ಈ ದಿನಾಂಕದಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ!
ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ವಿಶೇಷ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ.

ಹುಟ್ಟಿದ ದಿನಾಂಕ
ಪ್ರತಿಯೊಬ್ಬರಿಗೂ ಏನಾದ್ರೂ ಒಂದು ವಿಶೇಷ ಪ್ರತಿಭೆ ಇರುತ್ತೆ. ಆ ಪ್ರತಿಭೆಯಿಂದ ಅವರು ಎಲ್ಲರನ್ನೂ ಆಕರ್ಷಿಸುತ್ತಾರೆ. ಆದರೆ, ಕೆಲವರು ಇರ್ತಾರೆ.. ಅವರಿಗೆ ಬರದೇ ಇರೋದು ಏನೂ ಇಲ್ಲ. ಆಟ, ಪಾಟ, ನೃತ್ಯ, ಓದು ಹೀಗೆ ಎಲ್ಲದರಲ್ಲೂ ಮುಂದು. ಇವರನ್ನೇ ನಾವು ಬಹುಪ್ರತಿಭಾವಂತರು ಅಂತ ಕರೀತೀವಿ. ಇಂಥ ಪ್ರತಿಭೆ ಹುಟ್ಟಿದ ದಿನಾಂಕದಿಂದ ಬರುತ್ತೆ ಅಂತ ನೀವು ನಂಬ್ತೀರಾ? ನೀವು ಓದಿದ್ದು ನಿಜ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ವಿಶೇಷ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಹುಟ್ಟಿನಿಂದಲೇ ಇಂಥ ವಿಶೇಷ ಪ್ರತಿಭೆ ಇರುತ್ತೆ. ಮತ್ತೆ, ಆ ದಿನಾಂಕಗಳೇನು ಅಂತ ನೋಡೋಣ...
5ನೇ ತಾರೀಖು
ಯಾವ ತಿಂಗಳಲ್ಲಾದರೂ 5ನೇ ತಾರೀಖಿನಂದು ಹುಟ್ಟಿದವರು ಸ್ವಭಾವತಃ ಚುರುಕಾಗಿರುತ್ತಾರೆ. ಯಾವುದೇ ವಿಷಯವನ್ನು, ಕೆಲಸವನ್ನು ಆಸಕ್ತಿಯಿಂದ ಕಲಿಯಲು ಬಯಸುತ್ತಾರೆ. ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಇವರಲ್ಲಿರುತ್ತದೆ. ಏರಿಳಿತಗಳನ್ನು ಎದುರಿಸಿ ನಿಲ್ಲುವ ಶಕ್ತಿ ಇವರದು. ಜೀವನವನ್ನು ಆನಂದಿಸುವ ಬಯಕೆ ಇವರಲ್ಲಿ ಹೆಚ್ಚಾಗಿರುತ್ತದೆ. ಹೊಸ ತಂತ್ರಜ್ಞಾನ, ವಿಭಿನ್ನ ವಿಷಯಗಳ ಬಗ್ಗೆ ತಿಳಿದಿರುತ್ತಾರೆ. ಉದ್ಯೋಗಕ್ಕಾಗಿ ಒಂದು ಕ್ಷೇತ್ರವನ್ನು ಆರಿಸಿಕೊಂಡರೂ, ಇತರ ಹಲವು ಕ್ಷೇತ್ರಗಳಲ್ಲಿಯೂ ಇವರಿಗೆ ತಿಳುವಳಿಕೆ ಇರುತ್ತದೆ.
14ನೇ ತಾರೀಖು
ಯಾವ ತಿಂಗಳಲ್ಲಾದರೂ 14ನೇ ತಾರೀಖಿನಂದು ಹುಟ್ಟಿದವರು ಬಹುಪ್ರತಿಭಾವಂತರು. ತಮಗೆ ತಿಳಿಯದ ವಿಷಯವನ್ನು ಕಲಿಯುವವರೆಗೂ ಬಿಡುವುದಿಲ್ಲ. ನಾಯಕತ್ವದ ಗುಣಗಳು ಇವರಲ್ಲಿ ಹೆಚ್ಚಾಗಿರುತ್ತವೆ. ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರ ಕಂಡುಹಿಡಿಯುವಲ್ಲಿ ಮುಂದಿರುತ್ತಾರೆ. ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಯೋಜನಾಬದ್ಧವಾಗಿ ಮುನ್ನಡೆಯುವಲ್ಲಿ ಮುಂದಿರುತ್ತಾರೆ. ವ್ಯಾಪಾರ, ಹಣಕಾಸಿನ ಕ್ಷೇತ್ರಗಳಲ್ಲಿ ಉತ್ತಮ ಪ್ರತಿಭೆ ಹೊಂದಿರುತ್ತಾರೆ.
21ನೇ ತಾರೀಖು
21ನೇ ತಾರೀಖಿನಂದು ಹುಟ್ಟಿದವರು ಕ್ರಿಯಾಶೀಲರಾಗಿರುತ್ತಾರೆ. ಮೇಧಾಶಕ್ತಿ ಹೆಚ್ಚು. ಸೃಜನಶೀಲತೆ ಹೆಚ್ಚು. ಹೊಸ ಅವಕಾಶಗಳನ್ನು ಹುಡುಕುವಲ್ಲಿ, ಹೊಸತನವನ್ನು ಸ್ವೀಕರಿಸುವಲ್ಲಿ ಮುಂದಿರುತ್ತಾರೆ. ಸಂವಹನ ಚಾತುರ್ಯ, ನಾಯಕತ್ವದಲ್ಲಿ ಸ್ಪಷ್ಟತೆ ಇರುವುದರಿಂದ ಕಲೆ, ವ್ಯಾಪಾರ, ಸಂವಹನ ಕ್ಷೇತ್ರಗಳಲ್ಲಿ ಮಿಂಚುತ್ತಾರೆ.
23ನೇ ತಾರೀಖು
23ನೇ ತಾರೀಖಿನಂದು ಹುಟ್ಟಿದವರು ಸಾಮಾಜಿಕವಾಗಿ ಆಕರ್ಷಕರಾಗಿರುತ್ತಾರೆ. ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಪುಣರು. ಉತ್ಸಾಹದಿಂದ ಯಾವುದೇ ವಿಷಯವನ್ನು ತಿಳಿದುಕೊಳ್ಳಬಲ್ಲರು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇವರಲ್ಲಿದೆ. ಮಾರ್ಕೆಟಿಂಗ್, ಸಂಗೀತ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದಿರುತ್ತಾರೆ.