ಅಬ್ಬಬ್ಬಾ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್ ಬೆಲೆ, 3 ಮರ್ಸಿಡಿಸ್ ಕಾರಿಗಿಂತಲೂ ಹೆಚ್ಚು!
ಕೆಲವೊಂದು ವಸ್ತುಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗೋ ಹಾಗೆ ದುಬಾರಿ ಬೆಲೆಯಲ್ಲಿಯೂ ಲಭ್ಯವಿರುತ್ತದೆ. ಕಾಸ್ಟ್ಲೀ ಕಾರುಗಳು, ಕೈಗಡಿಯಾರಗಳು, ವಜ್ರಗಳು ಮತ್ತು ಪೀಠೋಪಕರಣಗಳ, ಡ್ರೆಸ್, ಬೈಕ್‌ಗಳ ಬಗ್ಗೆ ನೀವು ಕೇಳಿರಬಹುದು. ಆದ್ರೆ ಕಾಸ್ಟ್ಲೀ ನೈಲ್‌ಪಾಲಿಶ್ ಬಗ್ಗೆ ಕೇಳಿದ್ದೀರಾ? ಇದರ ಬೆಲೆ ಮೂರು ಮರ್ಸಿಡಿಸ್ ಕಾರುಗಳಿಗಿಂತಲೂ ಹೆಚ್ಚು.
ಐಷಾರಾಮಿ ಲೈಫ್‌ಸ್ಟೈಲ್, ಕಾಸ್ಟ್ಲೀ ವಸ್ತುಗಳ ಬಗ್ಗೆ ಕ್ರೇಜ್ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಬ್ಬರು ಇಂಥಾ ದುಬಾರಿ ವಸ್ತುಗಳ ಸಂಗ್ರಹವನ್ನೇ ಹೊಂದಿರುತ್ತಾರೆ. ಕಾಸ್ಟ್ಲೀ ಕಾರುಗಳು, ಕೈಗಡಿಯಾರಗಳು, ವಜ್ರಗಳು ಮತ್ತು ಪೀಠೋಪಕರಣಗಳ, ಡ್ರೆಸ್, ಬೈಕ್‌ಗಳಿರೋದು ಸರಿ. ಆದ್ರೆ ಜಗತ್ತಿನಲ್ಲಿ ಅತೀ ದುಬಾರಿ ನೈಲ್ ಪಾಲಿಶ್ ಸಹ ಇದೆ ಅಂದ್ರೆ ನೀವ್ ನಂಬ್ತೀರಾ?
ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್ ಹೆಸರೇನು?
ವಿಶ್ವದ ಅತ್ಯಂತ ದುಬಾರಿ ನೈಲ್ ಪಾಲಿಶ್ ಹೆಸರು ಅಜಚುರ್. ಇದನ್ನು ಲಾಸ್ ಏಂಜಲೀಸ್‌ನ ಡಿಸೈನರ್ ಅಜಚುರ್ ಪೊಗೊಸಿಯನ್ ರಚಿಸಿದ್ದಾರೆ. ಇವರು ಪ್ರಪಂಚದಾದ್ಯಂತ ತಮ್ಮ ಐಷಾರಾಮಿ ವಸ್ತುಗಳಿಗೆ ಸಾಕಷ್ಟು ಜನಪ್ರಿಯರಾಗಿದ್ದಾರೆ.
ನೇಲ್ ಪಾಲಿಶ್ ಬೆಲೆಯೆಷ್ಟು?
ದೂರದಿಂದ ನೋಡಿದಾಗ ಈ ನೇಲ್ ಪಾಲಿಶ್ ಸಾಮಾನ್ಯವಾಗಿ ಕಾಣಿಸುತ್ತದೆ. ಆದರೆ ಹತ್ತಿರದಿಂದ ನೋಡಿದಾಗ ಅದರೊಳಗೆ ಅಡಗಿರುವ 267 ಕ್ಯಾರೆಟ್ ಕಪ್ಪು ಡೈಮಂಡ್ ಕಾಣಿಸುತ್ತದೆ. ಇದು 14.7 ಮಿಲಿಲೀಟರ್ ರಿಟ್ಜಿ ವಿನ್ಯಾಸವನ್ನು ಹೊಂದಿದೆ.
ಇದರ ಬೆಲೆ 1,59,83,750 ರೂ. ಅಂದರೆ ಬರೋಬ್ಬರಿ 1 ಕೋಟಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಈ ನೈಲ್ ಪಾಲಿಶ್ ಖರೀದಿಸುವ ಹಣದಲ್ಲಿ ಬರೋಬ್ಬರಿ 3 Mercedes-Benz GLAನ್ನು ಖರೀದಿಸಬಹುದು.
ಅಜಚರ್ ಸಾಮಾನ್ಯವಾಗಿ ತುಂಬಾ ಕಾಸ್ಲೀಯಾಗಿರುವ ನೈಲ್ ಪಾಲೀಶ್. ಇದು ಒಟ್ಟು 1,118 ವಜ್ರಗಳನ್ನು ಹೊಂದಿರುವ ವಜ್ರ-ಹೊದಿಕೆಯ ಕ್ಯಾಪ್‌ನೊಂದಿಗೆ ಬಾಟಲಿಯಲ್ಲಿ ಬರುತ್ತದೆ. ಆದರೆ ಇದು ಎಲ್ಲರಿಗೂ ಅರ್ಫೋಡೆಬಲ್ ಅಲ್ಲದಿರುವ ಕಾರಣ ಕಡಿಮೆ ಬೆಲೆಯ ನೇಲ್ ಪಾಲಿಷ್‌ನೊಂದಿಗೆ ಬಂದಿದೆ. ಪ್ರತಿ ಬಾಟಲ್ ಪಾಲಿಶ್ ಒಂದು ಕಪ್ಪು ವಜ್ರವನ್ನು ಮಾತ್ರ ಒಳಗೊಂಡಿರುತ್ತದೆ.
ಹೊಳೆಯುವ ಮತ್ತು ಬೆಲೆಬಾಳುವ ನೇಲ್ ಪಾಲಿಷ್ ಜೊತೆಗೆ, ಉತ್ಪನ್ನವು 60 ಹ್ಯಾಂಡ್‌ಸೆಟ್ ಕಪ್ಪು ವಜ್ರಗಳಿಂದ ಮುಚ್ಚಿದ ಕೈಯಿಂದ ಮಾಡಿದ ಪ್ಲಾಟಿನಂ ಸ್ಟರ್ಲಿಂಗ್ ಕ್ಯಾಪ್ ಬಾಟಲಿಯನ್ನು ಒಳಗೊಂಡಿದೆ. ಆದ್ದರಿಂದ ನೇಲ್ ಪಾಲಿಶ್ ಮುಗಿದಾಗ ನೀವು ಅದನ್ನು ನೆನಪಿಟ್ಟುಕೊಳ್ಳಲು ಇದನ್ನು ಇಟ್ಟುಕೊಳ್ಳಬಹುದಾಗಿದೆ. ಈ ನೇಲ್ ಪಾಲಿಷ್ 2012ರಲ್ಲಿ ಮತ್ತೆ ಪರಿಚಯಿಸಲಾಯಿತು.
ಇಷ್ಟು ದುಬಾರಿಯಾಗಿರುವ ಕಾರಣ ಈ ನೇಲ್ ಪಾಲಿಶ್‌ನ್ನು ಯಾರೂ ಖರೀದಿಸಿರಲು ಸಾಧ್ಯವಿಲ್ಲ ಎಂದು ನೀವಂದುಕೊಂಡರೆ ತಪ್ಪು. ಯಾಕೆಂದರೆ, ವರದಿಗಳ ಪ್ರಕಾರ, ಇಲ್ಲಿಯವರೆಗೆ 25 ಜನರು ಬ್ಲ್ಯಾಕ್ ಡೈಮಂಡ್ ನೇಲ್ ಪಾಲಿಷ್ ಅನ್ನು ಖರೀದಿಸಿದ್ದಾರೆ.