ಮತ್ತೊಮ್ಮೆ ತಮ್ಮ ಸೀರೆ ಮೂಲಕ ಗಮನ ಸೆಳೆದ ನಿರ್ಮಲಾ ಸೀತಾರಾಮನ್, ವೈಟ್ ಸಿಲ್ಕ್ ಸೀರೆಯಲ್ಲಿ ಬಂದ ಸಚಿವೆ
ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.
ಕಳೆದ ಬಾರಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ನೀಲಿ ಬಣ್ಣದ ಕೈಮಗ್ಗದ ಸೀರೆ ಧರಿಸಿ, ಕೈಯಲ್ಲಿ ಬಜೆಟ್ ಕೆಂಪು ಹೊತ್ತಿಗೆ ಹಿಡಿದು ಸಂಸತ್‌ಗೆ ಆಗಮಿಸಿದ್ದರು.
ಇಂದು ಶ್ವೇತ ವರ್ಣದ ಕೆನ್ನೇರಳೆ ಬಣ್ಣದ ಬಾರ್ಡರ್ ವುಳ್ಳ ಸುಂದರವಾದ ರೇಷ್ಮೆ ಸೀರೆ ಧರಿಸಿದ್ದಾರೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಜೆಟ್ ಮಂಡನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಬಾರ್ಡರ್‌ನಲ್ಲಿ ಗೋಲ್ಡನ್ ಕಲರ್ ಎಲೆಗಳಿವೆ. ಶ್ವೇತ ವರ್ಣದ ಸೀರೆಯಲ್ಲಿ ರೇಷ್ಮೆ ಎಳೆಗಳು ಮಿರಿ ಮಿರಿ ಅಂತ ಮಿಂಚುತ್ತಿವೆ.
ಕಳೆದ ಬಾರಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ನೀಲಿ ಬಣ್ಣದ ಕೈಮಗ್ಗದ ಸೀರೆ ಧರಿಸಿ, ಕೈಯಲ್ಲಿ ಬಜೆಟ್ ಕೆಂಪು ಹೊತ್ತಿಗೆ ಹಿಡಿದು ಸಂಸತ್‌ಗೆ ಆಗಮಿಸಿದ್ದರು.
2019ರಲ್ಲಿ ಮೊದಲ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್‌ವುಳ್ಳ ಬ್ರೈಟ್ ಪಿಂಕ್ ಸೀರೆ ಧರಿಸಿದ್ದರು. ಇದನ್ನು ಮಂಗಲಗಿರಿ ಸೀರೆ ಎಂದು ಕರೆಯಲಾಗುತ್ತದೆ. 2020ರಲ್ಲಿ ತಿಳಿ ನೀಲಿ ಅಂಚಿನ ಆಕರ್ಷಕ ಹಳದಿ ಮಿಶ್ರಿತ ಚಿನ್ನದ ಕಲರ್ ಸೀರೆಯಲ್ಲಿ ಬಜೆಟ್ ಮಂಡನೆ ಮಾಡಿದ್ದರು.
2021ರ ಬಜೆಟ್ ಮಂಡನೆ ವೇಳೆ ಬಿಗ್ ಬಾರ್ಡರ್‌ವುಳ್ಳ ಪೊಚಂಪಲ್ಲಿ ಸೀರೆಯನ್ನು ಧರಿಸಿದ್ದರು. ಪಿಂಕ್ ಬಾರ್ಡರ್‌ನ ಶ್ವೇತ ವರ್ಣದ ಸೀರೆ ಧರಿಸಿದ್ದರು. ಇದು ತೆಲಂಗಾಣದ ಸಾಂಪ್ರದಾಯಿಕ ಶೈಲಿಯ ಸೀರೆಯಾಗಿದೆ. ಭೂದಾನ ಪೊಚಂಪಲ್ಲಿಯನ್ನು ಭಾರತದ ರೇಷ್ಮೆ ನಗರಿ ಎಂದು ಕರೆಯಲಾಗುತ್ತದೆ.
2022ರ ಬಜೆಟ್ ಮಂಡನೆ ವೇಳೆ ಒಡಿಶಾದ ಬೊಮ್ಕೈ ಸೀರೆಯನ್ನು ಆರಿಸಿಕೊಂಡಿದ್ದರು. ಮಾಸಿದ ಕಂದು ಬಣ್ಣದ ಸೀರೆ ಇದಾಗಿತ್ತು. ಸೀರೆಯ ಮಧ್ಯೆ ಕಂದು ಮತ್ತು ಕೆಂಪು ಬಣ್ಣದ ಲೈನ್ಸ್ ಸಂಯೋಜಿಸಲಾಗಿತ್ತು. ಈ ಮೂಲಕ ಒಡಿಶಾದ ಬೊಮ್ಕೈ ಸೀರೆಯನ್ನು ಪ್ರಚಾರ ಮಾಡಿದ್ದರು.
2023ರಲ್ಲಿ ಕಪ್ಪು ಬಣ್ಣದ ಟೆಂಪಲ್ ಬಾರ್ಡರ್‌ವುಳ್ಳ ಕೆಂಪು ಬಣ್ಣದ ಸಾಂಪ್ರಾದಾಯಿಕ ಶೈಲಿಯ ಸೀರೆ ಧರಿಸಿ ತಮ್ಮ ಬಜೆಟ್ ಮಂಡನೆ ಮಾಡಿದ್ದರು. ಟೆಂಪಲ್ ಬಾರ್ಡರ್ ಗೋಲ್ಡನ್ ವರ್ಕ್ ಹೊಂದಿತ್ತು. ಸೀರೆ ಮಧ್ಯ ಭಾಗದಲ್ಲಿ ಶ್ವೇತ ಹೂಗಳನ್ನು ಮುದ್ರಿಸಲಾಗಿತ್ತು.