MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಮಿಸ್ ವರ್ಲ್ಡ್ 2024: ತನ್ನ ಉತ್ತರದ ಮೂಲಕ ಎಲ್ಲರ ಹೃದಯ ಗೆದ್ದ ಸಿನಿ ಶೆಟ್ಟಿ

ಮಿಸ್ ವರ್ಲ್ಡ್ 2024: ತನ್ನ ಉತ್ತರದ ಮೂಲಕ ಎಲ್ಲರ ಹೃದಯ ಗೆದ್ದ ಸಿನಿ ಶೆಟ್ಟಿ

71ನೇ ವಿಶ್ವ ಸುಂದರಿ ಫೈನಲ್‌ನ ಟಾಪ್ 8 ಸ್ಪರ್ಧಿಗಳಲ್ಲಿ ಸ್ಥಾನ ಪಡೆದ ಭಾರತದ ಸಿನಿ ಶೆಟ್ಟಿ ಪ್ರಶ್ನೋತ್ತರ ಸುತ್ತಿನಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನದ ಮೂಲಕ ಅನೇಕ ಹೃದಯಗಳನ್ನು ಗೆದ್ದರು. 

1 Min read
Suvarna News
Published : Mar 10 2024, 03:13 PM IST
Share this Photo Gallery
  • FB
  • TW
  • Linkdin
  • Whatsapp
18

ಮುಂಬೈನಲ್ಲಿ ನಡೆದ 71 ನೇ ವಿಶ್ವ ಸುಂದರಿ ಅಂತಿಮ ಸ್ಪರ್ಧೆಯಲ್ಲಿ ಭಾರತದ ಸಿನಿ ಶೆಟ್ಟಿ ತಮ್ಮ ಅದ್ಬುತ ಪ್ರದರ್ಶನಗಳೊಂದಿಗೆ ಅಂತಿಮ 8ನ್ನು ಪ್ರವೇಶಿಸಿದ್ದರು. ಪ್ರಶ್ನೋತ್ತರ ಸುತ್ತಿನಲ್ಲಿ 22 ವರ್ಷದ ಸಿನಿಯ ಉತ್ತರ ಎಲ್ಲರ ಮನಸ್ಸನ್ನು ಗೆದ್ದಿತು.

28

ಪ್ರಶ್ನೋತ್ತರ ಸುತ್ತಿನಲ್ಲಿ ಕರಣ್ ಜೋಹರ್ ಅವರು ಸಿನಿ ಶೆಟ್ಟಿ ಅವರನ್ನು, 'ಸಾಮಾಜಿಕ ಮಾಧ್ಯಮದ ಮೂಲಕ ಮಹಿಳೆಯರು ಸಬಲರಾಗುವ ಮಾರ್ಗವನ್ನು ನೀವು ಸೂಚಿಸಬಹುದೇ?' ಎಂದು ಕೇಳಿದರು.

38

ಇದಕ್ಕೆ ಸಿನಿ ಶೆಟ್ಟಿ, ಉತ್ತರಿಸಿ, 'ಇಂದು ನಾವು ಎಂಥ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆಂದರೆ, ಸಾಮಾಜಿಕ ಮಾಧ್ಯಮವು ಪ್ರಭಾವಿಯಾಗಿದ್ದು, ಸಂಭಾಷಣೆ ಮತ್ತು ಅರಿವಿನಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದೆ. '

48

ಜನರೇಷನ್ Z ನಲ್ಲಿ ವಾಸಿಸುವ ಮತ್ತು ಅದರ ಭಾಗವಾಗಿರುವ ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಸಾಮಾಜಿಕ ಮಾಧ್ಯಮ ಹೊಂದಿದೆ ಎಂದು ನಾನು ನಂಬುತ್ತೇನೆ. ಮಹಿಳಾ ಸಬಲೀಕರಣವನ್ನು ಪ್ರಗತಿಪರ ಮತ್ತು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವ ಶಕ್ತಿ ಅದಕ್ಕಿದೆ. 

58

ಮಿಸ್ ವರ್ಲ್ಡ್ ವೇದಿಕೆಯಲ್ಲಿ ನಿಂತು ಸಾಮಾಜಿಕ ಮಾಧ್ಯಮವನ್ನು ಅತ್ಯಂತ ಉಪಯುಕ್ತ ರೀತಿಯಲ್ಲಿ ಬದಲಾವಣೆ ತರುವ ಭಾಗವಾಗಿ ಬಳಸುವ ಅಂಶದ ಬಗ್ಗೆ ಬೆಳಕು ಚೆಲ್ಲಲು ಬಯಸುತ್ತೇನೆ' ಎಂದು ಉತ್ತರಿಸಿದರು. 
 

68

ಸಿನಿ ಶೆಟ್ಟಿಯ ಈ ಪ್ರಭಾವಶಾಲಿ ಉತ್ತರ ಬಹಳಷ್ಟು ಜನರಿಗೆ ಸಂತಸ ತಂದಿತು. ಮುಂಬೈನಲ್ಲಿ ಹುಟ್ಟಿ ಬೆಳೆದ 22 ವರ್ಷ ವಯಸ್ಸಿನ ಭರತನಾಟ್ಯ ನೃತ್ಯಗಾರ್ತಿ ಶೆಟ್ಟಿ, 2022 ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಪಡೆದಿದ್ದಾರೆ. 

78

ಮುಂಬೈನಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಮಿಸ್ ವರ್ಲ್ಡ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ.

88
Sini Shetty

Sini Shetty

ಭಾರತವು ಇದುವರೆಗೆ ಆರು ಬಾರಿ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದಿದೆ -- ರೀಟಾ ಫರಿಯಾ ಪೊವೆಲ್ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017) ಈ ಕಿರೀಟ ಪಡೆದವರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved