ಏನೂ ಮೇಕಪ್ ಮಾಡಿದೆಯೂ ಚೆಂದ ಕಾಣಿಸಬೇಕಾ? ಹೀಗ್ ಮಾಡಿದರೆ ವಾವ್ ಎಂತಾರೆ ಜನ!
ಮುಖ ಫಳ ಫಳ ಹೊಳೀಬೇಕು ಅಂದ್ರೆ ಮಾರುಕಟ್ಟೆಯಲ್ಲಿ ಸಿಗೋ ಹಲವು ಕ್ರೀಮ್‌ಗಳನ್ನು ಬಳಸಬಹುದು. ಆದರೆ, ಬರ್ತಾ ಬರ್ತಾ ತ್ವಚೆಯ ಮೂಲ ಸೌಂದರ್ಯವೇ ಇದರಿಂದ ಹಾಳಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಬದಲಾಗಿ ಮೇಕ್ ಅಪ್ ಇಲ್ಲದೆಯೇ ಚೆಂದ ಕಾಣಿಸುವಂತೆ ಡ್ರೆಸ್ ಮಾಡಿಕೊಂಡರೆ ಸದಾ ಸೌಂದರ್ಯ ಉಳಿದುಕೊಳ್ಳುತ್ತದೆ.
ಚರ್ಮದ ಆರೈಕೆ
ಮಹಿಳೆಯರು ಸುಂದರವಾಗಿ ಕಾಣಲು ಏನು ಬೇಕಾದರೂ ಮಾಡುತ್ತಾರೆ. ಎಷ್ಟೇ ದುಬಾರಿಯಾದರೂ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಮೇಕಪ್ ಮಾತ್ರ ನಮ್ಮನ್ನು ಸುಂದರವಾಗಿಸುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಬಹುದು. ಅದಕ್ಕಾಗಿ ಕೆಲವು ಕೆಲಸಗಳನ್ನು ಮಾಡಬೇಕು. ಏನಪ್ಪ ಅವು ಅಂತ ಇಲ್ಲಿ ಹೇಳ್ತೇವೆ ಕೇಳಿ!
ಆರೋಗ್ಯಕರ ಆಹಾರ
ಆರೋಗ್ಯಕರ ಆಹಾರದಲ್ಲಿ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಸಮೃದ್ಧವಾಗಿರುತ್ತವೆ. ಇವು ನಮ್ಮ ದೇಹವನ್ನು ಮಾತ್ರವಲ್ಲದೇ ನಮ್ಮ ಚರ್ಮವನ್ನೂ ಆರೋಗ್ಯವಾಗಿಡುತ್ತದೆ. ಆರೋಗ್ಯಕರ ಆಹಾರ ನಮ್ಮ ದೇಹವನ್ನು ಒಳಗಿನಿಂದ ಆರೋಗ್ಯವಾಗಿಡುವುದಲ್ಲದೆ ಚರ್ಮದ ನೈಸರ್ಗಿಕ ಹೊಳಪನ್ನು ಉಳಿಸುತ್ತದೆ.
ಅಗತ್ಯವಿರುವಷ್ಟ ನಿದ್ರೆ
ಹೆಚ್ಚು ನಿದ್ರೆ ಮಾಡುವುದು ಒಳ್ಳೆಯದಲ್ಲ. ಕಡಿಮೆ ನಿದ್ರೆ ಮಾಡುವುದೂ ಆರೋಗ್ಯಕ್ಕೆ ಅಪಾಯಕಾರಿ. ಕಡಿಮೆ ಸೌಂದರ್ಯದ ಮೇಲೆ ನೇರ ಪರಿಣಾಮ ಬೀರುತ್ತೆ. ನ್ಯಾಚುರಲ್ ಬ್ಯೂಟಿ ನಿಮ್ಮದಾಗಬೇಕು ಅಂದ್ರೆ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡಿ. ಇದು ನಿಮ್ಮನ್ನು ಲವಲವಿಕೆಯಿಂದ ಇಡುತ್ತದೆ. ಅದು ನಿಮಗೆ ಸಹಜ ಸೌಂದರ್ಯವನ್ನು ತಂದು ಕೊಡಬಲ್ಲದು.
ಅಗತ್ಯವಿದ್ದಷ್ಟು ವ್ಯಾಯಾಮ, ನೀರು
ವ್ಯಾಯಾಮ ನಮ್ಮ ದೇಹವನ್ನು ಮಾತ್ರ ಸದೃಢವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ ಎಂದೆಣಿಸಿದರೆ ತಪ್ಪು. ಪ್ರತಿದಿನ ಯೋಗ, ವ್ಯಾಯಾಮ, ಧ್ಯಾನ, ಬೆಳಗಿನ ನಡಿಗೆಯಿಂದ ದೇಹ, ಮನಸ್ಸಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಮಾನಸಿಕವಾಗಿ ಆರೋಗ್ಯವೂ ವೃದ್ಧಿಯಾಗುತ್ತದೆ. ಇದು ಸದಾ ನಿಮ್ಮನ್ನು ಯಂಗ್ ಕಾಣುವಂತೆ ಮಾಡುತ್ತದೆ.
ಸಾಕಷ್ಟು ನೀರು: ನಮ್ಮ ದೇಹಕ್ಕೆನೀರು ಬಹಳ ಮುಖ್ಯ. ನೀರುದೇಹವನ್ನು ಹೈಡ್ರೇಟ್ ಆಗಿಡುವುದಲ್ಲದೆ ದೇಹವನ್ನು ತಂಪಾಗಿಡುತ್ತದೆ. ಅಲ್ಲದೆ ಒಣ ಚರ್ಮ, ಮೊಡವೆ ಮುಂತಾದ ಚರ್ಮ ಸಂಬಂಧಿತ ಸಮಸ್ಯೆಗಳಿಗೂ ಇದು ಬೆಸ್ಟ್ ಮದ್ದು.
ಸ್ವಚ್ಛತೆಗೆ ಇರಲಿ ಆದ್ಯತೆ
ಸುಂದರವಾದ, ಹೊಳೆಯುವ ಚರ್ಮಕ್ಕಾಗಿ ಸ್ವಚ್ಛತೆಯೂ ಅತ್ಯಗತ್ಯ. ಪ್ರತಿದಿನ ಸ್ನಾನ ಮಾಡಬೇಕು. ಅಲ್ಲದೆ ನಿಯಮಿತವಾಗಿ ಕೂದಲನ್ನು ತೊಳೆಯಬೇಕು. ಇದು ಬ್ಯಾಕ್ಟೀರಿಯಾ, ತುರಿಕೆ, ಅಲರ್ಜಿ ಮುಂತಾದ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಸರಿಯಾದ ಗಾತ್ರದ ಬಟ್ಟೆಗಳು : ದೇಹಕ್ಕೆ ಸರಿಹೊಂದುವ ಬಟ್ಟೆ ಧರಿಸುವುದರಿಂದ ನೀವು ಮತ್ತು ನಿಮ್ಮ ವ್ಯಕ್ತಿತ್ವವು ಅದ್ಭುತವಾಗಿ ಕಾಣುತ್ತದೆ. ಇದು ನಿಮಗೆ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುವಂಚೆ ಮಾಡುತ್ತದೆ. ದೇಹಕ್ಕೆ ಫಿಟ್ ಆಗುವಂಥ ಬಟ್ಟೆಯನ್ನೇ ಧರಿಸಿ.
ಚರ್ಮ, ಕೂದಲಿನ ಆರೈಕೆ
ಯಾವಾಗ ಕೂದಲ್ ಮತ್ತು ಚರ್ಮದ ಆರೋಗ್ಯ ಹೆಚ್ಚುತ್ತೋ ಮಹಿಳೆಯರಿಗೆ ಸೌಂದರ್ಯ ಎದ್ದು ಕಾಣುತ್ತದೆ. ಈ ಎರಡೂ ಸದಾ ಗ್ಲೋ ಹಾಗೂವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಲೋವೆರಾದಂಥ ಉತ್ಪನ್ನಗಳನ್ನು ತಪ್ಪದೇ ಬಳಸಿದರೆ, ಸಹಜವಾಗಿ ಕೇಶ ಹಾಗೂ ತ್ವಚಾ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.