MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಎನರ್ಜಿ ಕಿಂಗ್ ರಣವೀರ್ ಸಿಂಗ್ ಯಶಸ್ಸಿನ ಹಿಂದಿದೆ ಆ 'ಮೂಲಾಂಕ', ನಿಮ್ಮ ಸಂಖ್ಯೆಯೂ ಅದೇನಾ?

ಎನರ್ಜಿ ಕಿಂಗ್ ರಣವೀರ್ ಸಿಂಗ್ ಯಶಸ್ಸಿನ ಹಿಂದಿದೆ ಆ 'ಮೂಲಾಂಕ', ನಿಮ್ಮ ಸಂಖ್ಯೆಯೂ ಅದೇನಾ?

Ranveer Singh Success Secret: ‘ಧುರಂಧರ್ 2’ ಚಿತ್ರದ ಅಬ್ಬರದ ನಡುವೆಯೇ, ನಟ ರಣವೀರ್ ಸಿಂಗ್ ಅವರ ಆಕರ್ಷಕ ವ್ಯಕ್ತಿತ್ವದ ರಹಸ್ಯ ರಿವೀಲ್ ಆಗಿದೆ. ಹಾಗಾದರೆ ಅವರ ಯಶಸ್ಸಿಗೆ ಕಾರಣವಾದ ಆ ವಿಶೇಷ ಮೂಲಾಂಕ ಯಾವುದು ಮತ್ತು ಅದರ ಶಕ್ತಿ ಏನು ಎಂಬುದರ ವಿವರ ಇಲ್ಲಿದೆ.  

1 Min read
Author : Ashwini HR
Published : Mar 28 2026, 11:13 AM IST
Share this Photo Gallery
  • FB
  • TW
  • Linkdin
  • Whatsapp
15
ಶಕ್ತಿ ಮತ್ತು ಚೈತನ್ಯಕ್ಕೆ ಮೂಲಾಂಕ 6 ಕಾರಣ
Image Credit : Instagram

ಶಕ್ತಿ ಮತ್ತು ಚೈತನ್ಯಕ್ಕೆ ಮೂಲಾಂಕ 6 ಕಾರಣ

ಬಾಲಿವುಡ್‌ನ 'ಎನರ್ಜಿ ಕಿಂಗ್' ಎಂದೇ ಖ್ಯಾತರಾಗಿರುವ ನಟ ರಣವೀರ್ ಸಿಂಗ್ ಅವರ ಆಕರ್ಷಕ ವ್ಯಕ್ತಿತ್ವ ಮತ್ತು ಸತತ ಯಶಸ್ಸಿನ ಹಿಂದೆ ಅವರ ಹುಟ್ಟಿದ ದಿನಾಂಕದ ಪ್ರಭಾವ ಅಡಗಿದೆ ಎನ್ನಲಾಗುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಅವರ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಅವರ ನಟನೆಗೆ ಪ್ರೇಕ್ಷಕರು ಮಾರುಹೋಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಣವೀರ್ ಸಿಂಗ್ ಅವರ ಈ ಅಪಾರ ಶಕ್ತಿ ಮತ್ತು ಚೈತನ್ಯಕ್ಕೆ ಅವರ ಮೂಲಾಂಕ 6 ಕಾರಣವಂತೆ!

25
ರಣವೀರ್ ಸಿಂಗ್ ಮತ್ತು ಮೂಲಾಂಕ 6ರ ನಂಟು
Image Credit : stockPhoto

ರಣವೀರ್ ಸಿಂಗ್ ಮತ್ತು ಮೂಲಾಂಕ 6ರ ನಂಟು

ಯಾವುದೇ ತಿಂಗಳ 6, 15 ಅಥವಾ 24 ನೇ ತಾರೀಖಿನಂದು ಜನಿಸಿದವರ ಮೂಲಾಂಕ '6' ಆಗಿರುತ್ತದೆ. ರಣವೀರ್ ಸಿಂಗ್ ಅವರು ಜುಲೈ 6 ರಂದು ಜನಿಸಿರುವುದರಿಂದ, ಅವರ ಮೂಲಾಂಕವೂ ಸಹ 6 ಆಗಿದೆ. ಈ ಸಂಖ್ಯೆಯ ಅಧಿಪತ್ಯವನ್ನು 'ಶುಕ್ರ' ಗ್ರಹ (Venus) ಹೊಂದಿರುತ್ತದೆ. ಶುಕ್ರನು ಪ್ರೇಮ, ಸೌಂದರ್ಯ, ಸಂಪತ್ತು ಮತ್ತು ಐಷಾರಾಮಿ ಜೀವನದ ಸಂಕೇತವಾಗಿದ್ದಾನೆ.

Related Articles

Related image1
Numerology: ಈ ಮೂಲಾಂಕದ ಜನರ ರೇಂಜೇ ಬೇರೆ, ಅಂಬಾನಿಯಂತೆ ಜೀವನ ನಡೆಸೋದು ಕನ್‌ಫರ್ಮ್
Related image2
Numerology: ಈ ದಿನಾಂಕದಂದು ಹುಟ್ಟಿದ ಹುಡುಗಿಯರು ಬೇಗ ಮೋಸ ಹೋಗ್ತಾರೆ! ಲಿಸ್ಟ್‌ನಲ್ಲಿ ನಿಮ್ಮ ಡೇಟ್ ಇದೆಯಾ?
35
ಈ ಮೂಲಾಂಕದವರ ವಿಶೇಷ ಗುಣಗಳು ಇಲ್ಲಿವೆ
Image Credit : Getty

ಈ ಮೂಲಾಂಕದವರ ವಿಶೇಷ ಗುಣಗಳು ಇಲ್ಲಿವೆ

ಆಕರ್ಷಕ ವ್ಯಕ್ತಿತ್ವ
ಶುಕ್ರ ಗ್ರಹದ ಪ್ರಭಾವದಿಂದಾಗಿ ಈ ಸಂಖ್ಯೆಯವರು ತುಂಬಾ ಆಕರ್ಷಕವಾಗಿರುತ್ತಾರೆ. ಇವರ ಮಾತು ಮತ್ತು ನಡವಳಿಕೆ ಜನರನ್ನು ಬೇಗನೆ ಸೆಳೆಯುತ್ತದೆ.

ಶಾಂತ ಸ್ವಭಾವ
ಇವರು ನೋಡಲು ಚಟುವಟಿಕೆಯಿಂದ ಕೂಡಿದ್ದರೂ, ಸ್ವಭಾವತಃ ಶಾಂತ ಮತ್ತು ಪ್ರೀತಿಯನ್ನು ಬಯಸುವವರಾಗಿರುತ್ತಾರೆ.

ಸುಖ-ಸಂಪತ್ತು
ಮೂಲಾಂಕ 6 ರ ಜಾತಕದವರಿಗೆ ಜೀವನದಲ್ಲಿ ಸುಖ-ಸಮೃದ್ಧಿ, ಐಶ್ವರ್ಯ ಮತ್ತು ಹಣದ ಕೊರತೆ ಕಾಡುವುದು ಕಡಿಮೆ. ಇವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ.

45
ಇವರು ಇದೇ ಮೂಲಾಂಕಕ್ಕೆ ಸೇರಿದವರು
Image Credit : Getty

ಇವರು ಇದೇ ಮೂಲಾಂಕಕ್ಕೆ ಸೇರಿದವರು

ಈ ಮೂಲಾಂಕದವರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ರಣವೀರ್ ಸಿಂಗ್ ಅವರಂತೆಯೇ ಅನಿಲ್ ಕಪೂರ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಇದೇ ಮೂಲಾಂಕಕ್ಕೆ ಸೇರಿದವರು.

55
ಇವರ ಆಸಕ್ತಿಯ ಕ್ಷೇತ್ರಗಳು ಯಾವುವು?
Image Credit : Getty

ಇವರ ಆಸಕ್ತಿಯ ಕ್ಷೇತ್ರಗಳು ಯಾವುವು?

ಮೂಲಾಂಕ 6 ಹೊಂದಿರುವವರು ನ್ಯಾಚುರಲ್ಲಾಗಿ ಸೃಜನಶೀಲರಾಗಿರುತ್ತಾರೆ. ಇವರಿಗೆ ಮುಖ್ಯವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.
ಫ್ಯಾಷನ್ ಮತ್ತು ಸಂಗೀತ.
ಕಲೆ ಮತ್ತು ಸಿನಿಮಾ ರಂಗ.
ಇಂಟೀರಿಯರ್ ಡೆಕೋರೇಶನ್ ಮತ್ತು ಗ್ಲಾಮರ್ ಪ್ರಪಂಚ.
ಇವರು ತುಂಬಾ ರೋಮ್ಯಾಂಟಿಕ್ ಆಗಿದ್ದು, ಸಂಬಂಧಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ಹಬ್ಬ
ಸಂಖ್ಯಾಶಾಸ್ತ್ರ
Latest Videos
Recommended Stories
Recommended image1
ಅಪ್ಸರೆಗೂ ಠಕ್ಕರ್ ಕೊಡುವ ಸುಂದರಿಯರು ಈ ದಿನ ಜನಿಸಿದ ಹುಡುಗಿಯರು
Recommended image2
ಕುಬೇರ ಯೋಗ 2026: ಸಿಂಹ ಸೇರಿ ಈ ನಾಲ್ಕು ರಾಶಿಗಳ ಮೇಲೆ ಹಣದ ಸುರಿಮಳೆ
Recommended image3
ಈ ವಾರ ಹುಟ್ಟಿದರು ಹೆಚ್ಚು ಅದೃಷ್ಟವಂತರು, ಕೈ ತುಂಬಾ ಹಣ ಗಳಿಸುವುದು ಪಕ್ಕಾ
Related Stories
Recommended image1
Numerology: ಈ ಮೂಲಾಂಕದ ಜನರ ರೇಂಜೇ ಬೇರೆ, ಅಂಬಾನಿಯಂತೆ ಜೀವನ ನಡೆಸೋದು ಕನ್‌ಫರ್ಮ್
Recommended image2
Numerology: ಈ ದಿನಾಂಕದಂದು ಹುಟ್ಟಿದ ಹುಡುಗಿಯರು ಬೇಗ ಮೋಸ ಹೋಗ್ತಾರೆ! ಲಿಸ್ಟ್‌ನಲ್ಲಿ ನಿಮ್ಮ ಡೇಟ್ ಇದೆಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved