ಪಾಕಿಸ್ತಾನಿಗಳು ಭೇಟಿ ನೀಡುವ ಭಾರತದ 5 ಪ್ರಮುಖ ಧಾರ್ಮಿಕ ಕ್ಷೇತ್ರಗಳು
Muslim Religious places in india: ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಪಾಕಿಸ್ತಾನಿ ನಾಗರಿಕರು ಭೇಟಿ ನೀಡುವ ಹಲವಾರು ಮುಸ್ಲಿಂ ಧಾರ್ಮಿಕ ಸ್ಥಳಗಳಿವೆ.

ಜನಪ್ರಿಯ 5 ಮುಸ್ಲಿಂ ತಾಣಗಳು
ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ನಾಗರಿಕರಿಗೆ ದೇಶ ಬಿಡಲು ಸೂಚಿಸಿದೆ. ಲಕ್ಷಾಂತರ ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಹುಮಾಯೂನನಿಂದ ನಿರ್ಮಾಣವಾದ ಅಜ್ಮೀರ್ ದರ್ಗಾ ಪಾಕಿಸ್ತಾನಿ ಮುಸ್ಲಿಮರಲ್ಲಿ ಜನಪ್ರಿಯವಾದ ತಾಣ. ಮೊಘಲ್ ಚಕ್ರವರ್ತಿ ಹುಮಾಯೂನ್ ಇದನ್ನು ನಿರ್ಮಿಸಿದ್ದಾರೆ.ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
1431 ರಲ್ಲಿ ನಿರ್ಮಾಣವಾದ ಮುಂಬೈನ ಹಾಜಿ ಅಲಿ ದರ್ಗಾ ಮುಸ್ಲಿಮರ ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಪಾಕಿಸ್ತಾನಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಯ ಹಲವು ಸಿನಿಮಾಗಳ ಚಿತ್ರೀಕರಣವೂ ಸಹ ನಡೆದಿದೆ.
10,000 ಜನರಿಗೆ ಸ್ಥಳಾವಕಾಶ
ಹೈದರಾಬಾದ್‌ನ ಮಕ್ಕಾ ಮಸೀದಿ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಇಲ್ಲಿ 10,000 ಜನರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಬಹುದು.
ಪಿರಾನ್ ಕಲಿಯರ್ ದರ್ಗಾ
ಉತ್ತರಾಖಂಡದ ಹರಿದ್ವಾರದಲ್ಲಿರುವ ಪಿರಾನ್ ಕಲಿಯರ್ ದರ್ಗಾವು ಪಾಕಿಸ್ತಾನಿ ಭಕ್ತರನ್ನು ಆಕರ್ಷಿಸುತ್ತದೆ. ಭಾರತದ ಮೂಲೆ ಮೂಲೆಯಿಂದಲೂ ಇಲ್ಲಿಯ ದರ್ಗಾಗೆ ಬರುತ್ತಾರೆ.
ಏಷ್ಯಾದ ದೊಡ್ಡ ಮಸೀದಿ
ಭೋಪಾಲ್‌ನ ತಾಜ್-ಉಲ್-ಮಸೀದಿ ಏಷ್ಯಾದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಇಲ್ಲಿ ಲಕ್ಷಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸಬಹುದು.