MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಸೀರೆ ಉಡೋವಾಗ ಹುಡುಗೀರು ಈ ಮಿಸ್ಟೇಕ್ಸ್ ಅವಾಯ್ದ್ ಮಾಡ್ಲೇ ಬೇಕು

ಸೀರೆ ಉಡೋವಾಗ ಹುಡುಗೀರು ಈ ಮಿಸ್ಟೇಕ್ಸ್ ಅವಾಯ್ದ್ ಮಾಡ್ಲೇ ಬೇಕು

ಮದುವೆ ಸೀಸನ್ (marriage season)  ಅಥವಾ ಹಬ್ಬದ ಸೀಸನ್ ಎಲ್ಲಾ ಸಂದರ್ಭದಲ್ಲಿ ಮಹಿಳೆಯರಿಗೆ ಇಷ್ಟವಾಗೋದು ಸೀರೆ. ಈ ಸೀಸನ್ ಗಳಲ್ಲಿ ಯಾವುದಲ್ಲಾದರೂ ಒಂದರಲ್ಲಿ ಭಾಗಿಯಾಗಲು, ನಾವು ಒಂದು ಸೀರೆನ ಈಗಾಗಲೆ ರೆಡಿ ಮಾಡಿಟ್ಟುಕೊಂಡಿರುತ್ತೇವೆ. ಈ ಸೀರೆ ಎಂಬುದು ಪ್ರತಿಯೊಂದು ದೇಹದ ಪ್ರಕಾರಕ್ಕೆ ಸೂಕ್ತವಾದ ಬಟ್ಟೆ. ಇದನ್ನು ಧರಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

2 Min read
Suvarna News | Asianet News
Published : Oct 17 2021, 09:36 PM IST| Updated : Oct 17 2021, 09:39 PM IST
Share this Photo Gallery
  • FB
  • TW
  • Linkdin
  • Whatsapp
111

ಎಷ್ಟೇ ಸಾಂಪ್ರದಾಯಿಕ ಉಡುಗೆಯನ್ನು (traditional wear)ಇಷ್ಟ ಪಟ್ಟರೂ ಮಾಡರ್ನ್ ಹುಡುಗಿಯರು ಸಹ ಇಷ್ಟ ಪಟ್ಟು ಧರಿಸೋ ಉಡುಗೆ ಅಂದರೆ ಅದು ಸೀರೆ. ಹಾಗಂತ ಸೀರೆನ ಹೇಗೋ ಉಡಕ್ಕೆ ಆಗತ್ತಾ, ಇಲ್ಲಾ ಅಲ್ವ? ಸೀರೆ ಉಡುವಾಗ ನೀವು ಕೆಲವೊಂದಿಷ್ಟು ಅಂಶಗಳನ್ನು ಗಮನಿಸಲೇಬೇಕು.

211

ಸೀರೆಯನ್ನು ಎಲ್ಲಾ ಡ್ರೆಸ್ ಗಿಂತಲೂ ಸೆಕ್ಸಿಯಾದ ಔಟ್ ಫಿಟ್ (sexy out fit) ಎನ್ನಲಾಗುತ್ತದೆ. ಸುಂದರವಾದ ಈ ಭಾರತೀಯ ಧಿರಿಸನ್ನು ಧರಿಸುವಾಗ ನೀವು ಚೆನ್ನಾಗಿಯೇ ಕಾಣಬೇಕು. ಒಂದು ವೇಳೆ ನೀವು ಉಟ್ಟದ್ದು ಸರಿ ಇಲ್ಲ ಎಂದಾದರೆ ನಗೆ ಪಾಟಲಿಗೀಡಾಗುವುದು ಖಂಡಿತಾ. ಸೀರೆ ಉಟ್ಟು ತುಂಬಾ ಚೆನ್ನಾಗಿ ಕಾಣಬೇಕು ಎಂದಾದರೆ ಈ ತಪ್ಪುಗಳನ್ನು ನೀವು ಮಾಡಲೇಬಾರದು.. 

311

ಬ್ಲೌಸ್ ಫಿಟ್ಟಿಂಗ್ ಸರಿಯಾಗಿರಿ (blouse fitting): ಹೌದು ಮುಖ್ಯವಾಗಿ ನೀವು ಸುಂದರವಾಗಿ ಕಾಣಲು ಬೇಕಾಗಿರುವುದು ಸೀರೆ ಜೊತೆಗಿರುವ ಬ್ಲೌಸ್. ಬ್ಲೌಸ್ ಸರಿಯಾದ ಫಿಟ್ಟಿಂಗ್ ನಲ್ಲಿ ಇದ್ದರೆ ಸೀರೆಯು ಚೆನ್ನಾಗಿ ಕಾಣುತ್ತದೆ. ಜೊತೆಗೆ ನೀವು ಕೂಡ ಸಖತ್ತಾಗಿ ಕಾಣಿಸುತ್ತೀರಿ. 

411

ಬ್ರಾ ಕಡೆಗೆ ಗಮನ ಇರಲಿ  (perfect bra): ಬ್ಯಾಕ್ ಲೆಸ್ ಬ್ಲೌಸ್ ಗಳನ್ನು ಧರಿಸುವ ಸಂದರ್ಭದಲ್ಲಿ ಪ್ಯಾಡೆಡ್ ಬ್ಲೌಸ್ ಹೊಂದಿರುವುದು ಉತ್ತಮ. ಆದಾಗ್ಯೂ, ಬ್ಲೌಸ್ ಕೆಳಗೆ ಬ್ರಾ ಧರಿಸುವಾಗ, ಅದರ ಬಣ್ಣವು ಬ್ಲೌಸ್ ಗೆ ಮ್ಯಾಚ್ ಆಗಿರಬೇಕು ಎಂದು ಯಾವಾಗಲೂ ಖಚಿತಪಡಿಸಿಕೊಳ್ಳಿ. ಮಿಸ್ ಫಿಟ್ ಬ್ರಾಗಳು ಪದೇ ಪದೇ ಬ್ಲೌಸ್ ಸರಿಪಡಿಸುವತ್ತ ಗಮನ ಹರಿಸುವಂತೆ ಮಾಡುತ್ತೆ. 

511

ತಪ್ಪಾದ ಫೂಟ್ ವೇರ್ (footwear) : ಸೀರೆ ಜೊತೆ ತಪ್ಪಿಯೂ ಸಹ ಕ್ಯಾಶುಯಲ್ ಫ್ಲಾಟ್ ಫಾರ್ಮ್ ಹೀಲ್ ಅಥವಾ ವೇಜಸ್ ಧರಿಸಬೇಡಿ. ಫ್ಲಾಟ್ ಮತ್ತು ಸ್ಲಿಪ್ಪರ್ ಕೂಡ ಬೇಡ. ಸುಂದರವಾಗಿ ಕಾಣಿಸಬೇಕು ಎಂದಾದರೆ ಹಾಯ್ ಹೀಲ್ ಸ್ಯಾಂಡಲ್ ಮತ್ತು ಸ್ಟಿಲಿಟೊಸ್ ಧರಿಸಿ. ಇದರಿಂದ ನೀವು ಸಣ್ಣಗೆ ಮತ್ತು ಉದ್ದವಾಗಿ ಕಾಣುತ್ತೀರಿ. 
 

611

ಹೆವಿ ಜ್ಯುವೆಲ್ಲರಿ (heavy jewelry) : ಮದುವೆ ಸಮಾರಂಭಕ್ಕೆ ಓಕೇ.. ಆದರೆ ಬೇರೆಲ್ಲಾ ಕಾರ್ಯಕ್ರಮಗಳಿಗೆ ಸೀರೆ ಜೊತೆ ಹೆವಿ ಜ್ಯುವೆಲ್ಲರಿ ಬೇಡಿ. ಸೀರೆ ಗ್ರ್ಯಾಂಡ್ ಆಗಿದ್ದು ಅದರ ಜೊತೆಗೆ ಹೆವಿ ಜ್ಯುವೆಲ್ಲರಿ ಧರಿಸಿದರೆ ಚೆನ್ನಾಗಿ ಕಾಣೋದಿಲ್ಲ. ಅದರ ಬದಲಾಗಿ ಸಣ್ಣ ಇಯರಿಂಗ್, ಕೈ ತುಂಬಾ ಬಳೆಯ ಬದಲು ಒಂದು ಬ್ರೇಸ್ ಲೇಟ್ ಮತ್ತು ಸಣ್ಣ ಪೆಂಡೆಂಟ್ ಇರುವ ಚೈನ್ ಧರಿಸಿದರೆ ಚೆನ್ನಾಗಿ ಕಾಣುತ್ತದೆ. 
 

711

ಪೆಟಿಕೋಟ್ ಸರಿಯಾಗಿರಲಿ (petticoat) : ನೀವು ಕೆಳಗೆ ಧರಿಸಿರುವ ಪೆಟಿಕೋಟ್ ಪರಿಪೂರ್ಣವಾಗಿದ್ದರೆ ಮಾತ್ರ 9 ಗಜ ಸೀರೆ ಸುಂದರವಾಗಿ ಕಾಣಬಹುದು. ಇದು ನಿಜವಾಗಿಯೂ ಸೀರೆಯಿಂದ ಹಿಡಿದು ನಿಮ್ಮ ಒಟ್ಟಾರೆ ಸೌಂದರ್ಯವನ್ನು ನಿರ್ಧರಿಸುತ್ತದೆ.  ಆದ್ದರಿಂದ, ನೀವು ಎಂದಿಗೂ ಈ ವಿಷಯವನ್ನು ನಿರ್ಲಕ್ಷಿಸಬಾರದು.

811

ಸ್ಟೈಲ್ ಜೊತೆಗೆ ಎಕ್ಸ್ ಪೆರಿಮೆಂಟ್  (self experiment): ಸೀರೆಯನ್ನು ಬೇರೆ ಬೇರೆ ರೀತಿಯಲ್ಲಿ ಉಡಲಾಗುತ್ತದೆ. ಆದರೆ ನೀವು ಹೊಸ ಸ್ಟೈಲ್ ಟ್ರೈ ಮಾಡಲು ಬಯಸಿದರೆ ಅದರಿಂದ ನೀವು ಕಂಫರ್ಟೇಬಲ್ ಆಗಿರಬಲ್ಲಿರಾ ಎಂಬುದನ್ನು ಗಮನಿಸಿ. ಇದರ ಬದಲಾಗಿ ನಿಮಗೆ ಸರಿಯಾಗಿ ಗೊತ್ತಿರುವ ರೀತಿಯಲ್ಲೇ ಸ್ವಲ್ಪ ಸ್ಟೈಲಿಶ್ ಆಗಿ ಸೀರೆ ಉಡಿ. 

911

ಸಂದರ್ಭಕ್ಕೆ ಸರಿಯಾಗಿ (according to the occasion)  : ಒಂದೇ ರೀತೀಯ ಸೀರೆ ಎಲ್ಲಾ ಕಡೆ ಧರಿಸಬೇಡಿ. ಆಫೀಸ್ ಗೆ (office)ಹೋಗುವಾಗ ಕಾಟನ್ ಸೀರೆ (cotton saree) ಅಥವಾ ಹಗುರ ಫ್ಯಾಬ್ರಿಕ್ ಸೀರೆ (fabric saree) , ಮದುವೆ ಸಂದರ್ಭದಲ್ಲಿ ರೇಷ್ಮೆ ಸೀರೆ, ಡಿಸೈನರ್ ಸೀರೆ ಆಯ್ಕೆ ಮಾಡಿ. 

1011

ನೆರಿಗೆ ಸರಿಯಾಗಿರಲಿ (Untidy Pleats):ನೆರಿಗೆ ಸರಿಯಾಗಿದ್ದರೆ ಮಾತ್ರ ಸೀರೆ ಉಟ್ಟದಕ್ಕೆ ಅಂದ ಬರುತ್ತದೆ. ಅಚ್ಚುಕಟ್ಟಾಗಿ ಮಾಡಿದ ಪ್ಲೀಟ್ ಗಳಿಲ್ಲದೆ ಇದ್ದರೆ ಅಂದ ಕೆಡುವುದು ಖಂಡಿತಾ. ಆದುದರಿಂದ ಮೊದಲು ಸರಿಯಾಗಿ ನೆರಿಗೆ ಹಾಕುವುದನ್ನು ಕಲಿಯಿರಿ. ಇದು ಸುಂದರ ಲುಕ್ ನೀಡುತ್ತದೆ. 

1111

ತುಂಬಾ ಪಿನ್ ಬೇಡ (safety pins) : ಕೆಲವರಿಗೆ ಸೀರೆ ಉಟ್ಟರೆ ಎಲ್ಲೆಂದರಲ್ಲಿ ಪಿನ್ ಹಾಕುವ ಅಭ್ಯಾಸ ಇರುತ್ತದೆ. ನೀವು ತುಂಬಾ ಪಿನ್ ಹಾಕಿದರೆ ಸೀರೆ ಹರಿದು ಹೋಗಬಹುದು. ಆದುದರಿಂದ ಸೀರೆ ಸರಿಯಾಗಿ ನಿಲ್ಲಲು ಎಷ್ಟು ಪಿನ್ ಬೇಕು ಅಷ್ಟು ಕಡಿಮೆ ಸಂಖ್ಯೆಯಲ್ಲಿ ಪಿನ್ ಹಾಕಿ. ಇದರಿಂದ ಸೀರೆಯನ್ನು ಮತ್ತೆ ತೆಗೆಯುವಾಗಲು ಸುಲಭವಾಗುತ್ತದೆ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved