Chanakya Niti: ಈ 5 ಜಾಗದಲ್ಲಿ ಜಿಪುಣತನ ತೋರಿಸಿ… ಬ್ಯಾಂಕ್ ಅಕೌಂಟ್ ಸದಾ ತುಂಬಿರುತ್ತೆ!
Chanakya Niti: ನೀವು ಕೂಡ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಶೋ ಆಫ್ ಮಾಡೋದಕ್ಕೆ ವ್ಯರ್ಥ ಮಾಡುತ್ತಿದ್ದೀರಾ? ಚಾಣಕ್ಯ ನೀತಿಯಲ್ಲಿ ಯಾವ ಐದು ವಿಷಯಗಳಲ್ಲಿ ನಾವು ಜಿಪುಣತೆ ತೋರಿಸಬೇಕು. ಅದರಿಂದ ನಮ್ಮ ಬ್ಯಾಂಕ್ ಅಕೌಂಟ್ ತುಂಬುತ್ತೆ ಅನ್ನೋದನ್ನು ತಿಳಿಸಿದ್ದಾರೆ.

ಚಾಣಕ್ಯ ನೀತಿ
ನೀವು ಕೂಡ ನಿಮಗೆ ಇಷ್ಟವಿಲ್ಲದ ಜನರನ್ನು ಮೆಚ್ಚಿಸಲು ನೀರಿನಂತೆ ಹಣವನ್ನು ಪೋಲು ಮಾಡುತ್ತಿದ್ದೀರಾ? ಸಮಾಜವು ಇದನ್ನು ಔದಾರ್ಯ ಎಂದು ಕರೆಯಬಹುದು. ಆದರೆ, ಚಾಣಕ್ಯ ನೀತಿ ಪ್ರಕಾರ, ಇದು ಆರ್ಥಿಕ ನಷ್ಟವಾಗಿದೆ. ಇನ್ನೊಬ್ಬರ ದೃಷ್ಟಿಯಲ್ಲಿ ದೊಡ್ಡವರಾಗಿ ಕಾಣಲು, ಶೋ ಆಫ್ ಮಾಡುವುದು ದುಂದು ವೆಚ್ಚ ಅಷ್ಟೇ. ಚಾಣಕ್ಯ ನೀತಿಯಲ್ಲಿ ತಿಳಿಸಿದಂತೆ ಈ ಐದು ವಿಷ್ಯದಲ್ಲಿ ಮನುಷ್ಯ ಯಾವಾಗಲೂ ಜಿಪುಣ ಆಗಿರಬೇಕಂತೆ.
ಫೇಕ್ ಸೋಶಿಯಲ್ ಸ್ಟೇಟಸ್
ದುಬಾರಿ ಮತ್ತು ಹೊಸ ವಸ್ತುಗಳನ್ನು ಖರೀದಿಸುವುದರಿಂದ ನೀವು ಶ್ರೀಮಂತರಾಗಿ ಕಾಣುತ್ತೀರಿ ಎಂದು ಅಂದುಕೊಂಡಿದ್ದೀರಾ? ನೀವು ಖರ್ಚು ಮಾಡೋದರಿಂದ ಮಾತ್ರ ಶ್ರೀಮಂತರು ಎಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ನಿಜವಾದ ರೂಪ ಅದಲ್ಲ. ಚಾಣಕ್ಯ ನೀತಿಯಲ್ಲಿ, ಇದನ್ನು ಸಂಪೂರ್ಣ ಮೂರ್ಖತನದ ಕ್ರಿಯೆ ಮತ್ತು ವಿನಾಶಕ್ಕೆ ನೇರ ಮಾರ್ಗ ಎನ್ನುತ್ತದೆ. ನೀವು ಶೋ ಆಫ್ ಗಾಗಿ ದುಂದು ವೆಚ್ಚ ಮಾಡುತ್ತಿದ್ದರೆ ನಿಮ್ಮನ್ನು ಎದುರಿನಿಂದ ಜನ ಹೊಗಳುವರು, ಆದರೆ ನಿಮ್ಮ ಹಿಂದಿನಿಂದ ಆಡಿಕೊಂಡು ನಗೋದು ಖಚಿತಾ. ಹಾಗಾಗಿ ಈ ಫೇಕ್ ಸೋಶಿಯಲ್ ಸ್ಟೇಟಸ್ ಭ್ರಮೆ ಬಿಟ್ಟರೆ ಹಣ ಉಳಿಸಬಹುದು.
ವಿಷಕಾರಿ ಸಂಬಂಧಗಳು
ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಅಪಹಾಸ್ಯ ಮಾಡುವ ಜನರ ಮೇಲೆ ನೀವು ಹಣವನ್ನು ಖರ್ಚು ಮಾಡುತ್ತಿದ್ದೀರಾ? ಅಂತಹ ವ್ಯಕ್ತಿಗಳು ಸ್ನೇಹಿತರಲ್ಲ, ಬದಲಾಗಿ ಶತ್ರುಗಳು. ಚಾಣಕ್ಯ ನೀತಿ ಪ್ರಕಾರ, ಒಬ್ಬ ದುಷ್ಟ ಸ್ನೇಹಿತನ ಸಂಘ ಎಂದರೆ, ಹಾವಿಗೆ ಹಾಲು ನೀಡಿ ಪೋಷಿಸಿದಂತೆ. ಕೊನೆಗೆ ಅದು ನಿಮ್ಮನ್ನು ಕಚ್ಚದೆ ಬಿಡೋದಿಲ್ಲ. ನಿಮಗೆ ಕಷ್ಟ ಎಂದು ಬಂದಾಗ ಅವರು ನಿಮ್ಮ ಜೊತೆ ಇರೋದೆ ಇಲ್ಲ.
ಸಮಾಜ ಮತ್ತು ಜನರು ಏನು ಹೇಳುತ್ತಾರೆ?
90% ಜನರು ತಮ್ಮ ಹಣ ಸಂಪತ್ತನ್ನು ಕಳೆದುಕೊಳ್ಳುವುದು ಇಲ್ಲಿಯೇ. ಉದಾಹರಣೆಗೆ, ಒಬ್ಬ ತಂದೆ ತನ್ನ ಇಡೀ ಜೀವನದ ಉಳಿತಾಯವನ್ನು ಖರ್ಚು ಮಾಡುತ್ತಾನೆ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಗನ ಮದುವೆ ಮಾಡುತ್ತಾರೆ. ಯಾರಿಗಾಗಿ? ಮದುವೆ ದೊಡ್ಡದಾಗಿ ಮಾಡದೇ ಇದ್ದರೆ ಸಮಾಜ ಏನೆನ್ನುತ್ತದೆ ಎನ್ನುವ ಯೋಚನೆ ಜನರಿಗೆ. ಆದರೆ ಅವನು ಸಾಲದಲ್ಲಿ ಮುಳುಗಿದರೆ ಯಾವ ಸಮಾಜದ ಜನರು ಕೂಡ ಬಂದು ಸಹಾಯ ಮಾಡೋದಿಲ್ಲ.
ಅಗ್ಗದ ಜನಪ್ರಿಯತೆ
ಅಗ್ಗದ ಜನಪ್ರಿಯತೆ ಎಂದರೆ ಹಣ, ಆಡಂಬರದ ಮೂಲಕ ಅಥವಾ ಇತರರನ್ನು ಸಂತೋಷಪಡಿಸುವ ಮೂಲಕ ಗಳಿಸುವ ಹೊಗಳಿಕೆ ಮತ್ತು ಮನ್ನಣೆ. ಚಾಣಕ್ಯ ನೀತಿ ಇದನ್ನು ಅಪಾಯಕಾರಿ ಭ್ರಮೆ ಎನ್ನುತ್ತಾರೆ, ಏಕೆಂದರೆ ಇತರರ ದೃಷ್ಟಿಯಲ್ಲಿ ಶ್ರೇಷ್ಠನಾಗಿ ಕಾಣಿಸಿಕೊಳ್ಳುವ ಯೋಚನೆಯಲ್ಲಿ, ಒಬ್ಬ ವ್ಯಕ್ತಿಯು ತನ್ನ ತನವನ್ನು ಕಳೆದುಕೊಳ್ಳುತ್ತಾನೆ. ಯಾರು ಹೊಗಳಿಕೆಯನ್ನು ಇಷ್ಟಪಡುತ್ತಾರೋ ಅವರ ಪತನ ಗ್ಯಾರಂಟಿ.
ಉಳಿತಾಯದ ಭ್ರಮೆ
ಎಲ್ಲಾದರೂ 50% ರಿಯಾಯಿತಿ ನೋಡಿದಾಗ ನಿಮಗೆ ಸಂತೋಷವಾಗುತ್ತದೆಯೇ? ನೀವು ₹2,500 ಉಳಿಸಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನಿಜವಾಗಿ ನೀವು ₹2,500 ಖರ್ಚು ಮಾಡಿದ್ದೀರಿ. ರಿಯಾಯಿತಿ ಹೆಸರಲ್ಲಿ ಅಗತ್ಯವಿಲ್ಲದಿದ್ದರೂ ನೀವು ಖರ್ಚು ಮಾಡಿದ್ದೀರಿ.. ಚಾಣಕ್ಯ ನೀತಿಯ ಪ್ರಕಾರ ಇದೊಂದು ಮೂರ್ಖತನ ಅಷ್ಟೇ.
ಚಾಣಕ್ಯ ನೀತಿ ಏನು ಹೇಳುತ್ತದೆ?
ಮಿತವ್ಯಯವು ಬಡತನವಲ್ಲ, ಶ್ರೀಮಂತನಾಗಲು ಉತ್ತಮ ತಂತ್ರ. ಜಗತ್ತು ನಿಮ್ಮನ್ನು ಖರ್ಚು ಮಾಡಲು ಪ್ರಚೋದಿಸಿದಾಗ, ಅಲ್ಲಿ ನಿಲ್ಲಿಸಿ. ಆರಂಭದಲ್ಲಿ, ಜನರು ನಿಮ್ಮನ್ನು ಜಿಪುಣರು ಎಂದು ಕರೆಯುತ್ತಾರೆ . ನಿಮ್ಮನ್ನು ಗೇಲಿ ಮಾಡುತ್ತಾರೆ. ಆದರೆ ವರ್ಷಗಳ ನಂತರ, ಅದೇ ಜನರು ಯಶಸ್ಸಿನ ರಹಸ್ಯವೇನು ಎಂದು ನಿಮ್ಮನ್ನು ಕೇಳುತ್ತಾರೆ.

