ಡಿನ್ನರ್ ಡೇಟ್‌ಗೆ ಹೋಗ್ತಿದ್ದೀರಾ? ಹಾಗಿದ್ರೆ ಈ ಔಟ್‌ಫಿಟ್ ಟ್ರೈ ಮಾಡಿ..
ಡಿನ್ನರ್ ಡೇಟ್‌ಗೆ ಹೋಗುತ್ತಿದ್ದರೆ ನೀವು ಚೆನ್ನಾಗಿ ಕಾಣಿಸುವುದರ ಜೊತೆಗೆ ಸ್ಟೈಲಿಶ್ ಆಗಿಯೂ ಕಾಣಬೇಕು. ಜೊತೆಗೆ ಕಂಫರ್ಟೆಬಲ್ ಲುಕ್ ಕೂಡ ನಿಮ್ಮದಾಗಬೇಕು. ನೀವು ಇಲ್ಲಿವರೆಗೆ ಡೇಟಿಂಗ್‌ಗೆ ಹೇಗೆ ತಯಾರಾಗಿ ಹೋಗಬೇಕು ಎಂದು ಡಿಸೈಡ್ ಮಾಡಿರದೆ ಇದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಲುಕ್ ಇಂಪ್ರೆಸಿವ್ ಆಗಿರಲು ನೀವು ಈ ರೀತಿ ಡ್ರೆಸ್ ಮಾಡಿಕೊಳ್ಳಬಹುದು...
ಸ್ಕರ್ಟ್ : ಡಿನ್ನರ್ ಡೇಟ್‌ಗೆ ಹೋಗುವಾಗ ಸ್ಕರ್ಟ್ ನಿಮಗೆ ಸ್ಮಾರ್ಟ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ. ಇದರ ಜೊತೆಗೆ ಕಾಂಟ್ರಾಸ್ಟಿಂಗ್ ಕಲರ್‌ನ ಟಾಪ್ ಧರಿಸಿ. ಜೊತೆಗೆ ಸಿಂಪಲ್ ಆದ ಒಂದು ನೆಕ್‌ಲೆಸ್ ಧರಿಸಿ.
ಸೀರೆ : ಡೇಟ್ ನೈಟ್‌ಗೆ ಸೀರೆ ಹೇಗೆ ಚೆನ್ನಾಗಿ ಕಾಣಿಸಬಹುದು ಎಂದು ನೀವು ಯೋಚನೆ ಮಾಡುತ್ತಿದ್ದೀರಾ? ಯೋಚನೆ ಬಿಡಿ, ಸಿಂಪಲ್ ಆದ ಸೀರೆಯನ್ನು ಸ್ಟೈಲಿಶ್ ಆಗಿ ಉಟ್ಟುಕೊಳ್ಳಿ. ಇದರಿಂದ ನೀವು ಸುಂದರವಾಗಿ ಹಾಗೂ ಹಾಟ್ ಆಗಿ ಕಾಣಿಸುವಿರಿ.
ಡ್ರೆಸ್ : ಡೇಟ್ ನೈಟ್‌ನ ಯೋಚನೆ ಬಂದೊಡನೆ ಒನ್ ಪೀಸ್ ಡ್ರೆಸ್ ಧರಿಸೋಣ ಎಂದೆನಿಸುತ್ತದೆ. ಆದರೆ ಡೇಟ್ ನೈಟ್‌ಗೆ ಸೆಕ್ಸಿ ಡ್ರೆಸ್ ಆಯ್ಕೆ ಮಾಡುವ ಬದಲು ಒಂದು ಕ್ಲಾಸಿ ಡ್ರೆಸ್ ಆಯ್ಕೆ ಮಾಡಿ.
ಜೀನ್ಸ್ : ಜೀನ್ಸ್ ಕೇವಲ ಕ್ಯಾಶುವಲ್ ಲುಕ್‌ಗಾಗಿ ಮಾತ್ರವಲ್ಲ, ಡಿನ್ನರ್ ಡೇಟ್‌ಗೂ ಇದು ಪರ್‌ಫೆಕ್ಟ್ ಆಯ್ಕೆ. ಈ ಜೀನ್ಸ್ ಜೊತೆಗೆ ಒಂದು ಡಾರ್ಕ್ ಬಣ್ಣದ ಕ್ರಾಪ್‌ಟಾಪ್ ಅಥವಾ ಲೈಟ್ ಆದ ಸೀಕ್ವಿನ್ ಟಾಪ್ ಧರಿಸಿ. ಇದರ ಜೊತೆ ನೀವು ಲೇಯರಿಂಗ್ ಕೂಡ ಮಾಡಬಹುದು.
ಬ್ಲ್ಯಾಕ್ ಡ್ರೆಸ್ : ರಾತ್ರಿ ಹೊತ್ತು ಸಂಗಾತಿ ಜೊತೆ ಡಿನ್ನರ್ ಗೆ ಹೋಗುತ್ತಿದ್ದರೆ ಬ್ಲ್ಯಾಕ್ ಡ್ರೆಸ್ ಪರ್ಫೆಕ್ಟ್. ಇದು ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತೆ.
ಸಿಂಪಲ್ - ಎಲಿಗೆಂಟ್ : ಹೌದು ಡೇಟಿಂಗ್ ಹೋಗುವಾಗ ಸಿಂಪಲ್ ಆಗಿರುವ ಡ್ರೆಸ್ ಗಳನ್ನೇ ಧರಿಸಿ, ಜೊತೆಗೆ ಮೇಕಪ್, ಅರ್ನಮೆಂಟ್ಸ್ ಕೂಡ ಸಿಂಪಲ್ ಆಗಿರಲಿ. ಆದರೆ ಎಲಿಗೆಂಟ್ ಆಗಿರಲಿ.
ಲೇಸ್ ಡ್ರೆಸ್ : ಪರ್ಫೆಕ್ಟ್ ಆಗಿರುವಂತಹ ಲೇಸ್ ಡ್ರೆಸ್ ಅಥವಾ ಗೌನ್ ಧರಿಸಿ. ಇದು ನಿಮ್ಮ ಸೌಂದರ್ಯವನ್ನು ಇಮ್ಮಡಿ ಮಾಡುವುದರ ಜೊತೆಗೆ ಫಸ್ಟ್ ಇಂಪ್ರೆಷನ್ ಉತ್ತಮವಾಗಿರುತ್ತದೆ.
ನ್ಯೂಡ್ ಕಲರ್ : ನಿಮ್ಮನ್ನು ಫ್ಯಾನ್ಸಿ ಡಿನ್ನರ್ ಗೆ ಕರೆದುಕೊಂಡು ಹೋಗುತ್ತಿದ್ದರೆ, ನೀವು ನ್ಯೂಡ್ ಪ್ರಿಂಟ್ ಟ್ರೈ ಮಾಡಬಹುದು. ಇದು ಸ್ಟೈಲಿಶ್ ಲುಕ್ ಕೊಡುತ್ತದೆ.
ಲೇಯರಿಂಗ್ : ನೀವು ವಿಂಟರ್ ಸೀಸನ್ ನಲ್ಲಿ ಡಿನ್ನರ್ ಗೆ ಹೋಗುತ್ತಿದ್ದರೆ, ಲೇಯರಿಂಗ್ ಮಾಡೋದನ್ನು ಮರೀಬೇಡಿ. ಟೀ ಶರ್ಟ್, ಬ್ಲೇಜರ್, ಸ್ಟ್ರಗ್ ಜೊತೆ ಲೇಯರಿಂಗ್ ಮಾಡಿದರೆ ಬೋಲ್ಡ್ ಲುಕ್ ಕಾಣುತ್ತದೆ.
ಲಾಂಗ್ ಕುರ್ತಾ : ನೀವು ಇಂಡಿಯನ್ ಡ್ರೆಸ್ ಬಯಸಿದ್ದರೆ ಲಾಂಗ್ ಕುರ್ತಾ ಧರಿಸಿ, ಅದಕ್ಕೆ ಅಂಕಲ್ ಲೆಂಗ್ತ್ ಲೆಗ್ಗಿನ್ಸ್ ಧರಿಸಿದರೆ, ಜೊತೆಗೆ ಫ್ಯಾನ್ಸಿ ಇಯರಿಂಗ್ ಧರಿಸಿದರೆ ಚೆನ್ನಾಗಿ ಕಾಣಿಸುತ್ತೀರಿ.