ನೀವು ಸ್ಲಿಮ್ ಆಗಿ ಕಾಣಬೇಕೇ? ಹಾಗಿದ್ರೆ ಡ್ರೆಸ್ ಸ್ಟೈಲ್ ಬದಲಿಸಿ…
ನೀವು ತೆಳ್ಳಗೆ ಕಾಣಲು ಅಥವಾ ದಪ್ಪವಾಗಿ ಕಾಣಲು ಕೆಲವೊಮ್ಮೆ ನಿಮ್ಮ ಬಟ್ಟೆಗಳು ಸಹ ಕಾರಣವಾಗಿರಬಹುದು. ನೀವು ಸ್ಲಿಮ್ ಆಗಿ ಕಾಣಲು ಬಯಸಿದರೆ, ಡ್ರೆಸ್ಸಿಂಗ್ ಸ್ಟೈಲ್ (dressing style) ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನೀವು ಸ್ಲಿಮ್ ಆಗಿ ಕಾಣ ಬಯಸಿದ್ರೆ ಏನು ಮಾಡಬೇಕು? ಯಾವ ರೀತಿ ಡ್ರೆಸ್ ಮಾಡಬೇಕು ಅನ್ನೋದನ್ನು ಇಲ್ಲಿ ತಿಳಿಸುತ್ತೇವೆ ನೋಡಿ…
ಪ್ರತಿಯೊಬ್ಬ ಮಹಿಳೆಯೂ ತಾನು ಹೇಗಾದರೂ ಸ್ಲಿಮ್, ಟ್ರಿಮ್ ಆಗಿ ಕಾಣಬೇಕು ಎಂದು ಭಾವಿಸುತ್ತಾಳೆ. ತೆಳ್ಳಗೆ ಕಾಣಲು ನಿಮ್ಮ ಡ್ರೆಸ್ಸಿಂಗ್ ತುಂಬಾ ಮುಖ್ಯ. ಸರಿಯಾದ ಬಟ್ಟೆಗಳ ಆಯ್ಕೆ ಮಾಡುವ ಮೂಲಕ ನಿಮ್ಮ ಲುಕ್ ಅನ್ನು ತೆಳ್ಳಗೆ ಅಥವಾ ದಪ್ಪವಾಗಿ ಕಾಣುವಂತೆ ಮಾಡಬಹುದು.
ಅನೇಕ ಮಹಿಳೆಯರು ಬಟ್ಟೆಗಳನ್ನು ಖರೀದಿಸುವಾಗ ಮಾತ್ರ ಬಣ್ಣ ಅಥವಾ ಸ್ಟೈಲ್ ಬಗ್ಗೆ ಗಮನ ನೀಡುತ್ತಾರೆ. ಆದರೆ ನೀವು ಇಷ್ಟಪಡುವ ಉಡುಗೆ ನಿಮ್ಮ ಮೇಲೆ ಚೆನ್ನಾಗಿ ಕಾಣುತ್ತದೆ ಎಂದು ಹೇಳೋ ಹಾಗಿಲ್ಲ. ನೀವು ಆ ಡ್ರೆಸ್ ಗೆ ಹೇಗಾದರೂ ಮಾಡಿ ಹೊಂದಿಕೊಳ್ಳುತ್ತೀರಿ, ಆದರೆ ನೀವು ಆ ಬಟ್ಟೆಯಲ್ಲಿ ದಪ್ಪವಾಗಿ ಕಾಣುತ್ತೀರಿ. ಇದರ ಹಿಂದೆ ಅನೇಕ ಕಾರಣಗಳಿವೆ. ಬಟ್ಟೆಗಳನ್ನು ಖರೀದಿಸುವಾಗ ಮತ್ತು ಅವುಗಳನ್ನು ಧರಿಸುವಾಗ ನೀವು ಕಾಳಜಿ ವಹಿಸಬೇಕಾದ ಕೆಲವು ವಿಷಯಗಳಿವೆ. ಇಂದು ನಾವು ನಿಮಗೆ ಕೆಲವು ಫ್ಯಾಷನ್ (fashion) ಮತ್ತು ಸ್ಟೈಲ್ ಸಲಹೆಗಳನ್ನು ನೀಡುತ್ತಿದ್ದೇವೆ, ಇದು ನಿಮ್ಮನ್ನು ತುಂಬಾ ತೆಳ್ಳಗೆ ಕಾಣುವಂತೆ ಮಾಡುತ್ತದೆ.
ಸರಿಯಾದ ಪ್ರಿಂಟ್ ಆರಿಸಿ:
ಬಟ್ಟೆಗಳನ್ನು ಖರೀದಿಸುವಾಗ ನೀವು ಸರಿಯಾದ ಪ್ರಿಂಟ್ ಆಯ್ಕೆ ಮಾಡಬೇಕು. ಕೆಲವು ಮಹಿಳೆಯರು ಜೆಕ್ ಅಥವಾ ಬ್ಯಾಲೆನ್ಸ್ ಲೈನ್ ಪ್ರಿಂಟ್ ಡ್ರೆಸ್ ಖರೀದಿಸುತ್ತಾರೆ. ಇದರಲ್ಲಿ ನೀವು ದಪ್ಪವಾಗಿ ಕಾಣುತ್ತೀರಿ. ಹಾರಿಜಾಂಟಲ್ ಲೈನ್ ಪ್ರಿಂಟ್ (horizontal line print) ನೀವು ಆಯ್ಕೆ ಮಾಡಬೇಕು. ಅದರಲ್ಲಿ ನೀವು ತುಂಬಾನೆ ಸ್ಲಿಮ್ ಆಗಿ ಕಾಣುವಿರಿ.
ಓವರ್ ಸೈಜ್ ಬದಲು ಫಿಟ್ ಡ್ರೆಸ್ ಆರಿಸಿ:
ನೀವು ಹೆಚ್ಚು ತೂಕ ಮತ್ತು ಕಡಿಮೆ ಹೈಟ್ ಹೊಂದಿದ್ದರೆ, ನೀವು ಫಿಟ್ ಬಟ್ಟೆಗಳನ್ನು ಧರಿಸಬೇಕು. ಹೆಚ್ಚು ಸಡಿಲ (oversized dress) ಬಟ್ಟೆಗಳಲ್ಲಿ ನೀವು ದಪ್ಪವಾಗಿ ಕಾಣುತ್ತೀರಿ. ನೀವು ಇನ್ನೂ ಸಡಿಲವಾದ ಬಟ್ಟೆಗಳನ್ನು ಧರಿಸಲು ಬಯಸಿದರೆ, ಗಾಢ ಬಣ್ಣಗಳನ್ನು ಆರಿಸಿ.
ಸರಿಯಾದ ಅಕ್ಸೆಸರಿಗಳನ್ನು ಆರಿಸಿ :
ನೀವು ಔಟ್ ಫಿಟ್ ನೊಂದಿಗೆ ಸರಿಯಾದ ಅಕ್ಸೆಸರಿಗಳನ್ನು (accesories) ಸಹ ಆಯ್ಕೆ ಮಾಡಬೇಕು. ನೀವು ದಪ್ಪಗಿದ್ದರೆ, ತೆಳುವಾದ ಬೆಲ್ಟ್ ಬದಲಿಗೆ ದಪ್ಪ ಬೆಲ್ಟ್ ಬಳಸಿ. ಇದು ಹೊಟ್ಟೆಯ ಕೊಬ್ಬನ್ನು ಮರೆಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಸ್ಲಿಮ್ ಆಗಿ ಕಾಣುವಿರಿ.
ಸರಿಯಾದ ಟಾಪ್ ಆಯ್ಕೆ ಮಾಡಿ :
ನೀವು ಸ್ಲಿಮ್ ಲುಕ್ (slim look) ಬಯಸಿದರೆ, ಸ್ಟೈಲ್ ಮತ್ತು ಟ್ರೆಂಡ್ ಗೆ ಅನುಗುಣವಾಗಿ ಟಾಪ್ ಆಯ್ಕೆ ಮಾಡುವ ಬದಲು ನಿಮ್ಮ ಸೈಜ್ ಗೆ ಅನುಗುಣವಾಗಿ ಟಾಪ್ ಅನ್ನು ಆರಿಸಿ. ನೀವು ಓವರ್-ಸೈಜ್ ಸ್ಲೀವ್ಸ್, ಗಿರ್ಡಲ್ ಟಾಪ್ಸ್, ಬಲೂನ್ ಟಾಪ್ಸ್ ಮತ್ತು ಕಫ್ತಾನ್ ಟಾಪ್ ಹಾಕೋದು ತಪ್ಪಿಸಿ. ಬದಲಾಗಿ, ಉತ್ತಮ ಪ್ರಿಂಟ್ ಇರುವ ಸ್ಟ್ರೈಟ್ ಸ್ಲೀವ್ಸ್ , ತ್ರಿ ಫೋರ್ತ್ ಸ್ಲೀವ್ ಟಾಪ್ ಧರಿಸಿ. ನೀವು ಗಾಢ ಬಣ್ಣದ ಸ್ಲಿಮ್-ಲುಕ್ ಟಾಪ್ ಅನ್ನು ಆಯ್ಕೆ ಮಾಡೋದನ್ನು ಮರೆಯಬೇಡಿ.
ಸ್ಲಿಮ್ ಲುಕ್ ಗಾಗಿ ನೀವು ಜೀನ್ಸ್ ಆಯ್ಕೆ ಮಾಡಿ :
ಜೀನ್ಸ್ ಖರೀದಿಸುವಾಗ ನೀವು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ನೀವು ಸ್ಕಿನ್ ಫಿಟ್ ಜೀನ್ಸ್ ಧರಿಸಿದರೆ, ಬೊಜ್ಜು ಎದ್ದು ಕಾಣುವಂತೆ ಮಾಡುತ್ತದೆ. ನೀವು ಲೂಸ್ ಸೈಜ್ ಜೀನ್ಸ್ ಧರಿಸಿದ್ರೆ ಹೆಚ್ಚು ಬೊಜ್ಜು ಇರುವಂತೆ ಕಾಣುತ್ತೆ. ಸ್ಲಿಮ್ ಲುಕ್ ಗಾಗಿ ನೀವು ಪೆನ್ಸಿಲ್ ಜೀನ್ಸ್ ಧರಿಸುವುದು ಉತ್ತಮ.