- Home
- Life
- Fashion
- Gen Z ಹೊಸ ಶಾಪಿಂಗ್ ಪ್ಲೇಸ್ ಆಗ್ತಿದೆ ರೀಲ್ಸ್, ಖರೀದಿಗೂ ಮುನ್ನ ಸೋಶಿಯಲ್ ಮೀಡಿಯಾ ಸರ್ಚ್ ಈಗ ಟ್ರೆಂಡ್
Gen Z ಹೊಸ ಶಾಪಿಂಗ್ ಪ್ಲೇಸ್ ಆಗ್ತಿದೆ ರೀಲ್ಸ್, ಖರೀದಿಗೂ ಮುನ್ನ ಸೋಶಿಯಲ್ ಮೀಡಿಯಾ ಸರ್ಚ್ ಈಗ ಟ್ರೆಂಡ್
ಸೋಶಿಯಲ್ ಮೀಡಿಯಾದಲ್ಲಿ ಎಂಟರ್ಟೈನ್ಮೆಂಟ್ ವಿಡಿಯೋ ಮಾತ್ರ ಸಿಗ್ತಿಲ್ಲ. ಹೊಸ ಪ್ರಾಡೆಕ್ಟ್, ಮೇಕಪ್ ಐಟಂ ಸೇರಿದಂತೆ ಅನೇಕ ಫ್ಯಾಷನ್ ವಸ್ತುಗಳ ಬಗ್ಗೆ ರೀಲ್ಸ್, ವಿಡಿಯೋ ಮಾಡಲಾಗ್ತಿದೆ. ಈವರೆಗೂ ನೋಡದ ಕೆಲ ಐಟಂಗಳು ನಮ್ಮ ಗಮನ ಸೆಳೆಯುತ್ತಿವೆ. ಜೆನ್ ಜಿಗಳಿಗೆ ಶಾಪಿಂಗ್ ಮಾಡಲು ಇದೇ ಫೆವರೆಟ್ ಜಾಗವಾಗ್ತಿದೆ.

ಮೆಟಾ ಅಧ್ಯಯನ
ಭಾರತದಲ್ಲಿ ರೀಲ್ಸ್ ನೋಡಿ ಶಾಪಿಂಗ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಜೆನ್ ಜೀಗಳು ಶಾಪಿಂಗ್ ಮಾಡೋ ಮೊದಲು ರೀಲ್ಸ್, ವಿಡಿಯೋದಲ್ಲಿ ವಸ್ತುಗಳ ರಿವ್ಯೂ ನೋಡಿ ಖರೀದಿ ಮಾಡ್ತಿದ್ದಾರೆ. ಇತ್ತೀಚಿಗೆ ನಡೆದ ಮೆಟಾ ಅಧ್ಯಯನ ಈ ಬಗ್ಗೆ ಅಚ್ಚರಿ ವಿಷ್ಯ ತಿಳಿಸಿದೆ. ಸಂಶೋಧನೆ ಪ್ರಕಾರ, ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಭಾರತೀಯರು, ಬ್ಯೂಟಿ, ಮೇಕಪ್, ಫ್ಯಾಷನ್ ಮತ್ತು ಫಿಟ್ನೆಸ್ ಗೆ ಸಂಬಂಧಿತ ವಿಷಯವನ್ನು ಹೆಚ್ಚಿನ ಪ್ರಮಾಣದಲ್ಲಿ ನೋಡ್ತಿದ್ದಾರೆ. 23 ನಗರಗಳಲ್ಲಿ 4,000 ಕ್ಕೂ ಹೆಚ್ಚು ಜನರ ಅಧ್ಯಯನ ನಡೆದಿದೆ.
Gen-Z ಆಕರ್ಷಿಸಿದ ರೀಲ್ಸ್
Gen-Z ಗಳು ರೀಲ್ಸ್ ನೋಡೋ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಡೇಟಾ ಪ್ರಕಾರ, ಶೇಕಡಾ 89ರಷ್ಟು ಜೆನ್ ಜಿ ಬಳಕೆದಾರರು ಪ್ರತಿದಿನ ರೀಲ್ಸ್ ನೋಡ್ತಾರೆ. ಶೇಕಡಾ 84 ರಷ್ಟು ಜೆನ್ ಜಿಗಳು ಹೊಸ ಉತ್ಪನ್ನ ಮತ್ತು ಬ್ರ್ಯಾಂಡ್ ಹುಡುಕುವಾಗ ಮೆಟಾ ಪ್ಲಾಟ್ಫಾರ್ಮ್ ಬಳಸ್ತಾರೆ. ಯಾವುದೇ ಹೊಸ ಟ್ರೆಂಡ್ ಅಥವಾ ಬ್ರ್ಯಾಂಡ್ ಬಗ್ಗೆ ತಿಳಿದುಕೊಳ್ಳಲು ರೀಲ್ಸ್ ಪ್ರಾಥಮಿಕ ಮೂಲವಾಗಿದೆ.
ಹಳ್ಳಿಗಳು ಹಿಂದೆ ಬಿದ್ದಿಲ್ಲ
ಈ ಅಧ್ಯಯನದ ಮತ್ತೊಂದು ಆಸಕ್ತಿದಾಯಕ ಸಂಶೋಧನೆಯೆಂದರೆ, ರೀಲ್ಸ್ ನೋಡೋ ವಿಷಯದಲ್ಲಿ ನಗರ ಮತ್ತು ಗ್ರಾಮೀಣ ಬಳಕೆದಾರರ ನಡುವಿನ ಅಂತರ ಬಹುತೇಕ ಕಣ್ಮರೆಯಾಗಿದೆ. ನಗರ ಪ್ರದೇಶಗಳಲ್ಲಿ ಶೇಕಡಾ 98 ರಷ್ಟು ಬಳಕೆದಾರರು ಪ್ರತಿದಿನ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಅಂಕಿ ಅಂಶ ಶೇಕಡಾ 94 ರಷ್ಟಿದೆ. ನಗರಗಳು ಮತ್ತು ಹಳ್ಳಿಗಳಲ್ಲಿ ರೀಲ್ಸ್ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೀಕ್ಷಕರು ಒಂದೇ ರೀತಿಯ ವಿಷಯವನ್ನು ವೀಕ್ಷಿಸಲು ಬಯಸುತ್ತಾರೆ.
ಶಾಪಿಂಗ್ ಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾರ್ಗದರ್ಶಿ
ಮೊದಲೇ ಹೇಳಿದಂತೆ ಬರೀ ಎಂಟರ್ಟೈನ್ಮೆಂಟ್ ಗೆ ಜನ ರೀಲ್ಸ್ ನೋಡ್ತಿಲ್ಲ. ರೀಲ್ಸ್ ಜನರ ಶಾಪಿಂಗ್ ಅಭ್ಯಾಸಗಳನ್ನು ಬದಲಾಯಿಸ್ತಿದೆ. ಅಂಗಡಿಗೆ ಹೋಗುವ ಮೊದಲು ಅಥವಾ ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮೊದಲು ಜನರು ರೀಲ್ಸ್ ನೋಡ್ತಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಾಜೆಕ್ಟ್ ಅಥವಾ ಬ್ರ್ಯಾಂಡ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬ್ರ್ಯಾಂಡ್ ಜೊತೆ ಜನರ ಕನೆಕ್ಷನ್
ಸ್ಟಡಿ ಪ್ರಕಾರ, ಶೇಕಡಾ 81 ರಷ್ಟು ಜನರು ಮೊದಲು ರೀಲ್ಸ್ ಮೂಲಕ ಹೊಸ ಉತ್ಪನ್ನ ಅಥವಾ ಬ್ರ್ಯಾಂಡ್ ಬಗ್ಗೆ ಕಲಿತಾರೆ. ಖರೀದಿ ಮೊದಲು ರೀಲ್ಸ್ ನೋಡೋದು ಹೆಚ್ಚು ಪರಿಣಾಮಕಾರಿ ಅಂತ ಶೇಕಡಾ 66 ರಷ್ಟು ಜನರು ನಂಬುತ್ತಾರೆ. ಶೇಕಡಾ 47 ಜನರಿಗೆ ರೀಲ್ಸ್, ಶಾಪಿಂಗ್ ನಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದೆ. ಈ ಅಂಕಿಅಂಶಗಳು ರೀಲ್ಸ್ ಈಗ ಜನರನ್ನು ಬ್ರ್ಯಾಂಡ್ಗಳೊಂದಿಗೆ ಸಂಪರ್ಕಿಸಲು ಪ್ರಮುಖ ಸಾಧನವಾಗಿದೆ ಎಂಬುದನ್ನು ಸ್ಪಷ್ಟಪಡಿಸ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

