MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಸೀರೆಯುಟ್ಟು ಓರೆನೋಟ ಬೀರಿದ 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ ಕೀರ್ತಿ; ಮದ್ವೆಯಾದವ್ನ ಹಿಂದೆ ಬೀಳ್ಬೇಡಿ ಅನ್ನೋದಾ ಫ್ಯಾನ್ಸ್‌!

ಸೀರೆಯುಟ್ಟು ಓರೆನೋಟ ಬೀರಿದ 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ ಕೀರ್ತಿ; ಮದ್ವೆಯಾದವ್ನ ಹಿಂದೆ ಬೀಳ್ಬೇಡಿ ಅನ್ನೋದಾ ಫ್ಯಾನ್ಸ್‌!

'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ವಿಲನ್ ಪಾತ್ರದಲ್ಲಿ ನಟಿಸ್ತಿರೋ ತನ್ವಿ ರಾವ್ ಇತ್ತೀಚಿಗೆ ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಆದ್ರೆ ಫ್ಯಾನ್ಸ್ ಈ ಲುಕ್‌ನ್ನು ಹೊಗೊಳೋದು ಬಿಟ್ಟು, ಮದ್ವೆಯಾದವನ ಹಿಂದೆ ಹೋಗ್ಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

1 Min read
Author : Vinutha Perla
| Updated : Jan 31 2024, 10:40 AM IST
Share this Photo Gallery
  • FB
  • TW
  • Linkdin
  • Whatsapp
18

ಕನ್ನಡ ಧಾರಾವಾಹಿ ನೋಡುವ ಪ್ರೇಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲಿ ಒಂದು 'ಲಕ್ಷ್ಮಿ ಬಾರಮ್ಮ'. ಇದರಲ್ಲಿ ಸೀರಿಯಲ್‌ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಹೆಸರು ತನ್ವಿ ರಾವ್.

28

ಆದ್ರೆ ಸೀರಿಯಲ್ ವಿಲನ್ ತನ್ವಿ ರಿಯಲ್ ಲೈಫ್‌ನಲ್ಲಿ ಸಖತ್ ಕ್ಯೂಟು. ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 

38

ಆದರಲ್ಲೂ ಇತ್ತೀಚಿಗೆ ತನ್ವಿ ರಾವ್‌ ಸಂಪೂರ್ಣ ಟ್ರೆಡಿಶನಲ್ ಲುಕ್‌ನ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಆಗಿ ಕಾಣಿಸಿಕೊಳ್ಳೋ ಕೀರ್ತಿ ಸ್ಯಾರಿ ಲುಕ್‌ಗೆ ಫಿದಾ ಆಗಿದ್ದಾರೆ.

48

ತನ್ವಿ ರಾವ್ ಲುಕ್‌ಗೆ ನೆಟ್ಟಿಗರು ಬ್ಯೂಟಿಫುಲ್, ಕ್ಯೂಟ್, ನಿಮ್ಮ ಅಭಿನಯ ಅದ್ಭುತ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಮದುವೆಯಾದವನ ಹಿಂದೆ ಬೀಳ್ಬೇಡಿ, ಅದು ತಪ್ಪು ಎಂದು' ತಿಳಿಸಿದ್ದಾರೆ.

58

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್‌ ಆಗಿದ್ದು, ಪ್ರೀತಿಸಿದವನನ್ನು ಕಳೆದುಕೊಂಡು ಸ್ಯಾಡಿಸ್ಟ್ ಆಗಿ ವರ್ತಿಸುತ್ತಿರುವ ಯುವತಿಯ ಪಾತ್ರ. ಎಲ್ಲ ಎಮೋಶನ್‌ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್‌ ಸಖತ್ತಾಗಿ ಅಭಿನಯಿಸುತ್ತಿದ್ದಾರೆ. 

68

ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್‌ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. 

78

‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು.  ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್‌ ಬಿ ರಂಗ್‌'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ. 

88

ಇನ್ನು ತನ್ವಿ, ಭರತನಾಟ್ಯ ಕಲಾವಿದೆ ಕೂಡಾ ಹೌದು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ನಟಿ
ಫ್ಯಾಷನ್
ಸೀರೆ

Latest Videos
Recommended Stories
Recommended image1
DIY Lip Balm: ಲಿಪ್‌ಸ್ಟಿಕ್ ಬೇಡವೇ ಬೇಡ, ಮನೆಯಲ್ಲೇ ಮಾಡಿ ಗುಲಾಬಿ ಲಿಪ್ ಬಾಮ್, ಇಲ್ಲಿದೆ ಸುಲಭ ವಿಧಾನ!
Recommended image2
ಹಾಫ್ ಗ್ರಾಂ ಗೋಲ್ಡ್ ಪರ್ಲ್ ಇಯರಿಂಗ್ಸ್‌ನ ಲೇಟೆಸ್ಟ್ ಕಲೆಕ್ಷನ್
Recommended image3
ಇದುವೇ ಮಹಿಳಾ ಸಬಲೀಕರಣ: ಮದುವೆ ಮಂಟಪಕ್ಕೆ ಕುದುರೆ ಏರಿ ಬಂದ ವಧು; ವರ ಸೇರಿ ಎಲ್ಲರೂ ಶಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved