MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ನೇಲ್ ಪಾಲಿಶ್ ಡ್ರೈ ಚಿಂತೆ ಬಿಡಿ, ಹೀಗೆ ಮರುಬಳಕೆ ಮಾಡಿ

ನೇಲ್ ಪಾಲಿಶ್ ಡ್ರೈ ಚಿಂತೆ ಬಿಡಿ, ಹೀಗೆ ಮರುಬಳಕೆ ಮಾಡಿ

ಮಹಿಳೆಯರು ಹಳೆಯ ಮತ್ತು ಡ್ರೈ ಆದ ನೈಲ್ ಪಾಲಿಶ್ ಅನ್ನು ಎಸೆಯುತ್ತಾರೆ, ಆದರೆ ಅದನ್ನು ಸರಿ ಪಡಿಸಬಹುದು. ಡ್ರೈ ನೇಲ್ ಪಾಲಿಶ್ ಅನ್ನು ಸರಿಪಡಿಸಲು ಮಾತ್ರವಲ್ಲದೆ ಅದನ್ನು ಮರುಬಳಕೆ ಮಾಡಲು ಅನೇಕ ಸಲಹೆಗಳಿವೆ. ಅನೇಕ ಮಹಿಳೆಯರು ತಮ್ಮ ನೇಲ್ ಪಾಲಿಶ್ ಅನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ, ಇದು ತಪ್ಪು ಮಾರ್ಗ. ನೇಲ್ ಪಾಲಿಶ್ ಡ್ರೈ ಆಗಿರೋದನ್ನು ಸರಿ ಮಾಡೋದು ಹೇಗೆ?

2 Min read
Author : Suvarna News | Asianet News
Published : Sep 20 2021, 04:59 PM IST
Share this Photo Gallery
  • FB
  • TW
  • Linkdin
  • Whatsapp
111

ಫ್ರಿಡ್ಜಿನಲ್ಲಿ ಸಂಗ್ರಹಿಸುವುದರಿಂದ ನೇಲ್ ಪಾಲಿಶ್ ಹಾಳಾಗುತ್ತದೆ, ಅವುಗಳನ್ನು ಹೆಪ್ಪುಗಟ್ಟಿಸುತ್ತದೆ. ಕೆಲವೊಮ್ಮೆ, ನಿರ್ವಹಣೆ ಸರಿಯಾಗಿಲ್ಲದ ಕಾರಣ ಅವು ಒಣಗುತ್ತವೆ. ಇಂದು ನಾವು ಹಳೆಯ ಮತ್ತು ಡ್ರೈ ಆದ ನೇಲ್ ಪಾಲಿಶ್ ಅನ್ನು ಸರಿಪಡಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಮತ್ತು ತಂತ್ರಗಳನ್ನು ತೋರಿಸುತ್ತೇವೆ.

211

ಬಿಸಿ ನೀರಿನ ಬಳಕೆ
ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಗುರವಾಗಿ ಬಿಸಿ ಮಾಡಿ ಮತ್ತು ಒಣಗಿದ ನೇಲ್ ಪಾಲಿಶ್ ಅನ್ನು ಅದರಲ್ಲಿ ಅದ್ದಿ. ಈಗ ನೇಲ್ ಪಾಲಿಶ್ ಅನ್ನು ಕನಿಷ್ಠ 20 ನಿಮಿಷಗಳ ಕಾಲ ನೀರಿನಲ್ಲಿ ಬಿಡಿ. ನಂತರ ಅದನ್ನು ತೆಗೆದು ಚೆನ್ನಾಗಿ ಅಲುಗಾಡಿಸಿ. ನೀರು ತುಂಬಾ ಬಿಸಿಯಾಗಿರಬಾರದು ಅಥವಾ ತಣ್ಣಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. 

311

ಬಳಸುವ ನೀರು ಉಗುರು ಬೆಚ್ಚಗಿಗಿಂತ ಸ್ವಲ್ಪ ಬೆಚ್ಚಗಿರಬೇಕು. ನೇಲ್ ಪಾಲಿಶ್ ಒಣಗಲು ಪ್ರಾರಂಭಿಸಿದಾಗ ಈ ವಿಧಾನವನ್ನು ಪ್ರಯತ್ನಿಸಿ. ಬಹಳ ಸಮಯದಿಂದ ಒಣಗಿರುವ ನೇಲ್ ಪಾಲಿಶ್ ಅನ್ನು ಸರಿಪಡಿಸಲು ಈ ವಿಧಾನವನ್ನು ಪ್ರಯತ್ನಿಸಬೇಡಿ. ಅದು ಸಾಧ್ಯವಾಗೋದಿಲ್ಲ. 

411

ನೇಲ್ ಪಾಲಿಶ್ ಥಿನ್ನರ್ ಬಳಕೆ
ನೇಲ್ ಪಾಲಿಶ್ ಒಣಗಿದ್ದರೆ,  ಅದಕ್ಕೆ ಥಿನ್ನರ್ ಅನ್ನು ಸಹ ಬಳಸಬಹುದು. ನೇಲ್ ಪಾಲಿಶ್ ನಲ್ಲಿ 2 ರಿಂದ 3 ಹನಿ ಥಿನ್ನರ್ ಹಾಕಿ ಮತ್ತು ಅದನ್ನು ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ. ಕನಿಷ್ಠ 2 ನಿಮಿಷಗಳ ಕಾಲ ಉಜ್ಜಿ ಮತ್ತು ನಂತರ ಉಗುರುಗಳ ಮೇಲೆ ಹಚ್ಚಿ. ಆವಾಗ ನೇಲ್ ಪಾಲಿಶ್ ಚೆನ್ನಾಗಿ ಬರುತ್ತದೆ.

511

ಅನೇಕ ಮಹಿಳೆಯರು ನೇಲ್ ಪೇಂಟ್ ರಿಮೂವರ್ ಗಳನ್ನು ಸಹ ಬಳಸುತ್ತಾರೆ, ಆದರೆ ಇದು ನೇಲ್ ಪಾಲಿಶ್ ನಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಮಾರುಕಟ್ಟೆಗೆ ಹೋಗಿ ನೇಲ್ ಪಾಲಿಶ್ ಥಿನ್ನರ್ ಗಳನ್ನು ಖರೀದಿಸಿ ಮತ್ತು ಬಳಸಿ. ಇದು ಸಹಾಯ ಮಾಡುತ್ತದೆ.

611

ಬಿಸಿಲಿನಲ್ಲಿ ನೇಲ್ ಪಾಲಿಶ್ ಇರಿಸಿ
ಕೆಲವೊಮ್ಮೆ ನೇಲ್ ಪಾಲಿಶ್ ಹೆಪ್ಪುಗಟ್ಟುವಿಕೆಯನ್ನು ಹೊಂದಿದರೆ, ಇದು ವಾಸ್ತವವಾಗಿ ಒಣಗುವ ಆರಂಭಿಕ ಹಂತಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನೇಲ್ ಪಾಲಿಶ್ ಅನ್ನು 15 ನಿಮಿಷಗಳ ಕಾಲ ಬಿಸಿಲಿನಲ್ಲಿ ಹೊರಗೆ ಇರಿಸಿ ನಂತರ ಚೆನ್ನಾಗಿ ಅಲುಗಾಡಿಸಿ. 

711

ನೇಲ್ ಪಾಲಿಶ್ ಬಿಸಿಲಿನಲ್ಲಿ ಇರಿಸುವುದು ನೇಲ್ ಪಾಲಿಶ್ ನಲ್ಲಿರುವ ದ್ರವಗಳನ್ನು ಕರಗಿಸುತ್ತದೆ ಮತ್ತು ಮತ್ತೆ ಪೇಂಟ್ ರೂಪದಲ್ಲಿ ಬರುತ್ತದೆ. ನಂತರ ನೇಲ್ ಪಾಲಿಶ್ ಅನ್ನು ಕೋಣೆಯ ತಾಪಮಾನದಲ್ಲಿ ಇರಿಸಿ, ಸ್ವಲ್ಪ ಸಮಯದ ನಂತರ ಅದನ್ನು ಉಗುರಿನ ಮೇಲೆ ಹಚ್ಚಬಹುದು.

811

ನೇಲ್ ಪಾಲಿಶ್ ಒಣಗುವುದನ್ನು ತಡೆಯುವ ಮಾರ್ಗಗಳು
ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚುವಾಗೆಲ್ಲ ಫ್ಯಾನ್ ಆನ್ ಮಾಡಬೇಡಿ. ವಾಸ್ತವವಾಗಿ, ಉಗುರು ಪೇಂಟ್ ಮುಚ್ಚಳವು ಆ ಸಮಯದಲ್ಲಿ ತೆರೆದಿರುತ್ತದೆ, ಇದರಿಂದಾಗಿ ಅದು ಬೇಗನೆ ಒಣಗುತ್ತದೆ. ಆದ್ದರಿಂದ ಹಚ್ಚುವಾಗ ಮುಚ್ಚಳವನ್ನು ಹೆಚ್ಚು ಹೊತ್ತು ತೆರೆದಿಡಬೇಡಿ.

911

ಯಾವಾಗಲೂ ಕೋಣೆಯ ತಾಪಮಾನದಲ್ಲಿ ನೇಲ್ ಪಾಲಿಶ್ ಅನ್ನು ಇರಿಸಿ, ಅನೇಕ ಜನರು ಅದನ್ನು ರೆಫ್ರಿಜರೇಟರ್ ನಲ್ಲಿ ಇಡುತ್ತಾರೆ, ಅದು ತಪ್ಪು ಮಾರ್ಗ. ಬದಲಾಗಿ ನೀವು ಪೆಟ್ಟಿಗೆಯನ್ನು ಬಳಸಬಹುದು. ನೇಲ್ ಪಾಲಿಶ್ ಹಚ್ಚಿದ ಮೇಲೆ ಮುಚ್ಚಳ ಟೈಟ್ ಆಗಿ ಮುಚ್ಚಿ. 

1011


ನೇಲ್ ಪಾಲಿಶ್ ಒಣಗುವುದನ್ನು ತಡೆಯಲು ಹೊಸ ಪಾರದರ್ಶಕ ನೇಲ್ ಪೇಂಟ್ ಅನ್ನು ಸಹ ಬಳಸಬಹುದು. ವಾಸ್ತವವಾಗಿ, ಥಿನ್ನರ್ ಗಳ ಜೊತೆಗೆ, ಹೊಸ ಉಗುರು ಬಣ್ಣವನ್ನು ಬಳಸಬಹುದು. ಎರಡನ್ನೂ ಬೆರೆಸಿದ ನಂತರ ತಾಜಾ ಬಣ್ಣ ಸಿಗುವುದಲ್ಲದೆ ನೇಲ್ ಪಾಲಿಶ್ ಕೂಡ ಚೆನ್ನಾಗಿರುತ್ತದೆ.

1111

ನೇಲ್ ಪೇಂಟ್ ಬಳಸಿದಾಗ ನೇಲ್ ಪಾಲಿಶ್ ಸುತ್ತಲೂ ಕುಳಿತುಕೊಳ್ಳುತ್ತದೆ. ಅಷ್ಟೇ ಅಲ್ಲ, ಬ್ರಶ್‌ಗಳೂ ತುಂಬಾ ಕೊಳಕಾಗಿರುತ್ತವೆ. ಈ ಸಂದರ್ಭದಲ್ಲಿ ರಿಮೂವರ್ ಹತ್ತಿಯಲ್ಲಿ ನೇಲ್ ಪೇಂಟ್ ತೆಗೆದುಕೊಂಡು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಈ ಎಲ್ಲಾ ಸಲಹೆಗಳು ನೇಲ್ ಪಾಲಿಶ್ ಒಣಗದಂತೆ ರಕ್ಷಿಸುತ್ತದೆ. ಹೀಗೆ ಡ್ರೈ ನೇಲ್ ಪಾಲಿಶ್ ಅನ್ನು ಸಹ ಸರಿಪಡಿಸಬಹುದು.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಬೆಲೆ ಹೆಚ್ಚಿದ್ರು ರಿಸ್ಕ್ ತೆಗೆದುಕೊಳ್ಳೋಕೆ ಹೆಣ್ಮಕ್ಳು ರೆಡಿ, ಚೆಂದ ಕಾಣಲು IV ಥೆರಪಿ ಮೊರೆ ಹೋದ ಬೆಂಗಳೂರಿಗರು
Recommended image2
Bella Hadid: 'ಕೆಲಸ ಬಿಟ್ಟಾಗ ನನ್ನನ್ನು ಕಸದಂತೆ ಕಂಡರು' - ನೋವು ತೋಡಿಕೊಂಡ ಸೂಪರ್‌ಮಾಡೆಲ್ ಯಾರು?
Recommended image3
ಕೇವಲ 5 ಗ್ರಾಂ ಚಿನ್ನದ ಸರಗಳಿಗೆ 100 ವರ್ಷ ಬಾಳಿಕೆ ಗ್ಯಾರಂಟಿ! ಇಲ್ಲಿವೆ ಡಿಸೈನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved