ನಾಗಪಂಚಮಿ ನಂತ್ರ ಮಂಗಳ-ಚಂದ್ರ ಸಂಯೋಗದಿಂದ ಶುಭ ಯೋಗ; 5 ರಾಶಿಗಳ ಕಷ್ಟಗಳು ದೂರ, ಬಂಪರ್ ಲಾಭ
ಸೆಪ್ಟೆಂಬರ್ 6 ರಂದು ಮಂಗಳ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಅಲ್ಲಿ ಚಂದ್ರನೂ ಇರುವುದರಿಂದ ವಿಶೇಷ ಯೋಗ ಸೃಷ್ಟಿಯಾಗಲಿದೆ. ಈ ಗ್ರಹ ಸಂಚಾರವು 5 ರಾಶಿಯವರಿಗೆ ಆರ್ಥಿಕ, ವೃತ್ತಿ ಮತ್ತು ಕೌಟುಂಬಿಕವಾಗಿ ಅತ್ಯಂತ ಅನುಕೂಲಕರ ಫಲಿತಾಂಶಗಳನ್ನು ತರಲಿದೆ.

ಮಿಥುನ ರಾಶಿಯಲ್ಲಿ ಚಂದ್ರ
ಪ್ರತಿಯೊಂದು ಗ್ರಹದ ಚಲನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮವು ವಿವಿಧ ರಾಶಿಗಳ ಮೇಲೆ ವಿಭಿನ್ನವಾಗಿರುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ. ಈ ನಿಟ್ಟಿನಲ್ಲಿ, ಧೈರ್ಯ, ಶಕ್ತಿ, ಪ್ರಯತ್ನ ಮತ್ತು ವೇಗವನ್ನು ಪ್ರತಿನಿಧಿಸುವ ಮಂಗಳ ಗ್ರಹದ ಮುಂದಿನ ಸಂಚಾರವು ಗಮನ ಸೆಳೆದಿದೆ.
ಜ್ಯೋತಿಷ್ಯದ ಪ್ರಕಾರ, ಮಂಗಳನು ಸೆಪ್ಟೆಂಬರ್ 6 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಚಂದ್ರನೂ ಮಿಥುನ ರಾಶಿಯಲ್ಲಿ ಇರುವುದರಿಂದ, ಈ ಅವಧಿಯು ಕೆಲವು ರಾಶಿಗಳಿಗೆ ಅನುಕೂಲಕರವಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸ್ಥಿತಿಯು ಸೆಪ್ಟೆಂಬರ್ 8 ರವರೆಗೆ ಮುಂದುವರಿಯಲಿದೆ.
ಮೇಷ ರಾಶಿ
ಆರ್ಥಿಕ ಪ್ರಗತಿ: ಬೇರೆಯವರ ಬಳಿ ಸಿಲುಕಿದ್ದ ಹಣ ಮರಳಿ ಬರಲಿದ್ದು, ಉಳಿತಾಯ ಹಂತ ಹಂತವಾಗಿ ಸುಧಾರಿಸಲಿದೆ.
ಉದ್ಯೋಗ ಮತ್ತು ಶ್ರಮಕ್ಕೆ ಮನ್ನಣೆ: ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಕ್ಕೆ ಸೂಕ್ತ ಗೌರವ ಸಿಗಲಿದೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿವೆ.
ವಿವೇಚನೆಯ ಹೂಡಿಕೆ: ಹೂಡಿಕೆಗಳಿಂದ ಉತ್ತಮ ಲಾಭ ಸಿಗುವ ನಿರೀಕ್ಷೆಯಿದೆಯಾದರೂ, ಯಾವುದೇ ನಿರ್ಧಾರವನ್ನು ಅವಸರ ಪಡದೇ ಯೋಚಿಸಿ ತೆಗೆದುಕರುವುದು ಒಳಿತು.
ಕುಟುಂಬ ಮತ್ತು ದಾಂಪತ್ಯ: ವೈವಾಹಿಕ ಜೀವನದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಲಿದ್ದು, ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವ ಅವಕಾಶ ಸಿಗಲಿದೆ.
ವೃಶ್ಚಿಕ ರಾಶಿ
ಆದಾಯ ಮತ್ತು ಉದ್ಯೋಗ: ಗ್ರಹಸ್ಥಿತಿಯು ಆದಾಯ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ನೀಡಲಿದೆ. ಹೆಚ್ಚುವರಿ ಆದಾಯ ಗಳಿಸಲು ನೂತನ ಮಾರ್ಗಗಳು ತೆರೆದುಕೊಳ್ಳಲಿವೆ.
ಕೆಲಸದ ವಾತಾವರಣ: ಕಾರ್ಯಕ್ಷೇತ್ರದಲ್ಲಿ ಆಗುವ ಬದಲಾವಣೆಗಳು ಅಂತಿಮವಾಗಿ ನಿಮಗೆ ಅನುಕೂಲಕರವಾಗಿ ಪರಿಣಮಿಸಲಿವೆ.
ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆ: ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವವರಿಗೆ ಇದು ಸೂಕ್ತ ಸಮಯ.
ಕುಟುಂಬ ಮತ್ತು ಭಿನ್ನಾಭಿಪ್ರಾಯ: ಕುಟುಂಬದಲ್ಲಿ ದೀರ್ಘಕಾಲದಿಂದ ಇದ್ದ ಭಿನ್ನಾಭಿಪ್ರಾಯಗಳು ಮಾತುಕತೆಯ ಮೂಲಕ ಸುಲಭವಾಗಿ ಬಗೆಹರಿಯಲಿವೆ.
ಹೂಡಿಕೆ ಮತ್ತು ವ್ಯಾಪಾರ: ಈ ಹಿಂದೆ ಮಾಡಿದ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಸಿಗಲಿದೆ. ಉದ್ಯಮಿಗಳಿಗೆ ಹೊಸ ಗ್ರಾಹಕರು ಹಾಗೂ ಲಾಭದಾಯಕ ಒಪ್ಪಂದಗಳು ಒಲಿದು ಬರಲಿವೆ.
ಮಿಥುನ ರಾಶಿ
ಆದಾಯ ಮತ್ತು ಲಾಭ: ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಪ್ರಸ್ತುತ ಮಾಡುತ್ತಿರುವ ಕೆಲಸದಲ್ಲಿ ಹೆಚ್ಚಿನ ಧನಲಾಭ ಸಿಗಲಿದೆ.
ಆಸೆಗಳ ಈಡೇರಿಕೆ: ಕುಟುಂಬದವರ ಸಂಪೂರ್ಣ ಬೆಂಬಲ ಸಿಗುವುದರಿಂದ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಆಸೆಗಳು ಈಡೇರಲಿವೆ.
ಆರ್ಥಿಕ ಅನುಕೂಲ: ಅನಿರೀಕ್ಷಿತವಾಗಿ ಹಣಕಾಸಿನ ಲಾಭ ದೊರೆಯುವ ಸಾಧ್ಯತೆಗಳಿವೆ.
ವೃತ್ತಿಜೀವನ ಮತ್ತು ಬಡ್ತಿ: ನಿಮ್ಮ ಕೆಲಸದ ಕಾರ್ಯಕ್ಷಮತೆ ಮೇಲಧಿಕಾರಿಗಳ ಗಮನ ಸೆಳೆಯಲಿದ್ದು, ಸಂಬಳ ಹೆಚ್ಚಳ ಅಥವಾ ಹುದ್ದೆಯಲ್ಲಿ ಬಡ್ತಿ ಸಿಗುವ ಸಿಹಿ ಸುದ್ದಿ ಬರಬಹುದು.
ನಿರ್ಧಾರ ಶಕ್ತಿ: ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಲಿದ್ದು, ಅಂದುಕೊಂಡ ಗುರಿಗಳತ್ತ ವೇಗವಾಗಿ ಸಾಗುವಿರಿ.
ಕನ್ಯಾ ರಾಶಿ
ಹೊಸ ಆರಂಭಗಳು: ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಹಾಗೂ ಸ್ವಂತ ಉದ್ಯಮ ಆರಂಭಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ.
ಧೈರ್ಯ ಮತ್ತು ಆತ್ಮವಿಶ್ವಾಸ: ಧೈರ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ಹಿಂಜರಿಕೆಯಿಂದ ಮಾಡುತ್ತಿದ್ದ ಕೆಲಸಗಳಲ್ಲಿಯೂ ಆತ್ಮವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳುವಿರಿ.
ಆಸ್ತಿ ಮತ್ತು ವಾಹನ ಖರೀದಿ: ವಾಹನ ಅಥವಾ ಆಸ್ತಿ ಖರೀದಿಸುವ ಯೋಗ ಕೂಡಿಬರಲಿದೆ.
ವ್ಯಾಪಾರ ಅವಕಾಶಗಳು: ರಿಯಲ್ ಎಸ್ಟೇಟ್ ಸಂಬಂಧಿತ ವ್ಯವಹಾರದಲ್ಲಿ ಇರುವವರಿಗೆ ಹೊಸ ವ್ಯಾಪಾರ ಅವಕಾಶಗಳು ಸಿಗಲಿವೆ.
ವೃತ್ತಿಜೀವನ ಮತ್ತು ಗೌರವ: ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದರ ಜೊತೆಗೆ ಗೌರವ-ಆದರಗಳು ಲಭಿಸಲಿವೆ.
ಆರೋಗ್ಯ ಸುಧಾರಣೆ: ಆರೋಗ್ಯದಲ್ಲೂ ಉತ್ತಮ ಸುಧಾರಣೆ ಕಾಣುವ ಸಾಧ್ಯತೆ ಇದೆ.
ಸಿಂಹ ರಾಶಿ
ವೃತ್ತಿ ಮತ್ತು ವ್ಯಾಪಾರ: ಹೊಸ ಪ್ರಯತ್ನಗಳು ಹಾಗೂ ಒಪ್ಪಂದಗಳಿಂದ ವ್ಯಾಪಾರದಲ್ಲಿ ಉತ್ತಮ ಫಲಿತಾಂಶ ಮತ್ತು ಲಾಭ ಸಿಗಲಿದೆ.
ಆರ್ಥಿಕತೆ ಮತ್ತು ಹೂಡಿಕೆ: ಸ್ವಂತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ.
ಶಿಕ್ಷಣ ಮತ್ತು ಆತ್ಮವಿಶ್ವಾಸ: ಉನ್ನತ ಶಿಕ್ಷಣದ ಪ್ರಯತ್ನಗಳಲ್ಲಿ ಪ್ರಗತಿ ಕಂಡುಬರಲಿದ್ದು, ಹೆಚ್ಛಿದ ಆತ್ಮವಿಶ್ವಾಸದಿಂದ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಕುಟುಂಬ: ಕುಟುಂಬದಲ್ಲಿದ್ದ ಹಳೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ

