುತ್ತದೆ. ಇದು ಅಹಂಕಾರವನ್ನು ಅಳಿಸುತ್ತದೆ. ಇದ್ರಿಂದ ಗಂಡನ ಬಗ್ಗೆ ಪತ್ನಿಗೆ ಗೌರವ ಭಾವನೆ ಇದ್ರೆ, ಪತಿಗೆ ತನ್ನ ಹೆಂಡತಿಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡುತ್ತದೆ ಎಂದು ನಂಬಲಾಗಿದೆ.
ನಾಳೆ ಶನಿದೇವನು ಹಿಮ್ಮುಖನಾಗುತ್ತಾನೆ, ಈ ರಾಶಿಗೆ ನವೆಂಬರ್ 15 ರವರೆಗೆ ಸಮಸ್ಯೆ ಕಷ್ಟ
ಇದೇ ರೀತಿ ಪತಿಯಾದವನು ಪತ್ನಿಯ ಪಾದವನ್ನು ಸ್ಪರ್ಶಿಸಬೇಕು ಇಲ್ಲವೆ ಮಸಾಜ್ ಮಾಡಬೇಕು. ಪತ್ನಿಗೆ ಮನೆ ಕೆಲಸಕ್ಕೆ ನೆರವಾದ ಪುರುಷನನ್ನು ಪತ್ನಿ ಸೇವಕ ಎಂದು ಕರೆಯುವ ಜನರಿದ್ದಾರೆ. ಇನ್ನು ಆತ ಆಕೆಯ ಕಾಲು ಸ್ಪರ್ಶಿಸಿದ್ರೆ ನೋಡಿ ನಗುವವರೇ ಹೆಚ್ಚು. ಆದ್ರೆ ಅದ್ರಲ್ಲಿರುವ ಲಾಭ ತಿಳಿದ್ರೆ ನೀವೂ ಈ ಕೆಲಸ ಮಾಡ್ತೀರಾ.
ಪತಿ ತನ್ನ ಅಹಂಕಾರ ಬಿಟ್ಟು ಪತ್ನಿಯ ಪಾದ ಸ್ಪರ್ಶಿಸಿದಾಗ ಇಬ್ಬರ ಮಧ್ಯೆ ಇರುವ ಸಂಬಂಧ ಮತ್ತಷ್ಟು ಸುಧಾರಿಸುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಮಹಿಳೆಯನ್ನು ದೇವತೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಕನ್ಯಾ ಪೂಜೆಯಲ್ಲಿ ಹೆಣ್ಣು ಮಕ್ಕಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಗಳು, ಸೊಸೆ ಮತ್ತು ಅತ್ತೆ ಇರುವ ಮನೆ ಸಂತೋಷವಾಗಿರುತ್ತೆ ಎಂದು ನಂಬಲಾಗಿದೆ. ಮನೆಯಲ್ಲಿರುವ ಮಹಿಳೆಯರಿಗೆ ಗೌರವ ನೀಡಿದ್ರೆ ಪುರುಷರ ಪ್ರತಿಯೊಂದು ಆಸೆಯೂ ಈಡೇರುತ್ತದೆ. ದೇವಾನುದೇವತೆಗಳು ಆ ಮನೆಯಲ್ಲಿ ನೆಲೆಸಿರುತ್ತಾರೆ. ಆ ಮನೆಯಲ್ಲಿ ಲಕ್ಷ್ಮಿ ನೆಲೆಗೊಳ್ಳುತ್ತಾಳಾದ್ದರಿಂದ ಮನೆಯಲ್ಲಿ ಎಂದೂ ಹಣದ ಕೊರತೆಯಾಗೋದಿಲ್ಲ.
ಅದೇ ರೀತಿ ಜೀವನದಲ್ಲಿ ಯಶಸ್ಸು ಸಿಗಬೇಕು ಎನ್ನುವ ಪುರುಷರು ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ತನ್ನ ಪತ್ನಿಯ ಪಾದವನ್ನು ಸ್ಪರ್ಶಿಸಬೇಕು. ಹಾಗೇ ಮಾಡಿದಲ್ಲಿ ಜೀವನದಲ್ಲಿ ಸುಖ, ಸಂತೋಷದ ಜೊತೆ ಏಳ್ಗೆ ಕಂಡು ಬರುತ್ತದೆ. ಪತ್ನಿಯನ್ನು ದೇವಿ ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಪತಿಯಾದವನು ಈ ಒಂದು ಕೆಲಸ ಮಾಡಿದ್ರೆ ಸಾಕು.
ಪತ್ನಿಯ ಪಾದವನ್ನು ಸ್ಪರ್ಶಿಸೋದು ಅಥವಾ ಮಸಾಜ್ ಮಾಡುವುದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಪಾದಗಳು ಶನಿಗ್ರಹದ ಜೊತೆ ಸಂಬಂಧ ಹೊಂದಿದ್ದರೆ ಕೈಗಳು ಶುಕ್ರಗ್ರಹದ ಜೊತೆ ಸಂಬಂಧ ಹೊಂದಿವೆ. ಈ ಎರಡೂ ಸ್ಪರ್ಶಿಸಲ್ಪಟ್ಟಾಗ ಅಷ್ಟೈಶ್ವರ್ಯ ಲಭಿಸುತ್ತದೆ.
ಚಾಣಕ್ಯ ನೀತಿ: ಸಾಕಷ್ಟು ಸಂಪಾದಿಸಿದ್ರೂ ಈ ಐವರ ಜೇಬು ಯಾವಾಗ್ಲೂ ಖಾಲಿ ಖಾಲಿ!
ಹಿಂದೂ ಧರ್ಮದ ಪ್ರಕಾರ, ಪತಿಯಾದವನು ಪತ್ನಿಯ ಪಾದವನ್ನು ಮಾತ್ರವಲ್ಲ ಆಕೆಯ ಅಂಗೈಯನ್ನು ಮುಟ್ಟಬೇಕು. ಇದು ಅವರ ಅದೃಷ್ಟವನ್ನು ಬಲಪಡಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಮಹಿಳೆಯರ ಅಂಗೈಗಳಲ್ಲಿ ನೆಲೆಸಿದ್ದಾಳೆ. ಒಬ್ಬ ವ್ಯಕ್ತಿಯು ಪ್ರತಿದಿನ ಲಕ್ಷ್ಮಿ ದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ತನ್ನ ಹೆಂಡತಿಯ ಅಂಗೈಯನ್ನು ಸ್ಪರ್ಶಿಸಿದರೆ, ಆಗ ಲಕ್ಷ್ಮಿ ದೇವಿಯು ಅವನನ್ನು ಮೆಚ್ಚುತ್ತಾಳೆ.