ರೇಷ್ಮೆ ಸೀರೆಯುಟ್ಟು ಮಿಂಚಿದ ಕಾವ್ಯ ಶಾಸ್ತ್ರಿ, ಮದ್ವೆ ಊಟ ಯಾವಾಗ ಅಂತ ಕೇಳ್ತಿದ್ದಾರೆ ಫ್ಯಾನ್ಸ್!
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಫೋಟೋಶೂಟ್ ಮಾಡ್ಕೊಂಡಿದ್ದಾರೆ. ಕಾವ್ಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಫೋಟೋಶೂಟ್ ಮಾಡ್ಕೊಂಡಿದ್ದಾರೆ. ಕಾವ್ಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ನಿರೂಪಕಿಯಾಗಿಯಾಗಿಯೂ ಹಲವು ಕಾರ್ಯಕ್ರಮಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುವ ನಟಿ ಇತ್ತೀಚಿಗೆ ಗ್ರ್ಯಾಂಡ್ ಸೀರೆಯುಟ್ಟು,ಆಭರಣಗಳನ್ನು ಧರಿಸಿ ಫೋಟೋಶೂಟ್ ಮಾಡ್ಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕಾವ್ಯಾ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕಾವ್ಯಾ ಶಾಸ್ತ್ರಿ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಗಾರ್ಜಿಯಸ್, ಪ್ರೆಟ್ಟೀ ಎಂದು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ಕಾವ್ಯಾ ಕೊನೆಯದಾಗಿ ರಾಧಿಕಾ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಸೀರಿಯಲ್ ನಿಂದ ಅರ್ಧದಲ್ಲೇ ಹೊರ ಬಂದ ನಂತರ ನಟಿ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲ.
ಸದ್ಯಕ್ಕೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, ವಿವಿಧ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುತ್ತಾ, ಟ್ರಾವೆಲ್ ಮಾಡುತ್ತಾ ಜೀವನ ಎಂಜಾಯ್ ಮಾಡ್ತಿದ್ದಾರೆ.
ಇದೀಗ ಹಲವು ಸಮಯದ ಬಳಿಕ ಕಾವ್ಯಾ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಜಾನಕಿ ಸಂಸಾರ ಸೀರಿಯಲ್‌ನಲ್ಲಿ ಕಾವ್ಯಾ ಶಾಸ್ತ್ರೀ ಮೊದಲ ಬಾರಿಗೆ ವಿಲ್ಲನ್ ಆಗಿ ನಟಿಸುತ್ತಿದ್ದಾರೆ.
ಜಾನಕಿ ಸಂಸಾರ (Janaki Samsara) ದೊಡ್ಡದಾದ ಫ್ಯಾಮಿಲಿ. ಈ ಕುಟುಂಬವನ್ನು ಗಟ್ಟಿಯಾಗಿ ಜೋಡಿಸಿ ನಿಲ್ಲಿಸಿರೋದೆ ಜಾನಕಿ ಮತ್ತು ಆಕೆಯ ಗಂಡ, ಮನೆಯ ಹಿರಿಯ ಮಗ. ಅಂಜನಾ ಮತ್ತು ಸೂರಜ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಮನೆಗೆ ಹೊಸದಾಗಿ ಬರುವ ಸೊಸೆಯ ಪಾತ್ರದಲ್ಲಿ ಕಾವ್ಯಾ ನಟಿಸುತ್ತಿದ್ದಾರೆ. ಇವರ ಪಾತ್ರದ ಹೆಸರು ಅನಾಮಿಕ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.