MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿದ್ರೆ ನಿಮ್ಮ ಗರ್ಲ್ ಫ್ರೆಂಡ್ Looking like a WOW ಅನ್ನೋದು ಗ್ಯಾರಂಟಿ!

ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿದ್ರೆ ನಿಮ್ಮ ಗರ್ಲ್ ಫ್ರೆಂಡ್ Looking like a WOW ಅನ್ನೋದು ಗ್ಯಾರಂಟಿ!

ಖ್ಯಾತ ಕ್ರಿಕೆಟೀಗ ಹಾರ್ದಿಕ್ ಪಾಂಡ್ಯ ತಮ್ಮ ಸ್ಟೈಲ್ ನಿಂದಾನೂ ಹೆಸರುವಾಸಿ. ಅವರ ಡ್ರೆಸ್ಸಿಂಗ್ ಸೆನ್ಸ್ (Dressing Sense) ನಿಜಕ್ಕೂ ಹೆಂಗಳೆಯರಿಗೆ ಇಷ್ಟವಾಗುತ್ತೆ. ನೀವು ಸ್ಟೈಲಿಶ್ (Sylish) ಆಗಿ ಕಾಣಿಸಬೇಕು ಅನ್ನೊದಾದ್ರೆ ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿ. 

2 Min read
Suvarna News
Published : Nov 30 2023, 11:40 AM IST
Share this Photo Gallery
  • FB
  • TW
  • Linkdin
  • Whatsapp
19

ಸದ್ಯ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅವರು ಗುಜರಾತ್ ಟೈಟಾನ್ಸ್ (Gujarat Titans) ತೊರೆದು ಮತ್ತೆ ಮುಂಬೈ ಇಂಡಿಯನ್ಸ್ ಗೆ (Mumbai Indian) ಟಿಂಗೆ ಸೇರಿಕೊಂಡಿದ್ದಾರೆ. ನಾವೀಗ ಅವರ ಆಟದ ಬಗ್ಗೆ ಮಾತನಾಡೋದು ಬೇಡ. ಬದಲಾಗಿ ಅವರ ಸ್ಟೈಲ್ ಬಗ್ಗೆ ಮಾತಡೋಣ. ಪಾಂಡ್ಯನ ಈ ಸ್ಟೈಲ್ ಗಳನ್ನು ನೀವು ಫಾಲೋ ಮಾಡಿದ್ರೆ, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತೀರಿ ನೋಡಿ… 
 

29

ವಿದೇಶಿ ಸ್ವ್ಯಾಗ್ ಇವರದ್ದು
ಟೀಮ್ ಇಂಡಿಯಾದ (Team India) ಅದ್ಭುತ ಆಟಗಾರ ಹಾರ್ದಿಕ್ ಪಾಂಡ್ಯ, ಹ್ಯಾಂಡ್ಸಮ್ (handsome) ಮಾತ್ರವಲ್ಲ ತುಂಬಾನೆ ಸ್ಟೈಲಿಶ್ ಕೂಡ ಹೌದು. ಅವರು ದೇಸಿಗಿಂತ ಹೆಚ್ಚಾಗಿ ವಿದೇಶಿ ಸ್ವ್ಯಾಗ್ ನಲ್ಲಿ ಅದ್ಭುತವಾಗಿ ಕಾಣಿಸ್ತಾರೆ. 

39

ಜೋಧ್ ಪುರಿ ಪ್ಯಾಟರ್ನ್ ಜಾಕೆಟ್
ಜಾಕೆಟ್ ಯಾವುದೇ ಸಿಂಪಲ್ ಔಟ್ ಫಿಟ್‌ಗೂ ಅದ್ಭುತ ಲುಕ್ ನೀಡುತ್ತೆ. ಅದರಲ್ಲೂ ನೀವು ಹಾರ್ದಿಕ್ ಪಾಂಡ್ಯ ಧರಿಸಿದಂತೆ ಕಪ್ಪು ವೆಲ್ವೆಟ್ ಜೋಧ್ ಪುರಿ ಪ್ಯಾಟರ್ನ್ ಜಾಕೆಟ್ ಜೊತೆಗೆ ಕಪ್ಪು ಪ್ಯಾಂಟ್, ಬ್ಲ್ಯಾಕ್ ಶೈನಿ ಶೂ ಧರಿಸಿದ್ರೆ ಚೆನ್ನಾಗಿರುತ್ತೆ. 
 

49

ಎಥ್ನಿಕ್ ಲುಕ್ (Ethnic Look) ಟ್ರೈ ಮಾಡಿ
ಹಾರ್ದಿಕ್ ಪಾಂಡ್ಯ ಎಥ್ನಿಕ್ ಲುಕ್ ನಲ್ಲಿ (ethinic look) ಅದ್ಭುತವಾಗಿ ಕಾಣಿಸ್ತಾರೆ ಅನ್ನೋದು ಸುಳ್ಳಲ್ಲ, ನೀವು ಕೂಡ ಮದುವೆ, ಹಬ್ಬ ಹರಿದಿನಗಳ ಸಮಾರಂಭಕ್ಕೆ ರೆಡ್ ಪ್ಯಾಂಟ್ ಜೊತೆಗೆ ರೆಡ್ ಮತ್ತು ಬ್ಲೂ ಪ್ರಿಂಟ್ ಕುರ್ತಾ ಟ್ರೈ ಮಾಡಬಹುದು. 

59

ಪೂಲ್ ಪಾರ್ಟಿಗಾಗಿ ಓಪನ್ ಶರ್ಟ್
ಹಾರ್ದಿಕ್ ಪಾಂಡ್ಯ ಸ್ಟೈಲ್ ಕಾಪಿ ಮಾಡೋದಾದ್ರೆ ನೀವು ಸಹ ಕಪ್ಪು ಮತ್ತು ಗ್ರೀನ್ ಶೇಡೆಡ್ ಓಪನ್ ಶರ್ಟ್ (open shirt) ಟ್ರೈ ಮಾಡಬಹುದು. ಇದರ ಜೊತೆಗೆ ಕುತ್ತಿಗೆಗೆ ಎರಡು ಚೈನ್, ಬೆರಳುಗಳಿಗೆ ರಿಂಗ್ ಮತ್ತು ಕೈಗೆ ದೊಡ್ಡ ಡಯಲ್ ವಾಚ್ ಧರಿಸಿದ್ರೆ ಕೂಲ್ ಆಗಿ ಕಾಣಿಸುತ್ತೀರಿ. 
 

69

ಅರಿಶಿನ ಶಾಸ್ತ್ರಕ್ಕಾಗಿ 
ನಿಮ್ಮ ಕ್ಲೋಸ್ ಫ್ರೆಂಡ್ ಅಥವಾ ಕುಟುಂಬದಲ್ಲಿ ಯಾರದ್ದೇ ಮದುವೆಯ ಅರಿಶಿನ ಶಾಸ್ತ್ರವಿರಲಿ ಅಥವಾ ಯಾವುದೇ ಸಮಾರಂಭಕ್ಕೂ ಅದ್ಭುತವಾಗಿ ಕಾಣಿಸುತ್ತೆ ಹಳದಿ ಬಣ್ಣದ ವೈಟ್ ಎಂಬ್ರಾಯಿಡರಿ ವರ್ಕ್ ಕುರ್ತಾ ಜೊತೆಗೆ ವೈಟ್ ಪ್ಯಾಂಟ್. 

79

ಫುಲ್ ಬ್ಲ್ಯಾಕ್ ಲುಕ್ 
ನೀವು ಟ್ರಾವೆಲ್ ಮಾಡುತ್ತಿದ್ದರೆ, ಅಥವಾ ಪಾರ್ಟಿಗೆ ಹೋಗುತ್ತಿದ್ದರೆ ಬ್ಲಾಕ್ ಪ್ಯಾಂಟ್, ಬ್ಲ್ಯಾಕ್ ಟಿ ಶರ್ಟ್, ಬ್ಲ್ಯಾಕ್ ಪಫರ್ ಜಾಕೆಟ್ ಜೊತೆಗೆ ಟೈಟ್ ಸ್ನೀಕರ್ಸ್ ಧರಿಸಿದ್ರೆ ಕ್ಲಾಸಿ ಲುಕ್ ನೀಡುತ್ತೆ. 
 

89

ಓವರ್ ಸೈಜ್ ಜಾಕೆಟ್
ಯಂಗ್ ಆಗಿ ಜೊತೆಗೆ ಸ್ಟೈಲಿಶ್ , ಹ್ಯಾಂಡ್ಸಮ್ ಆಗಿ ಕಾಣಲು ಬಯಸಿದ್ರೆ ನೀಲಿ ಬಣ್ಣದ ಓವರ್ ಸೈಜ್ ಜಾಕೆಟ್ (over size jacket) ಧರಿಸಬಹುದು. ಇದರ ಜೊತೆಗೆ ಸನ್ ಗ್ಲಾಸ್ ಧರಿಸಿ ನಿಮ್ಮ ಲುಕ್ ಪರ್ಫೆಕ್ಟ್ ಆಗಿಸಿ.

99

ರಾಯಲ್ ಲುಕ್ ಗಾಗಿ ಟಕ್ಸಿಡೋ ಟ್ರೈ ಮಾಡಿ
ನೀವು ಯಾವುದೇ ನೈಟ್ ಪಾರ್ಟಿ (night party) ಅಥವಾ ವೆಡ್ಡಿಂಗ್ ಪಾರ್ಟಿಗೆ ಹೋಗುತ್ತಿದ್ದರೆ, ಹಾರ್ದಿಕ್ ಧರಿಸಿದಂತೆ ಇಂತಹ ಬ್ಲ್ಯಾಕ್ ಟಕ್ಸಿಡೋ ಧರಿಸಬಹುದು. ಇದರ ಜೊತೆಗೆ ಬ್ಲ್ಯಾಕ್ ಬೂಟ್ಸ್, ಸನ್ ಗ್ಲಾಸ್ ಚೆನ್ನಾಗಿ ಕಾಣಿಸುತ್ತೆ. 
 

About the Author

SN
Suvarna News
ಹಾರ್ದಿಕ್ ಪಾಂಡ್ಯ
ಫ್ಯಾಷನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved