ಅನಂತ್-ರಾಧಿಕಾ ಪ್ರಿ-ವೆಡ್ಡಿಂಗ್‌ಗೆ ನೀತಾ ಅಂಬಾನಿ ಧರಿಸಿದ್ದು ಅಪ್ಪಟ 52.58 ಕ್ಯಾರೆಟ್ ವಜ್ರದ ಉಂಗುರ, ಅಬ್ಬಬ್ಬಾ ಬೆಲೆ ಇಷ್ಟೊಂದಾ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಸಮಾರಂಭದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಫುಲ್ ಗ್ರ್ಯಾಂಡ್ ಆಗಿ ಕಾಣಿಸಿಕೊಂಡರು. ಅದರಲ್ಲೂ ನೀತಾ ಅಂಬಾನಿ ಧರಿಸಿದ್ದ 500 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ನೆಕ್ಲೇಸ್ ಎಲ್ಲೆಡೆ ವೈರಲ್ ಆಗಿದೆ. ಇದರ ಜೊತೆಗೆ ನೀತಾ, ಅಪ್ಪಟ 52.58 ಕ್ಯಾರೆಟ್ ವಜ್ರದ ಉಂಗುರ ಧರಿಸಿದ್ದರು. ಇದರ ಬೆಲೆಯೆಷ್ಟು ಗೊತ್ತಾ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಸಮಾರಂಭ ಅತ್ಯಂತ ಅದ್ದೂರಿಯಾಗಿ ನಡೆದಿದೆ. ದೇಶ-ವಿದೇಶದ ಗಣ್ಯರು ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಅಂಬಾನಿ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಫುಲ್ ಗ್ರ್ಯಾಂಡ್ ಆಗಿ ಕಾಣಿಸಿಕೊಂಡರು. ಅದರಲ್ಲೂ ನೀತಾ ಅಂಬಾನಿ, ಸೀರೆ, ಡ್ರೆಸ್ ಆಭರಣಗಳು ಎಲ್ಲರ ಗಮನ ಸೆಳೆದವು.
ಬಿಲಿಯನೇರ್ ಮುಕೇಶ್ ಅಂಬಾನಿ ಪತ್ನಿಯಾಗಿರುವ ನೀತಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿ. ಗುಜರಾತ್‌ನ ಜಾಮ್ನಾ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಸಮಾರಂಭದಲ್ಲೂ ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಯನ್ನು ತೋರಿಸಿದ್ದಾರೆ.
ಸಮಾರಂಭಗಳಲ್ಲಿ ನೀತಾ ಅಂಬಾನಿ ಧರಿಸಿದ್ದ ಗ್ರ್ಯಾಂಡ್ ಸ್ಯಾರಿ ಹಾಗೂ ನೆಕ್ಲೇಸ್ ಎಲ್ಲರ ಗಮನ ಸೆಳೆದಿದೆ. ನೀತಾ ಸಮಾರಂಭಕ್ಕೆ ಕಾಂಜೀವರಂ ಸೀರೆಯೊಂದಿಗೆ ಕೋಟಿಗಟ್ಟಲೆ ಬೆಲೆಬಾಳುವ ಪಚ್ಚೆ ಹೊದಿಸಿದ ವಜ್ರದ ನೆಕ್ಲೇಸ್ ಧರಿಸಿದ್ದರು, ಅದರ ಫೋಟೋ ಎಲ್ಲೆಡೆ ವೈರಲ್ ಆಗಿದೆ.
400ರಿಂದ 500 ಕೋಟಿ ರೂಪಾಯಿ ಮೌಲ್ಯದ ನೀತಾ ಅಂಬಾನಿ ಡೈಮಂಡ್ ನೆಕ್ಲೇಸ್ ಎಲ್ಲರ ಗಮನ ಸೆಳೆದಿರೋದು ನಿಜ. ಆದರೆ ಬಹುತೇಕರು ನೀತಾ ಅಂಬಾನಿ, ಬೆರಳಿನಲ್ಲಿದ್ದ ದೊಡ್ಡ ವಜ್ರದ ಉಂಗುರವನ್ನು ಗಮನಿಸಿಲ್ಲ. ಇದು ಸಹ ಕೋಟಿ ಕೋಟಿ ಬೆಲೆ ಬಾಳುತ್ತೆ ಎಂದು ತಿಳಿದುಬಂದಿದೆ.
ಈ ಉಂಗುರವನ್ನು ಮಿರರ್ ಆಫ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಮೊಘಲ್ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಬೃಹತ್ ವಜ್ರದ ಉಂಗುರದ ಬೆಲೆ ಅಂದಾಜು 53 ಕೋಟಿ ರೂ. ಆಗಿದೆ. ಇದು 52.58 ಕ್ಯಾರೆಟ್ ತೂಗುತ್ತದೆ. NMACC ಉದ್ಘಾಟನಾ ಸಮಾರಂಭದಲ್ಲಿ ಸಹ ನೀತಾ ಅಂಬಾನಿ ಅದೇ ಉಂಗುರವನ್ನು ಧರಿಸಿದ್ದರು.
ಇನ್ನು ನೀತಾ ಅಂಬಾನಿ ಧರಿಸಿದ್ದ 500 ಕೋಟಿಯ ನೆಕ್ಲೃಸ್ ಬಗ್ಗೆ ಹೇಳುವುದಾದರೆ, ಪಚ್ಚೆ ಮತ್ತು ವಜ್ರಗಳ ಗಾತ್ರವನ್ನು ನೋಡಿದರೆ, ಅದು ಹೆಚ್ಚು ಮೌಲ್ಯಯುತವಾದ ಕ್ಯಾರಟ್‌ಗಳು ಎಂದು ಅರ್ಥಮಾಡಿಕೊಳ್ಳಬಹುದು.
ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಕೋಟಿಯಲ್ಲಿದೆ. ಹಾರವೇ ಸುಮಾರು ರೂ. 400-500 ಕೋಟಿ ಬೆಲೆ ಬಾಳುತ್ತದೆ ಎಂದು ತಿಳಿದುಬಂದಿದೆ..
ಮಾರ್ಚ್ 3, 2024ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಗಳಲ್ಲಿ ಅಂತಿಮ ಕಾರ್ಯಕ್ರಮಕ್ಕಾಗಿ, ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಆರಿಸಿಕೊಂಡರು. ಇದರೊಂದಿಗೆ ಪಚ್ಚೆ ನೆಕ್ಲೇಸ್‌ನ್ನು ಪೇರ್ ಮಾಡಲಾಗಿತ್ತು. ಇದು ಕೊಹಿನೂರ್ ವಜ್ರಕ್ಕಿಂತ ಕಡಿಮೆಯಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.