ಚಾಣಕ್ಯ ಪ್ರಕಾರ ಸಂತೋಷ ಮತ್ತು ಯಶಸ್ಸಿಗಾಗಿ ಕೆಟ್ಟ ಬಂಧುಗಳಿಂದ ದೂರವಿರಿ
ಬಂಧುಗಳು ಅಂದ್ರೆ ಎಲ್ಲರೂ ಒಳ್ಳೆಯವರು, ಸಹಾಯ ಮಾಡೋರು ಅಂತ ಅರ್ಥ ಅಲ್ಲ. ಕೆಲವು ಬಂಧುಗಳು ತುಂಬಾ ಕೆಟ್ಟವರಾಗಿರುತ್ತಾರೆ. ಅಂಥವರಿಂದ ದೂರ ಇರೋದೇ ಒಳ್ಳೆಯದು. ಚಾಣಕ್ಯ ಕೂಡ ಇದನ್ನೇ ಹೇಳಿದ್ದಾರೆ.
ನಮ್ಮ ಜೊತೆ ಇರೋರೆಲ್ಲ ನಮ್ಮವರಲ್ಲ. ಕೆಲವೊಮ್ಮೆ ಬಂಧು-ಮಿತ್ರರೇ ನಮ್ಮನ್ನು ವಂಚಿಸಬಹುದು. ಜಾಗ್ರತೆ ಇರಬೇಕು. ನಮ್ಮವರು ಅಂತ ತಿಳ್ಕೊಂಡ್ರಿಂದಲೇ ನೋವು ಜಾಸ್ತಿ
ಜನರನ್ನ ಅರ್ಥ ಮಾಡ್ಕೊಳ್ಳೋದು ಕಷ್ಟ. ಕೆಟ್ಟ ಬಂಧುಗಳನ್ನ ಸುಲಭವಾಗಿ ಗುರುತಿಸೋಕೆ ಆಗಲ್ಲ. ದೊಡ್ಡ ನಷ್ಟ ಆದ್ಮೇಲೆ ಅವರ ನಿಜಸ್ವರೂಪ ಗೊತ್ತಾಗುತ್ತೆ. ಬಂಧುಗಳಿಂದ ವಂಚನೆ ಆಗದವರು ಯಾರೂ ಇಲ್ಲ.ಕೆ
ಕೆಲವು ಬಂಧುಗಳ ಜೊತೆ ಮಾತಾಡಿದ್ರೆ ನೆಗೆಟಿವ್ ಥಾಟ್ಸ್ ಬರುತ್ತೆ. ಅಂಥವರ ಜೊತೆ ಸಂಬಂಧ ಇಟ್ಕೊಳ್ಳಬಾರದು ಅಂತ ಚಾಣಕ್ಯ ಹೇಳ್ತಾರೆ.ನಕಾರಾತ್ಮಕ ಬಂಧುಗಳನ್ನು ಗುರುತಿಸಿ.
ಉಪಕಾರ ಮಾಡಿದ ಬಂಧುಗಳಿದ್ದಾರೆ, ವಂಚಿಸಿದವರೂ ಇದ್ದಾರೆ. ಕೆಟ್ಟವರಿಂದ ದೂರ ಇರಿ. ವಂಚಿಸಿದ ಬಂಧುವನ್ನ ಮತ್ತೆ ನಂಬಬೇಡಿ ಎಂದು ಚಾಣಕ್ಯ ಹೇಳುತ್ತಾರೆ.ಯಾವಾಗ್ಲೂ ನಿಮ್ಮನ್ನ ಟೀಕಿಸೋ, ಅವಮಾನ ಮಾಡೋ ಬಂಧುವಿನಿಂದ ದೂರ ಇರಿ.
ಮನೆಗೆ ಬಂದ್ರೆ ಗಲಾಟೆ ಮಾಡೋ ಬಂಧುಗಳಿಂದ ದೂರ ಇರಿ ಅಂತ ಚಾಣಕ್ಯ ಹೇಳ್ತಾರೆ. ಕೆಲವು ಬಂಧುಗಳು ಮನೆಗೆ ಬಂದ್ರೆ ಅಶಾಂತಿ ಇರುತ್ತದೆ. ದಿನವಿಡಿ ಕಿರಿಕಿರಿಯಿಂದ ಕೂಡಿರುತ್ತದ್ದೆ. ಅಂತವರಿಂದ ದೂರವಿರಿ.ಮಾತಾಡಿದ್ರೆ ಮಾನಸಿಕ ಒತ್ತಡ ಕೊಡೋ ಬಂಧುವಿನಿಂದ ದೂರ ಇರಿ.
ಕಷ್ಟದಲ್ಲಿ ನಮ್ಮನ್ನ ಬಳಸಿಕೊಳ್ಳೋ ಬಂಧುಗಳನ್ನ ಬಿಟ್ಟುಬಿಡಿ. ಕಷ್ಟದಲ್ಲಿ ಸಹಾಯ ಮಾಡದ ಬಂಧು ಬೇಡ .ಕೆಲವು ಸಂಬಂಧಿಕರು ಕೆವಲ ಸುಖದಲ್ಲಿ ಮಾತ್ರ ಜೊತೆ ಇರುತ್ತಾರೆ ಕಷ್ಟದ ಸಮಯದಲ್ಲಿ ಇರುವುದಿಲ್ಲ.ನಿಮ್ಮ ಒಳ್ಳೆಯದನ್ನ ನೋಡಿ ಹೊಟ್ಟೆಕಿಚ್ಚು ಪಡೋ ಬಂಧುವಿನಿಂದ ದೂರ ಇರಿ.