10 ವರ್ಷ ಜಗತ್ತು ಸುತ್ತಿದೆ ಈ ರೆಡ್ ಡ್ರೆಸ್..! ಇಲ್ನೋಡಿ ಫೋಟೋಸ್
ಜನ ದೇಶ ಸುತ್ತೋಕೆ ಕಷ್ಟಪಡುವಾಗ ಇಲ್ಲೊಂದು ದಿರಿಸು 10 ವರ್ಷ ಪ್ರಪಂಚವನ್ನೇ ಸುತ್ತಿದೆ. ಯಾಕೆ..? ಏನಿದರ ವಿಶೇಷ..? ಇಲ್ಲಿ ನೋಡಿ
ಬ್ರಿಟಿಷ್ ಕಲಾವಿದೆ ಕ್ರಿಸ್ಟಿ ಮೆಕ್‌ಲಿಯೋಡ್ ಜಾಗತಿಕ ಎಂಬ್ರಾಯ್ಡರಿ ಯೋಜನೆಯೊಂದನ್ನು 2009 ಆರಂಭಿಸಿದ್ದರು. ಈ ಯೋಜನೆ ಹೆಸರು ರೆಡ್ ಡ್ರೆಸ್ ಪ್ರಾಜೆಕ್ಟ್. ಇದಕ್ಕೆ ಬ್ರಿಟಿಷ್ ಕೌನ್ಸಿಲ್ ಹಣಕಾಸು ನೆರವು ನೀಡಿತ್ತು.
ಇದಕ್ಕೆ 10 ವರ್ಷ ಪೂರ್ತಿಯಾಯ್ತು. 10 ವರ್ಷದಲ್ಲಿ ಈ ಕೆಂಪು ಡ್ರೆಸ್ 28 ರಾಷ್ಟ್ರ ಸುತ್ತಾಡಿದೆ. ಇದರಲ್ಲಿ 202 ಕಲಾವಿದರು ಎಂಬ್ರಾಯ್ಡರಿ ರಚಿಸಿದ್ದಾರೆ. ಜಗತ್ತಿನ ಅದ್ಭುತ ಎಂಬ್ರಾಯ್ಡಡರಿ ಕಲೆಯನ್ನು ತುಂಬಿಕೊಂಡ ಈ ಡ್ರೆಸ್ ನೋಡೋಣ ಬನ್ನಿ
ಕರುಣಾಮಯಿ ಡ್ರೆಸ್ ಇದು: ಈ ಬಟ್ಟೆಯ ಮೂಲಕ ಬಹಳಷ್ಟು ಜನಾಂಗದ ಮಹಿಳೆಯರೂ ಒಟ್ಟು ಸೇರಿದ್ದಾರೆ. ಇದು ಎಲ್ಲ ಹಿನ್ನೆಲೆಯ ಮಹಿಳೆಯರನ್ನು ಒಮದೇ ವೇದಿಕೆಗೆ ತರಲು ಬಯಸಿತ್ತು. ಈ ಮೂಲಕ ಮಹಿಳೆಯರು ಒಟ್ಟಾಗಿ ಕೆಲಸ ಮಾಡಿದರು.
ಕಲಾವಿರ ಕಥೆಯೇ ಇದೆ ಈ ಉಡುಪಿನಲ್ಲಿ: ಈ ಬಟ್ಟೆಯನ್ನು ಬಹಳಷ್ಟು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ದುಬೈ, ಇಟಲಿ, ಲಂಡನ್, ಮೆಕ್ಸಿಕೋ, ಪ್ಯಾರಿಸ್‌ನ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡಿದೆ.
ಇದರಲ್ಲಿ ಕಲಾವರಿದರೆ ವೈವಿಧ್ಯಮಯ ಕಥೆ ಹೇಳಿದ್ದಾರೆ. ಈ ಪ್ರಾಜೆಕ್ಟ್ ಮಾಡಿದ ಎಲ್ಲ ಕಲಾವಿದರಿಗೂ ಸಂಭಾವನೆ ನೀಡಿ ಬೆಂಬಲಿಸಲಾಗಿದೆ.
ಒಗ್ಗಟ್ಟಿನ ಕೆಲಸ: ಈ ಪ್ರಾಜೆಕ್ಟ್‌ನಲ್ಲಿ ಫ್ಯಾಲಸ್ತೀನ್‌ನ ನಿರಾಶ್ರಿತರು, ಕೊಸೋವೋ ಸಿವಿಲ್ ವಾರ್‌ನ ಸಂತ್ರಸ್ತರು, ಸೌತ್ ಆಫ್ರಿಕಾದ ಜನ, ಜಪಾನ್, ಪ್ಯಾರೀಸ್, ಸ್ವೀಡನ್, ಪೆರು, ಮುಂಬೈ, ಸೌದಿ ಅರೆಬಿಯಾದ ಕಲಾವಿದರೂ ಕೆಲಸ ಮಾಡಿದ್ದಾರೆ.
ಭಾರತದ ಸಂಸ್ಕೃತಿ ಮತ್ತು ಪ್ರೀತಿ: ಭಾರತದಲ್ಲಿ ಮಾಡಲಾದ ಎಂಬ್ರಾಯ್ಡರಿಯೂ ಇದೆ ಈ ಬಟ್ಟೆಯಲ್ಲಿ. ಇದರಲ್ಲಿ ಸುಂದರವಾದ ತಾವರೆಯನ್ನು ರಚಿಸಲಾಗಿದೆ. ಝರಿ ವಿಧಾನದಲ್ಲಿ ಇದನ್ನು ಮಾಡಲಾಗಿದೆ.