ಜಿಯೋ ಮಾಲ್ ಓಪನಿಂಗ್ ವೇಳೆ ಬೇರೆ ಬೇರೆ ಕಿವಿಯೋಲೆ ಧರಿಸಿ ಸುದ್ದಿಯಾದ ಇಶಾ ಅಂಬಾನಿ
ಬದಲಾಗುತ್ತಿರುವ ಫ್ಯಾಷನ್ ಜಗತ್ತಿನಲ್ಲಿ, ಟ್ರೆಂಡ್‌ಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತವೆ. ಅದರಂತೆ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಧರಿಸಿದ ಕಿವಿಯೋಲೆ ಈಗ ಚರ್ಚೆಯಲ್ಲಿದೆ.
ಇತ್ತೀಚೆಗೆ, ಜನಪ್ರಿಯತೆ ಗಳಿಸುತ್ತಿರುವ ಪ್ರವೃತ್ತಿ ಅಂದ್ರೆ ಫ್ಯಾಷನ್. ಬಟ್ಟೆ ಮತ್ತು ಅದಕ್ಕೆ ಸರಿ ಹೊಂದುವ ಪರಿಕರಗಳನ್ನು ಧರಿಸುವುದು ಕೂಡ ಒಂದು ಕಲೆಯಾಗಿದೆ. ಇದು ಸೌಂದರ್ಯಕ್ಕೆ ಪರಿಪೂರ್ಣತೆಯನ್ನು ನೀಡುತ್ತದೆ. ವಿಶ್ವಾದ್ಯಂತ ಫ್ಯಾಷನ್ ಉತ್ಸಾಹಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ತಮ್ಮ ಫ್ಯಾಷನ್‌ನಿಂದಲೇ ಜನರನ್ನು ಸೆಳೆಯುತ್ತಾರೆ.
ಈ ಫ್ಯಾಷನ್ ಓಟದಲ್ಲಿ ಇಶಾ ಅಂಬಾನಿ ಕೂಡ ಗಮನಾರ್ಹ ವ್ಯಕ್ತಿ. ತನ್ನ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿರುವ ಇಶಾ, ಅಕ್ಟೋಬರ್ 31 ರಂದು ಮುಂಬೈನಲ್ಲಿ ನಡೆದ ಜಿಯೋ ವರ್ಲ್ಡ್ ಪ್ಲಾಜಾದ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ದಿಟ್ಟ ಹೇಳಿಕೆಯನ್ನು ಕೂಡ ನೀಡಿದ್ದರು.
ಜಿಯೋ ವರ್ಲ್ಡ್ ಪ್ಲಾಜಾದ ಉದ್ಘಾಟನಾ ಸಮಾರಂಭದಲ್ಲಿ ಬೆರಗುಗೊಳಿಸುವ ಡಿಯರ್ ಸ್ಕರ್ಟ್‌ನೊಂದಿಗೆ ಜೋಡಿಯಾಗಿರುವ ಕ್ಲಾಸಿಕ್ ಕಪ್ಪು ಶರ್ಟ್ ಧರಿಸಿ ಇಶಾ ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಸ್ಕರ್ಟ್ ರೋಮಾಂಚಕ ಬಣ್ಣಗಳ ಒಂದು ಶ್ರೇಣಿಯಲ್ಲಿ ಸಂಕೀರ್ಣವಾದ ಪ್ರಕೃತಿ-ಪ್ರೇರಿತ ಕಸೂತಿಯಿಂದ ಅಲಂಕರಿಸಲ್ಪಟ್ಟಿತ್ತು.
ಕಪ್ಪು ಧಿರಿಸಿನಲ್ಲಿ ಆಕೆಯ ಸೌಂದರ್ಯ ಕಣ್ಣುಕುಕ್ಕುವಂತಿತ್ತು ಅದಕ್ಕೆ ಸಮನಾಗಿ ಇಶಾ ಪರಿಕರಗಳನ್ನು ಧರಿಸಿದ್ದು ಪ್ರಮುಖ ಅಂಶವೆಂದರೆ ಬೆರಗುಗೊಳಿಸುವ ವಜ್ರ ಮತ್ತು ಪಚ್ಚೆಯ ನೆಕ್ಲೇಸ್ ಧರಿಸಿದ್ದ ಆಕೆಯ ಆಯ್ಕೆಯು ನಿಜವಾಗಿಯೂ ಎಲ್ಲರ ಗಮನ ಸೆಳೆದಿತ್ತು.
ಆದರೆ ಇಶಾ ಎರಡು ವಿಸ್ತೃತ ವಿನ್ಯಾಸದ ಪಚ್ಚೆ ಕಲ್ಲುಗಳನ್ನು ಹೊಂದಿರುವ ಆಕರ್ಷಕ ವಜ್ರಗಳ ಜೊತೆಯಲ್ಲಿ ಬೇರೆ ಬೇರೆ ಡಿಸೈನ್‌ನ ಕಿವಿಯೋಲೆ ಧರಿಸಿದ್ದರು. ಇದು ಅವಳ ಫ್ಯಾಷನ್-ಫಾರ್ವರ್ಡ್ ವ್ಯಕ್ತಿತ್ವಕ್ಕೆ ಸಮಾನಾರ್ಥಕವಾಗಿತ್ತು.
ಇಶಾ ಒಂದು ಕಿವಿಯಲ್ಲಿ ಡೈಮಂಡ್ ಸ್ಟಡ್ ಮತ್ತು ಇನ್ನೊಂದು ಕಿವಿಯಲ್ಲಿ ಸೊಗಸಾದ ಪಚ್ಚೆ ಕಿವಿಯೋಲೆಯನ್ನು ಧರಿಸಿದ್ದರು. ಈ ದಿಟ್ಟ ಆಯ್ಕೆಯು ಸಂಪ್ರದಾಯಗಳಿಗೆ ಸವಾಲು ಹಾಕಿದಂತೆ ಮತ್ತು ಪ್ರತ್ಯೇಕತೆಯನ್ನು ಆಚರಿಸುವ ಫ್ಯಾಷನ್ ಪ್ರವೃತ್ತಿಯನ್ನು ಅಳವಡಿಸಿಕೊಳ್ಳುವ ಇಚ್ಛೆಯನ್ನು ಪ್ರದರ್ಶಿಸಿತು.
ಹೊಂದಿಕೆಯಾಗದ ಕಿವಿಯೋಲೆಗಳನ್ನು ಧರಿಸುವ ಪ್ರವೃತ್ತಿಯು ಸಂಪೂರ್ಣವಾಗಿ ಹೊಸದಲ್ಲವಾದರೂ, ಇಶಾ ಅಂಬಾನಿ ಅವರ ಈ ಆಯ್ಕೆಯು ಫ್ಯಾಷನ್ ಜಗತ್ತಿನಲ್ಲಿ ಅದರ ಪುನರುತ್ಥಾನಕ್ಕೆ ಮುನ್ನುಡಿ ಬರೆದಿದೆ.
ಜಿಯೋ ವರ್ಲ್ಡ್ ಪ್ಲಾಜಾ ಸಮಾರಂಭದಲ್ಲಿ ಇಶಾ ಅಂಬಾನಿಯವರ ಆಭರಣಗಳ ಮತ್ತೊಂದು ಅಂಶವೆಂದರೆ ಅವರ ಮೂರು ಕಲ್ಲಿನ ಉಂಗುರ ಧರಿಸಿದ್ದರು ಇದು ಕೂಡ ಅತ್ಯಂತ ಆಕರ್ಷಕವಾಗಿತ್ತು.