MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಬ್ಲ್ಯಾಕ್ ಸ್ಯಾರಿಯಲ್ಲಿ ಮಿಂಚಿದ ಮಲಯಾಳಂ ನಟಿ, 45 ವರ್ಷ ಆದ್ರೂ ಸೌಂದರ್ಯ ಚೂರು ಕುಂದಿಲ್ಲ ಎಂದ ಫ್ಯಾನ್ಸ್‌!

ಬ್ಲ್ಯಾಕ್ ಸ್ಯಾರಿಯಲ್ಲಿ ಮಿಂಚಿದ ಮಲಯಾಳಂ ನಟಿ, 45 ವರ್ಷ ಆದ್ರೂ ಸೌಂದರ್ಯ ಚೂರು ಕುಂದಿಲ್ಲ ಎಂದ ಫ್ಯಾನ್ಸ್‌!

45 ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ ಮಲಯಾಳಂ ನಟಿ ಮಂಜು ವಾರಿಯರ್. ಸದ್ಯ ಬ್ಲ್ಯಾಕ್ ಸೀರೆಯುಟ್ಟು ಫೋಟೋಗಳಿಗೆ ಫೋಸ್ ಕೊಟ್ಟಿದ್ದು ನೆಟ್ಟಿಗರ ವಾವ್ಗ್‌ ಅಂದಿದ್ದಾರೆ.

2 Min read
Vinutha Perla
Published : Jan 12 2024, 10:46 AM IST| Updated : Jan 12 2024, 11:04 AM IST
Share this Photo Gallery
  • FB
  • TW
  • Linkdin
  • Whatsapp
19

ಮಲಯಾಳಂ ಚಿತ್ರರಂಗದಲ್ಲಿ ಬಹಳ ಪರಿಚಿತ ಹೆಸರು ಮಂಜು ವಾರಿಯರ್‌. 90ರ ದಶಕದಲ್ಲಿ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರ್ಷಗಳ ನಂತರ ಕಂ ಬ್ಯಾಕ್ ಮಾಡಿಯೂ ಮತ್ತದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. 45 ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ. 

29

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಇನ್‌ಸ್ಟಾಗ್ರಾಂನಲ್ಲಿ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಬ್ಲ್ಯಾಕ್ ಸೀರೆಯುಟ್ಟುಕೊಂಡಿರೋ ಮಂಜು ವಾರಿಯರ್ ಸ್ಟೈಲಿಶ್ ಆಗಿ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಈ ಫೋಟೋ ನೋಡಿ ಫಿದಾ ಆಗಿದ್ದಾರೆ. 

39

ಯಾವಾಗ್ಲೂ ಸ್ಟೈಲಿಶ್ ಉಡುಗೆಯಲ್ಲಿ ಮಿಂಚೋ ಮಂಜು ಚೇಚಿ ಈ ಬಾರಿ ಬ್ಲ್ಯಾಕ್‌ ಸೀರೆಯಲ್ಲಿ ಸಖತ್‌ ಆಗಿ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳ ದಿಲ್‌ ಖುಷ್ ಮಾಡಿದ್ದಾರೆ. ಫೇವರಿಟ್‌ ಮಂಜು ಚೇಚಿಯ ಫೋಟೋ ನೋಡಿ ಅಭಿಮಾನಿಗಳು ಹ್ಯಾಪಿಯಾಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ.

49

ಬ್ಲ್ಯಾಕ್ ಕಲರ್ ಸೀರೆಯನ್ನು ಉಟ್ಟುಕೊಂಡಿರೋ ಮಂಜು ಇದಕ್ಕೆ ಸಿಲ್ವರ್ ಕಲರ್ ಜುಮ್ಕಿ, ಬ್ಯಾಂಗಲ್ಸ್‌ನ್ನು ಹಾಕಿಕೊಂಡಿದ್ದಾರೆ. ಕೂದಲನ್ನು ಬನ್‌ನಂತೆ ಎತ್ತಿ ಕಟ್ಟಿ ಬಂಧಿಸಿದ್ದಾರೆ. ಬಿಸಿಲು, ನೆರಳಿನಾಟದಲ್ಲಿ ಮಂಜು ಸ್ಟೈಲಿಶ್ ಆಗಿ ಫೋಸ್ ಕೊಟ್ಟಿದ್ದು ನೆಟ್ಟಿಗರ ಗಮನ ಸೆಳೆದಿದೆ.

59

ಡಿಫರೆಂಟ್ ಪೋಸ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಅಭಿಮಾನಿಗಳ ಮನಗೆದ್ದಿದೆ. ಚಿತ್ರಕ್ಕೆ ಸಾಕಷ್ಟು ಮಂದಿ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ನಿಮ್ಮ ವಯಸ್ಸು ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದೆ ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವಯಸ್ಸು ಕೇವಲ ಸಂಖ್ಯೆ ಎಂದಿದ್ದಾರೆ.

69

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ   ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

79

ದಿಲೀಪ್‌ರನ್ನು ಮದುವೆಯಾಗುವ ಮುನ್ನ ಕೇವಲ ಮೂರು ವರ್ಷಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ನಟಿಸಿ  20 ಚಲನಚಿತ್ರಗಳನ್ನು ಮಾಡಿದರು.  ಆ ನಂತರ ಅಭಿನಯಿಸಲ್ಲಿಲ್ಲ. ಆ ಬಳಿಕ ದಾಂಪತ್ಯ ಕಲಹದಿಂದಾಗಿ ಪತಿ ನಟ ದಿಲೀಪ್‌ರಿಂದ ಡಿವೋರ್ಸ್ ಪಡೆದುಕೊಂಡರು.

89

ವಿಮರ್ಶಾತ್ಮಕವಾಗಿ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಹಿಟ್‌ ಆದ ಹೌ ಓಲ್ಡ್ ಆರ್ ಯು (2014) ಚಿತ್ರದೊಂದಿಗೆ 14 ವರ್ಷಗಳ ಬ್ರೇಕ್‌ ನಂತರ  ಚಿತ್ರರಂಗಕ್ಕೆ ಮರಳಿದರು ನಟಿ.  ಈ ಸಿನಿಮಾದಿಂದ ಅನೇಕ ಆವಾರ್ಡ್‌ಗಳನ್ನು ಪಡೆದರು  ಮುಖ್ಯವಾಗಿ ಮಲಯಾಳಂನ ಅತ್ಯುತ್ತಮ ನಟಿಗಾಗಿ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದರು ಮಂಜು.

99

4 ವರ್ಷಗಳ ನಂತರ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿ ಮತ್ತೆ  ಅದೇ ರೀತಿಯ ಫೇಮಸ್‌ ಆಗಿರುವ  ಏಕೈಕ ನಟಿ ಮಂಜು ವಾರಿಯರ್‌. ಈಗ ಅವರು ಸಾಮಾಜಿಕ ಕಾರ್ಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಾಲಿಟ್ಟರುವ ಮಂಜು  ಸರ್ಕಾರದ ವಿವಿಧ ಯೋಜನೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

About the Author

VP
Vinutha Perla
ನಟಿ
ಸೀರೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved