ಆಕರ್ಶಕವಾಗಿ ಕಾಣಲು ಇಲ್ಲಿದೆ ಸುಲಭ ಮೇಕಪ್ ಟಿಪ್ಸ್
ಮೇಕಪ್ ಅಂದ್ರೆ ಎಲ್ಲರಿಗೂ ಇಷ್ಟ. ಆದ್ರೆ ಸರಿಯಾಗಿ ಹೇಗೆ ಮಾಡೋದು ಅಂತ ಗೊತ್ತಿರಲ್ಲ. ಶುರುವಿನಲ್ಲಿ ತಪ್ಪುಗಳಾಗೋದು ಸಹಜ. ಆದ್ರೆ ಈ ಸುಲಭ ಟಿಪ್ಸ್ ಫಾಲೋ ಮಾಡಿದ್ರೆ, ಸುಂದರ ಮೇಕಪ್ ಮಾಡಬಹುದು. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮುಖ ತೊಳೆದು ಮಾಯಿಶ್ಚರೈಸ್ ಮಾಡಿ
ಮೇಕಪ್ ಮಾಡುವ ಮುನ್ನ ಮುಖ ತೊಳೆದು ಟವೆಲ್ ನಿಂದ ಒರೆಸಿಕೊಳ್ಳಿ. ನಂತರ ನಿಮ್ಮ ಚರ್ಮಕ್ಕೆ ತಕ್ಕಂತೆ ಮಾಯಿಶ್ಚರೈಸರ್ ಹಚ್ಚಿ. ಇದು ಮೇಕಪ್ ಸುಲಭವಾಗಿ ಹಚ್ಚಲು ಸಹಾಯ ಮಾಡುತ್ತದೆ.
ಪ್ರೈಮರ್ ಹಚ್ಚಿ
ಪ್ರೈಮರ್ ಮೇಕಪ್ ನ ಮೊದಲ ಹಂತ. ಇದು ಚರ್ಮ ಮೃದುವಾಗಿಸಿ, ಮೇಕಪ್ ಹೆಚ್ಚು ಹೊತ್ತು ಇರಲು ಸಹಾಯ ಮಾಡುತ್ತದೆ. ಮುಖ, ಮೂಗು, ಹಣೆಗೆ ಪ್ರೈಮರ್ ಹಚ್ಚಿ.
ಫೌಂಡೇಶನ್ ಮತ್ತು ಕನ್ಸೀಲರ್
ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಫೌಂಡೇಶನ್ ಆರಿಸಿ. ಸ್ಪಂಜ್ ಅಥವಾ ಬ್ರಷ್ ಬಳಸಿ ಮುಖಕ್ಕೆ ಹಚ್ಚಿ. ಕಪ್ಪು ಕಲೆಗಳನ್ನು ಮುಚ್ಚಲು ಕನ್ಸೀಲರ್ ಬಳಸಿ.
ಕಣ್ಣಿನ ಮೇಕಪ್
ಕಣ್ಣಿನ ಮೇಕಪ್ ಮುಖಕ್ಕೆ ಒಂದು ಹೊಳಪು ನೀಡುತ್ತದೆ. ಐಬ್ರೋ ಪೆನ್ಸಿಲ್ ಬಳಸಿ ಹುಬ್ಬುಗಳನ್ನು ಆಕಾರಕ್ಕೆ ತನ್ನಿ. ಐಶ್ಯಾಡೋ, ಐಲೈನರ್ ಮತ್ತು ಮಸ್ಕರಾ ಬಳಸಿ ಕಣ್ಣುಗಳನ್ನು ಆಕರ್ಷಕವಾಗಿ ಮಾಡಿ.
ಬ್ಲಶ್ ಮತ್ತು ಹೈಲೈಟರ್
ಗಲ್ಲಗಳಿಗೆ ಬ್ಲಶ್ ಹಚ್ಚಿ. ಮೂಗಿನ ಮೇಲೆ, ಹಣೆಯ ಮೇಲೆ ಹೈಲೈಟರ್ ಹಚ್ಚಿದರೆ ಮುಖಕ್ಕೆ ಒಂದು ನೈಸರ್ಗಿಕ ಹೊಳಪು ಬರುತ್ತದೆ.
ಲಿಪ್ಸ್ಟಿಕ್ ಮತ್ತು ಸೆಟ್ಟಿಂಗ್ ಸ್ಪ್ರೇ
ನಿಮ್ಮ ಡ್ರೆಸ್ ಗೆ ಹೊಂದುವ ಲಿಪ್ಸ್ಟಿಕ್ ಹಚ್ಚಿ. ಲಿಪ್ ಲೈನರ್ ಬಳಸಿ ಲಿಪ್ಸ್ಟಿಕ್ ಸರಿಯಾಗಿ ಹಚ್ಚಿ. ಮೇಕಪ್ ಸೆಟ್ ಮಾಡಲು ಸೆಟ್ಟಿಂಗ್ ಸ್ಪ್ರೇ ಬಳಸಿ.