ನೋಡೋಕೆ ಮಾಡ್ರನ್ ಅಪ್ಸರೆ; ಮೈಮೇಲಿನ ಡ್ರೆಸ್, ಕಾಸ್ಟ್ಯೂಮ್ ಮಾತ್ರ ಕೇವಲ 900 ರೂಪಾಯಿ
ಹುಡುಗಿಯರು ಹಾಗೂ ಮಹಿಳೆಯರು ಹೆಚ್ಚು ಖರ್ಚು ಮಾಡ್ತಾರೆ ಎಂದು ಬಹುತೇಕರು ಹೇಳುತ್ತೇವೆ. ಹೀಗಾಗಿ, ಹುಡುಗಿಯರು ಹೆಚ್ಚಾಗಿ ಶಾಪಿಂಗ್ ಶಾಪಿಂಗ್ ಎಂದು ಹೇಳುವುದು ಒಂದು ಉದಾಹರಣೆ ಆಗಿದೆ. ಆದರೆ, ಇಲ್ಲೊಬ್ಬ ಬ್ಯೂಟಿಫುಲ್ ಹುಡ್ಗಿ ಕೇವಲ 900 ರೂ. ಡ್ರೆಸ್ ಧರಿಸಿಯೇ ಲ್ಯಾಟಿನಾ ಲುಕ್ನಲ್ಲಿ ಕಾಣುತ್ತಿದ್ದೇನೆ ಎಂದು ಯುವತಿ ಟಿಯಾ ಹೇಳಿಕೊಂಡಿದ್ದಾಳೆ.
ದಿನನಿತ್ಯ ಜೀವನದಲ್ಲಿ ಯುವತಿಯರು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೈಮೇಲಿನ ಬಟ್ಟೆ ಮಾತ್ರ ಬ್ರ್ಯಾಂಡ್ ಆಗಿರಬೇಕು ಎಂದು ಬಯಸುವವರೇ ಹೆಚ್ಚಾಗಿದ್ದಾರೆ. ಅದರಲ್ಲಿಯೂ ಸಿಟಿ ಲೈಫ್ಗೆ ಹೊಂದಿಕೊಂಡ ಯುವತಿಯರು ಖರ್ಚು ವೆಚ್ಚಗಳು ಮಾತ್ರ ನಿರೀಕ್ಷೆಗೂ ಮೀರಿದ್ದಾಗಿರುತ್ತದೆ.
ಹೌದು, ಇಲ್ಲಿ ನೋಡ್ತಿರುವ ಹುಡುಗಿಯ ಹೆಸರು ಟಿಯಾ. ದೆಹಲಿಯಲ್ಲಿ ಈ ಯುವತಿಯಲ್ಲಿ ನೀವು ಮೈಮೇಲೆ ಧರಿಸಿದ ಬಟ್ಟೆ ಮತ್ತು ಇತರೆ ಸೌಂದರ್ಯ ವರ್ಧಕ ಸಾಮಗ್ರಿಗಳ ಒಟ್ಟು ಮೊತ್ತವೆಷ್ಟು ಎಂದು ಸಂದರ್ಶಕರೊಬ್ಬರು ಕೇಳಿದ್ದಾರೆ.
ಇದಕ್ಕೆ ಯಾವುದೇ ಮುಜುಗರ ಪಟ್ಟುಕೊಳ್ಳದೇ ಬೋಲ್ಡ್ ಆಗಿ ಉತ್ತರಿಸಿದ ಟಿಯಾ ನಾನು 950 ರೂ. ಮೌಲ್ಯದ ಬಟ್ಟೆಯನ್ನು ಧರಿಸಿಕೊಂಡು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನಾನು ಧರಿಸಿದ ಪ್ಯಾಂಟ್ ಅನ್ನು ನನಗೆ ಬೇಕಾದವರು ಗಿಫ್ಟ್ ಆಗಿ ಕೊಟಿದ್ದಾರೆ. ಇದರ ಬೆಲೆ ನನಗೆ ಗೊತ್ತಿಲ್ಲ. ಇನ್ನು ಮೇಲೆ ಧರಿಸಿದ ಸ್ಲೀವ್ಲೆಸ್ ಡ್ರೆಸ್ನ ಬೆಲೆ 900 ರೂ. ಆಗಿದ್ದು, ಇದನ್ನು ದೆಹಲಿಯ ಸರೋಜಿನಿ ನಗರದಲ್ಲಿ ಖರೀದಿ ಮಾಡಿದ್ದೇನೆ.
ಇನ್ನು ನನ್ನ ಕೈಯಲ್ಲಿರುವ ಉಂಗುರ ಕೇವಲ 50 ರೂ. ಆಗಿದ್ದು, ಇದನ್ನೂ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ತೆಗದುಕೊಂಡಿದ್ದೇನೆ. ಇನ್ನು ಪ್ಯಾಂಟ್ಗೆ ಹಾಕಿಕೊಂಡಿರುವ ಬೆಲ್ಟ್ ಸೇಫ್ಟಿ ಪಿನ್ಗಳಿಂದ ಮಾಡಿರುವುದು ಎಂದು ಟಿಯಾ ಹೇಳಿಕೊಂಡಿದ್ದಾಳೆ.
ನಾನು ಧರಿಸಿರುವು ಡ್ರೆಸ್ ಶೈಲಿ ಲ್ಯಾಟಿನಾ ಶೈಲಿಯಾಗಿದೆ. ಇದರಲ್ಲಿ ನಾನು ಸೇಫ್ಟಿ ಪಿನ್ ಜಾಯಿಂಟ್ ಮಾಡಿ ಧರಿಸಿದ್ದೇನೆ ಎಂಬ ಅಂಜಿಕೆಯೂ ಇಲ್ಲ. ಇದು ಅತ್ಯಂತ ಫ್ಯಾಷನ್ ಆಗಿ ಕಾಣಿಸುತ್ತದೆ ಎಂದು ಹೇಳಿಕೊಂಡಿದ್ದಾಳೆ.
ನಿಮ್ಮ ಅಭಿಪ್ರಾಯದಲ್ಲಿ ಏನು ಫ್ಯಾಷನ್ ಎಂದರೆ ಎಂದು ಕೇಳಿದಾಗ ನಮ್ಮ ದೇಹಕ್ಕೆ ಯಾವುದನ್ನು ಧರಿಸಿದರೆ ತುಂಬಾ ಒಳಿತಾಗಿ ಕಾಣಿಸುತ್ತದೆಯೋ ಅದನ್ನು ಧರಿಸುವುದು ಆಗಿದೆ ಎಂದು ಲ್ಯಾಟಿನಾ ಲುಕ್ ಹುಡುಗಿ ಟಿಯಾ ಉತ್ತರಿಸಿದ್ದಾರೆ.
ಫ್ಯಾಷನ್ ಲೈಫ್ಸ್ಟೈಲ್ ಮಾಡುವವರಿಗೆ ನಿಮ್ಮ ಒಂದು ಟಿಪ್ಸ್ ಏನು ಎಂದು ಕೇಳಿದರೆ, ಯಾರು ಯಾವುದೇ ತರಹದ ಬಟ್ಟೆ ಧರಿಸಿದರೂ ಅದು ನಿಮಗೆ ಮೊದಲು ಇಷ್ಟವಾಗಬೇಕು ಎಂದು ಟಿಯಾ ಹೇಳಿದ್ದಾರೆ.
ಯುವತಿ ಟಿಯಾಳನ್ನು ಆನ್ಲೈನ್ ಮೀಡಿಯಾ ವೂಂಪ್ಲಾದಿಂದ ಸಂದರ್ಶನ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ಇಲ್ಲಿದೆ ನೋಡಿ ಮೂಲ ವಿಡಿಯೋ.. https://www.instagram.com/reel/C5_PWeUuaeV/?utm_source=ig_web_copy_linkhttps://www.instagram.com/reel/C5_PWeUuaeV/?utm_source=ig_web_copy_link