ಈ ಟ್ರಾವೆಲ್ ಮಾಡೆಲ್ ಅಂದಕ್ಕೆ ಲಕ್ಷಾಂತರ ಜನ ಫಿದಾ! ಈಕೆಯ ತಿಂಗಳ ಸಂಪಾದನೆಯೇ 7 ಲಕ್ಷ ! ಆದ್ರೊಂದು ಟ್ವಿಸ್ಟ್
ಕೆಲವೊಮ್ಮೆ ನಾವು ನೋಡುತ್ತಿರುವುದು ಯಾವುದೂ ನಿಜವಾಗಿರೋದಿಲ್ಲ. ಕೆಲವು ವ್ಯಕ್ತಿಗಳ ಮುಖ ಮಾತು ನೋಡಿ ನಾವು ಅವರು ಹೀಗೆಯೇ ಇರಬಹುದು ಎಂದು ಅಂದುಕೊಳ್ಳುತ್ತೇವೆ, ಆದರೆ ನಿಜ ಜೀವನದಲ್ಲಿ ಅದು ಹಾಗಾಗಿರೋದಿಲ್ಲ.
ಕಾಲ ಈಗ ಬಹಳಷ್ಟು ಬದಲಾಗಿದೆ. ಮೊದಲು ಮಾನವರು ಮಾಡುತ್ತಿದ್ದ ಕೆಲಸವನ್ನು ಈಗ ಯಂತ್ರಗಳು ಮಾಡಲು ಪ್ರಾರಂಭಿಸಿವೆ. ಪ್ರತಿಯೊಂದು ವಿಷಯ, ಜನರ ಜೀವನ ಸಹ ವಿಭಿನ್ನವಾಗಿದೆ. ಕೆಲವು ಸ್ಥಳಗಳಲ್ಲಿ, ಮಾನವರನ್ನು ಬದಲಾಯಿಸಲು ಯಂತ್ರಗಳನ್ನು ತಯಾರಿಸಲಾಗುತ್ತಿದೆ. ಕೆಲಸದಲ್ಲಿ ಮಾತ್ರವಲ್ಲ,ಈಗ ಬೇರೆ ಕ್ಷೇತ್ರದಲ್ಲೂ ಈ ತಂತ್ರಜ್ಞಾನಗಳು (Technologies) ಪ್ರಮುಖ ಪಾತ್ರ ವಹಿಸಿವೆ. ಮನುಷ್ಯರಿಗೆ ಪರ್ಯಾಯವಿಲ್ಲ ಎಂದು ಜನರು ಭಾವಿಸಿದ್ದರು, ಆದರೆ ಈಗ ಮನುಷ್ಯರ ಜಾಗವನ್ನೂ ಸಹ ಸಾಫ್ಟ್ ವೇರ್ ಗಳು ತಮ್ಮದಾಗಿಸಿಕೊಳ್ಳುತ್ತಿವೆ.
ನಾವು ಯಾವುದರ ಬಗ್ಗೆ ಹೇಳ್ತಿದೀವಿ, ಏನು ಹೇಳುತ್ತಿದ್ದೇವೆ ಎಂದು ನಿಮಗೆ ಅರ್ಥ ಆಗ್ತಿಲ್ವೇ? ಇಲ್ಲಿದೆ ವಿಷ್ಯ ಕೇಳಿ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ನೆಟ್ ವರ್ಕಿಂಗ್ ಜಾಸ್ತಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ (social media) ಅದೆಷ್ಟೋ ಮಾಡೆಲ್ ಗಳನ್ನೂ ನೀವೂ ಫಾಲೋ ಮಾಡುತ್ತಿರಬಹುದು. ಆದರೆ ಅಲ್ಲಿ ಕಾಣೋರೆಲ್ಲ ನಿಜ ಅಂತ ನೀವು ಅಂದುಕೊಂಡ್ರೆ ನೀವು ತಪ್ಪು ತಿಳ್ಕೊಂಡಿದ್ದೀರಿ.
ವಿದೇಶದಲ್ಲಿ ಒಬ್ಬ ಮಾಡೆಲ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಆಕೆ ತನ್ನ ಟ್ರಾವೆಲ್ ಫೋಟೋಗಳ ಮೂಲಕ ಜನರೊಂದಿಗೆ ಕನೆಕ್ಟ್ ಆಗುವ ಸುಂದರಿ. ತನ್ನ ಚಿತ್ರಗಳನ್ನು ಕೆಲವು ಪ್ಲಾಟ್ ಫಾರ್ಮ್ ಗಳಲ್ಲಿ ಹಾಕುತ್ತಾಳೆ, ಅದನ್ನು ಜನರು ತುಂಬಾ ಇಷ್ಟಪಡುತ್ತಾರೆ. 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಈ ಮಾಡೆಲ್, ತನ್ನ ಟ್ರಾವೆಲ್ ಫೋಟೋಗಳನ್ನು(Travel Photo) ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ್ ತಿಂಗಳಿಕೆ 17 ಲಕ್ಷ ಗಳಿಸ್ತಾರೆ. ಆದರೆ ವಾಸ್ತವಾಂಶ ತಿಳಿದ್ರೆ ಮಾತ್ರ ನೀವು ಶಾಕ್ ಆಗ್ತೀರಿ.
ನೀವು ನೋಡುತ್ತಿರುವುದು ನಿಜವಲ್ಲ!
ವರದಿಯ ಪ್ರಕಾರ, ಲಿಲಿ ರೈನ್ (Lily Rain) ಎಂಬ ರೂಪದರ್ಶಿ ಟ್ರಾವೆಲ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಿಂಗಳಿಗೆ 17 ಲಕ್ಷಕ್ಕೂ ಹೆಚ್ಚು ಗಳಿಸುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಆದಾಗ್ಯೂ, ಅದರ ಹಿಂದೆ ಒಂದು ರಹಸ್ಯ ಅಡಗಿದೆ, ಅದನ್ನ ಕೇಳಿದ್ರೆ ಆಕೆಯನ್ನು ಫಾಲೋ ಮಾಡ್ತಿರೋ, ಆಕೆಯ ಸೌಂದರ್ಯಕ್ಕೆ ಮನಸೋತು, ಆಕೆಯನ್ನು ಆರಾಧಿಸುತ್ತಿರೋ ಅಭಿಮಾನಿಗಳ ಹೃದಯ ಒಡೆದು ಹೋಗುತ್ತೆ.
ಜನರಿಗೆ ಗೊತ್ತಿರದ ರಹಸ್ಯವೆಂದರೆ ಈ ಮಾಡೆಲ್ (Model) ವಾಸ್ತವವಾಗಿ ಅಸ್ತಿತ್ವದಲ್ಲೇ ಇಲ್ಲ. ಅಂದರೆ ಆಕೆ ಮನುಷ್ಯಳೇ ಅಲ್ಲ. ಇದು ಕೃತಕ ಬುದ್ಧಿಮತ್ತೆಯಿಂದ ಅಂಥ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence) ನಿಂದ ರಚಿಸಲಾದ ವರ್ಚುವಲ್ ಮಾಡೆಲ್. ಆದರೆ ಜನರಿಗೆ ಮಾತ್ರ ಈಕೆ ಎಐ ಮಾಡೆಲ್ ಅನ್ನೋದೆ ಗೊತ್ತಿಲ್ಲ. ಈ ಎಐ ಮಾಡೆಲ್ ಸೌಂದರ್ಯ ಮತ್ತು ಜೀವಂತಿಕೆ ಜನರಿಗೆ ಹುಚ್ಚು ಹಿಡಿಸಿರೋದಂತೂ ನಿಜ.
ಅಂತಹ ಹೆಚ್ಚಿನ ಎಐ ಮಾಡೆಲ್ ಗಳಿದ್ದಾರೆ...
ಲಿಲ್ಲಿ ರೇನ್ ಚಿತ್ರಗಳನ್ನು ಎಷ್ಟು ಸುಂದರವಾಗಿ ತಯಾರಿಸಲಾಗಿದೆಯೆಂದರೆ, ಆಕೆ ಮನುಷ್ಯಳು ಅಲ್ವೇ ಅಲ್ಲ ಎಂದು ಯಾರಿಗೂ ತಿಳಿದಿಲ್ಲ. ಲಿಲಿ ಮಾತ್ರವಲ್ಲ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇತರ ಕೆಲವು ಎಐ ಮಾಡೆಲ್ ಗಳು ಇದ್ದಾರೆ. ಅವರು ತಿಂಗಳಿಗೆ 25-30 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಅನ್ನೋದು ನಿಜಾ. ಎಐ ಮಾಡೆಲ್ ಹಣ ಸಂಪಾದಿಸೋದು ಅಂದ್ರೆ ಈ ಮಾಡೆಲ್ ಗಳನ್ನು ತಯಾರಿಸಿದ ಕ್ರಿಯೇಟರ್ (creators) ಕೈತುಂಬಾ ಹಣ ಗಳಿಸ್ತಾರೆ. ಆದರೆ ಈ ಮಾಡೆಲ್ ಗಳನ್ನು ಫಾಲೋ ಮಾಡುವ ಲಕ್ಷಾಂತರ ಜನ ಮಾತ್ರ ಮೋಸ ಹೋಗಿದ್ದಾರೆ, ಹೋಗ್ತಾನೂ ಇದ್ದಾರೆ.