ಬಣ್ಣಗಳಲ್ಲಿ ಅಡಗಿದೆ ವ್ಯಕ್ತಿತ್ವ... ಯಾವ ಕಲರ್ ಏನನ್ನು ಸೂಚಿಸುತ್ತದೆ ಗೊತ್ತಾ ನಿಮಗೆ ?
ನಿಮ್ಮ ಕೂದಲಿನ ಬಣ್ಣ ಮತ್ತು ಚರ್ಮದ ಟೋನ್ ಅನ್ನು ಅವಲಂಬಿಸಿ ವಿವಿಧ ಬಣ್ಣಗಳ ಡ್ರೆಸ್ ಗಳನ್ನೂ ವಿಶೇಷ ಸಂದರ್ಭಕ್ಕಾಗಿ ನೀವು ಶಾಪಿಂಗ್ ಮಾಡಲು ಯೋಚಿಸುತ್ತೀರಿ ಆಲ್ವಾ? ಅದಕ್ಕೂ ಮುನ್ನ ಇದನ್ನ ಓದಿ. ಯಾಕೆಂದರೆ ನಿಮ್ಮ ದೇಹಕ್ಕೆ , ವ್ಯಕ್ತಿತ್ವಕ್ಕೆ ನೀವು ಯಾವ ಬಣ್ಣದ ಉಡುಪನ್ನು ಆಯ್ಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ತುಂಬಾ ತಿಳಿ ಗುಲಾಬಿ ಬಣ್ಣದ ಉಡುಗೆ ನಿಮಗೆ ಅತಿಯಾದ, ರೋಮ್ಯಾಂಟಿಕ್ ಲುಕ್ ನೀಡುತ್ತದೆ, ಆದ್ದರಿಂದ ಈ ಉಡುಗೆ ಡೇಟಿಂಗ್ಗೆ ಸೂಕ್ತವಾಗಿರುತ್ತದೆ!
ನಿಜವಾಗಿಯೂ ಕಣ್ಣಿಗೆ ಆಕರ್ಷಕವಾಗಿ ಕಾಣಲು, ಕಣ್ ಸೆಳೆಯುವಂತಹ ಲುಕ್ ಗಾಗಿ ಡಾರ್ಕ್ ಶೇಡ್ ಅಥವಾ ಡಾರ್ಕ್ ಕೆಂಪು ಬಣ್ಣ ಧರಿಸಿ.
ನೀವು ಬೋಲ್ಡ್ ಆಗಿ ಕಾಣಲು ಡಾರ್ಕ್ ನೇರಳೆ ಬಣ್ಣದ ಉಡುಗೆ ಧರಿಸಿ. ಇದು ನಿಮ್ಮನ್ನು ಗ್ಲಾಮರಸ್ ಆಗಿ ಕಾಣುವಾಗೆ ಮಾಡುತ್ತದೆ.
ನೇರಳೆ ಬಣ್ಣವನ್ನು ಹೊಳೆಯುವಂತೆ ಮಾಡಲು ಇದಕ್ಕೆ ಮೆಟೀರಿಯಲ್ ರಿಚ್ ಮತ್ತು ರಿಚ್ ಲುಕ್ ನೀಡಬೇಕು . ಆದ್ದರಿಂದ ಸ್ಯಾಟಿನ್ ಅಥವಾ ರೇಷ್ಮೆ ಯನ್ನು ಆಯ್ಕೆ ಮಾಡಿ .
ನೀವು ಶೈನ್ ಆಗಿರುವ ಕೂದಲನ್ನು ಹೊಂದಿದ್ದರೆ, ನಿಮ್ಮ ಪರ್ಫೆಕ್ಟ್ ಆಯ್ಕೆಯು ಲೈಟ್ ಹಳದಿ ಅಥವಾ ತುಂಬಾ ತಿಳಿ ಹಸಿರು ಬಣ್ಣದ್ದಾಗಿರಬೇಕು . ಬೇಬಿ ನೀಲಿ ಕೂಡ ಮುದ್ದಾಗಿ ಕಾಣಿಸಬಹುದು
ನಿಮ್ಮ ಕೂದಲಿನ ಬಣ್ಣ ಯಾವುದೇ ಇರಲಿ, ನೀವು ಅದನ್ನು ಸರಳವಾಗಿ ಸ್ಟೈಲ್ ಮಾಡಿ ಮತ್ತು ತಿಳಿ, ನ್ಯೂಟ್ರಾಲ್ ಉಡುಪನ್ನು ಧರಿಸಿದರೆ, ನಿಮ್ಮ ಲುಕ್ ಎಲ್ಲರ ಗಮನವನ್ನು ಸೆಳೆಯುತ್ತವೆ.
ನ್ಯೂಟ್ರಾಲ್ಗಳಂತೆಯೇ, ಕಪ್ಪು ಅಥವಾ ಡಾರ್ಕ್ ಬ್ಲೂ ಬಣ್ಣ ನಿಮ್ಮ ಮುಖ ಮತ್ತು ಕಣ್ಣುಗಳನ್ನು ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಮಾಡುತ್ತದೆ. ಫಾರ್ಮಲ್ ಕಾರ್ಯಕ್ರಮಕ್ಕಾಗಿ ಕಪ್ಪು ಮತ್ತು ಡಾರ್ಕ್ ಬ್ಲೂ ಉತ್ತಮ ಆಯ್ಕೆಗಳಾಗಿವೆ.