ನೀವು ಪ್ರತಿ ರಾತ್ರಿ ದಿಢೀರ್ ಆಗಿ ಅದೇ ಸಮಯಕ್ಕೆ ಎಚ್ಚರಗೊಳ್ಳುತ್ತೀರಾ? ಇದು ಯಾಕಿರಬಹುದು
ಕೆಲವೊಮ್ಮೆ ರಾತ್ರಿ ನಮಗೆ ಸಡನ್ ಆಗಿ ಒಂದು ಸಮಯಕ್ಕೆ ಎಚ್ಚರ ಆಗುತ್ತೆ, ಆದರೆ ಇದು ಪ್ರತಿ ರಾತ್ರಿ ನಡೆದರೆ ಅದಕ್ಕೇನು ಕಾರಣ ಅನ್ನೋದನ್ನು ನೀವು ತಿಳಿದುಕೊಂಡಿರಬೇಕು.

ಕೆಲವರಿಗೆ ಮಲಗಿದ ಕೂಡಲೇ ನಿದ್ದೆ ಬರುತ್ತದೆ. ಇನ್ನೂ ಕೆಲವರಿಗೆ ಏನೇ ಸರ್ಕಸ್ ಮಾಡಿದ್ರೂ ಮಲಗಿದ ತಕ್ಷಣ ನಿದ್ದೆ ಬರೋದೇ ಇಲ್ಲ. ಇನ್ನೂ ಒಂದಿಷ್ಟು ಜನರಿಗೆ ನಿದ್ದೆ ಏನೋ ಬರುತ್ತದೆ, ಆದರೆ, ಮಧ್ಯರಾತ್ರಿ ಎಚ್ಚರವಾಗುತ್ತೆ, ಅದು ಒಂದು ರಾತ್ರಿಯ ಕಥೆ ಅಲ್ಲ. ಪ್ರತಿದಿನ ರಾತ್ರಿ ನಿಮಗೆ ಅದೇ ಸಮಯಕ್ಕೆ ಎಚ್ಚರ ಆಗುತ್ತಿದ್ದರೆ ಅದರ ಹಿಂದೆ ಏನೋ ಇದೆ ಎಂದೇ ಅರ್ಥ.
9 ರಿಂದ 11 ಗಂಟೆಯೊಳಗೆ ಎಚ್ಚರವಾದರೆ ಅರ್ಥವೇನು?
ನೀವು ಬೇಗನೆ ಮಲಗುತ್ತಿದ್ದು, ಆದರೆ ರಾತ್ರಿ 9 ರಿಂದ 11 ಗಂಟೆಯ ಮಧ್ಯದಲ್ಲಿ ನಿಮಗೆ ಪದೇ ಪದೇ ಎಚ್ಚರವಾಗುತ್ತಿದ್ದರೆ ಇದರ ಅರ್ಥ ನೀವು ಒತ್ತಡಕ್ಕೆ ಒಳಗಾಗಿದ್ದೀರಿ ಎಂದು. ನೀವು ಒತ್ತಡದಲ್ಲಿದ್ದರೆ ಬೇಗನೆ ನಿದ್ರೆ ಬರೋದಿಲ್ಲ (sleeplessness). ಹೆಚ್ಚು ಟೆನ್ಶನ್ ನಲ್ಲಿದ್ರೆ ಬೇಗ ನಿದ್ದೆ ಮಾಡಿದರೂ ಮತ್ತೆ ಮತ್ತೆ ಎಚ್ಚರವಾಗುತ್ತಿರುತ್ತದೆ. ನಿಮಗೆ ಕೂಡ ಹೀಗೆ ಆದರೆ, ನೀವು ರಾತ್ರಿ ಹೊತ್ತು ತಣ್ಣೀರಿನಿಂದ ಮುಖ ತೊಳೆದು, ಸ್ವಲ್ಪ ಹೊತ್ತು ಧ್ಯಾನ ಮಾಡಿ ಶಾಂತಿಯಿಂದ ನಿದ್ರಿಸಿ.
11 ರಿಂದ 1 ಗಂಟೆಯ ಮಧ್ಯದಲ್ಲಿ ಎಚ್ಚರವಾದರೆ ಅರ್ಥವೇನು?
ನೀವು 11 ಗಂಟೆಗೆ ಮುಂಚಿತವಾಗಿ ಮಲಗಿದ್ದು, ನಿಮಗೆ 11 ರಿಂದ 1 ಗಂಟೆಯ ಮಧ್ಯದಲ್ಲಿ ಸಡನ್ ಆಗಿ ಎಚ್ಚರವಾದರೆ ಅದರ ಅರ್ಥ ನಕಾರಾತ್ಮಕ ಶಕ್ತಿ (negative power) ಅಥವಾ ನಕಾರಾತ್ಮಕ ಪ್ರಭಾವವೊಂದು ನಿಮ್ಮನ್ನು ಸೇರಲು ಪ್ರಯತ್ನಿಸುತ್ತಿದೆ ಎಂದು. ಇಂತಹ ಸಂದರ್ಭದಲ್ಲಿ ನೀವು ಇದ್ದರೆ, ದೇವರನ್ನು ಸ್ಮರಿಸುತ್ತಾ ನಿದ್ರೆ ಮಾಡಿ.
12 ರಿಂದ 2 ಗಂಟೆಯ ಮಧ್ಯದಲ್ಲಿ ಎಚ್ಚರವಾದರೆ ಅರ್ಥವೇನು?
ಒಂದು ವೇಲೆ ನಿಮಗೆ 12 ರಿಂದ 2 ಗಂಟೆಯ ಮಧ್ಯದಲ್ಲಿ ಪ್ರತಿ ರಾತ್ರಿ ಎಚ್ಚರವಾಗುತ್ತಿದ್ದರೆ ಯಾವುದೋ ಒಂದು ಪ್ರಬಲವಾದ ಶಕ್ತಿ, ಅದು ನಕಾರಾತ್ಮಕವೂ ಆಗಿರಬಹುದು ಅಥವಾ ಸಕಾರಾತ್ಮಕವೂ ಆಗಿರಬಹುದು, ಅದು ನಿಮ್ಮ ಮೇಲೆ ಪ್ರಾಭಲ್ಯ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಸಕಾರಾತ್ಮಕ ಶಕ್ತಿಯಾದರೆ (positive power) ಒಳ್ಳೆಯದೇ, ಆದರೆ ನಕಾರಾತ್ಮಕ ಶಕ್ತಿಯಾಗಿದ್ದರೆ ಇದು ಸಮಸ್ಯೆ ಸೃಷ್ಟಿಸಬಹುದು, ಹಾಗಾಗಿ ಪ್ರತಿದಿನ ದೇವರ ಮಂತ್ರ ಪೂಜೆಗಳನ್ನು ಮಾಡೊದನ್ನು ಮರಿಬೇಡಿ. ಇಲ್ಲವಾದರೆ ಸಮಸ್ಯೆಗೆ ನೀವು ಸಿಲುಕಿಕೊಳ್ಳಬಹುದು.
3 ರಿಂದ 5 ಗಂಟೆಯ ಮಧ್ಯದಲ್ಲಿ ಎಚ್ಚರವಾದರೆ
3 ರಿಂದ 5 ಗಂಟೆಯ ಸಮಯ ಅಂದ್ರೆ ಬ್ರಹ್ಮ ಮುಹೂರ್ತದ ಸಮಯ, ಈ ಸಮಯದಲ್ಲಿ ನಿಮಗೆ ದೈವೀಕ ಸಂಚಾರ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಎಚ್ಚರವಾಗಿದೆ ಅಂದ್ರೆ, ದೇವರ ಆಶೀರ್ವಾದ ನಿಮ್ಮ ಮೇಲೆ ಇದು ಎಂದು ಅರ್ಥ. ಹಾಗಾಗಿ ಆ ಸಮಯದಲ್ಲಿ ದೇವರ ಸ್ಮರಣೆ ಮಾಡೋದನ್ನು ಮರಿಬೇಡಿ.