MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • Glowing Skin Tips: ಮುಖ ಹೊಳೆಯುವಂತೆ ಮಾಡೋ ಐಸ್ ಕ್ಯೂಬ್ ಸೀಕ್ರೆಟ್ ಇಲ್ಲಿದೆ

Glowing Skin Tips: ಮುಖ ಹೊಳೆಯುವಂತೆ ಮಾಡೋ ಐಸ್ ಕ್ಯೂಬ್ ಸೀಕ್ರೆಟ್ ಇಲ್ಲಿದೆ

ನಿಮ್ಮ ಅಂದವನ್ನು ಹೆಚ್ಚಿಸೋಕೆ, ಮುಖದ ಗ್ಲೋ ಹೆಚ್ಚಿಸಿಕೊಳ್ಳಲು ನೀವು ಕೇವಲ ಐಸ್ ಕ್ಯೂಬ್ ಬಳಕೆ ಮಾಡಿದ್ರೆ ಸಾಲದು, ಅದರ ಜೊತೆಗೆ ಈ ವಸ್ತುಗಳನ್ನು ಬೆರೆಸಿದ್ರೆ ಸ್ಕಿನ್ ಸೂಪರ್ ಆಗುತ್ತೆ.

2 Min read
Author : Pavna Das
Published : May 29 2025, 08:18 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : pinterest

ಐಸ್ ಕ್ಯೂಬ್ (ice cube) ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವ ವಿಧಾನ ನಿಮಗೆ ಗೊತ್ತಿದೆ. ಆದರೆ ಇವತ್ತು ನಾವು ಯಾರು ನಿಮಗೆ ಇಲ್ಲಿವರೆಗೂ ಹೇಳಿರದ ಐಸ್ ಕ್ಯೂಬ್ ಬ್ಯೂಟಿ ರೆಸಿಪಿ ಬಗ್ಗೆ ಹೇಳ್ತೀವಿ. ಈ ಐಸ್ ಕ್ಯೂಬ್ ನೀವು ಬಳಸಿದ್ದೇ ಆದ್ರೆ ಸ್ಕಿನ್ ಗ್ಲೋ ಆಗೋದು ಖಚಿತಾ.

28
Image Credit : Freepik

ಅಕ್ಕಿ ಐಸ್ ಕ್ಯೂಬ್‌ಗಳು - ಸುಕ್ಕುಗಳು ಮತ್ತು ವಯಸ್ಸಾಗುವಿಕೆಯನ್ನು ತಡೆಯಲು

ಸಾಮಗ್ರಿಗಳು:

1/2 ಕಪ್ ಬೇಯಿಸಿದ ಅನ್ನ

1/2 ಕಪ್ ಹಾಲು ಅಥವಾ ಅಕ್ಕಿ ನೀರು

1 ಟೀ ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಎಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ. ಅಗತ್ಯವಿದ್ದರೆ ಸೋಸಿ, ಐಸ್ ಟ್ರೇಗೆ ಹಾಕಿ ಮತ್ತು ಫ್ರೀಜ್ ಮಾಡಿ. ಈ ಐಸ್ ಕ್ಯೂಬ್ ಗಳಿಂದ ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡೋದ್ರಿಂದ ಮುಖದ ಸುಕ್ಕುಗಳು ನಿವಾರಣೆಯಾಗುತ್ತೆ.

Related Articles

Related image1
Bridal skin care tips: ಬೇಸಿಗೆ ಬಿಸಿಲು, ಬೆವರುವಿಕೆ ನಡುವೇ ವಧು ಚರ್ಮದ ಆರೈಕೆ ಮಾಡೋದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್!
Related image2
Skin Care: ಯಾವುದೇ ಕಾರಣಕ್ಕೂ ಇವುಗಳನ್ನು ಮುಖಕ್ಕೆ ಹಚ್ಚಬೇಡಿ
38
Image Credit : Freepik

ಪುದೀನ ಮತ್ತು ಗ್ರೀನ್ ಟೀ ಐಸ್ ಕ್ಯೂಬ್‌ - ಮೊಡವೆ ಮತ್ತು ಆಯಿಲಿ ಸ್ಕಿನ್

ಸಾಮಗ್ರಿಗಳು:

1 ಕಪ್ ಕುದಿಸಿ ತಣ್ಣಗಾದ ಗ್ರೀನ್ ಟೀ

ಒಂದು ಹಿಡಿ ಪುದೀನ ಎಲೆಗಳು (mint leaves)

ತಯಾರಿಸುವ ವಿಧಾನ

ಗ್ರೀನ್ ಟೀ ಜೊತೆ ಪುದೀನ ಎಲೆಗಳನ್ನು ಸೇರಿಸಿ ಮಿಕ್ಸಿ ಮಾಡಿ, ಐಸ್ ಟ್ರೇಗಳಲ್ಲಿ ಹಾಕಿ ಮತ್ತು ಫ್ರೀಜ್ ಮಾಡಿ. ಇದು ಮೊಡವೆಗಳನ್ನು ನಿವಾರಿಸಲು, ಆಯ್ಲಿ ಸ್ಕಿನ್ ನಿವಾರಿಸಲು ಸಹಾಯ ಮಾಡುತ್ತೆ.

48
Image Credit : our own

ಆಲೂಗಡ್ಡೆ ಐಸ್ ಕ್ಯೂಬ್‌ಗಳು - ಕಪ್ಪು ಕಲೆಗಳ ನಿವಾರಣೆ

ಸಾಮಗ್ರಿಗಳು:

1 ಹಸಿ ಆಲೂಗಡ್ಡೆ (ಸಿಪ್ಪೆ ಸುಲಿದು ಮತ್ತು ತುರಿದ)

1/2 ಕಪ್ ನೀರು

ತಯಾರಿಸುವ ವಿಧಾನ

ಆಲೂಗಡ್ಡೆ (potato) ಮತ್ತು ನೀರನ್ನು ಮಿಕ್ಸಿ ಮಾಡಿ, ಅದನ್ನು ಸೋಸಿ, ಟ್ರೇಗಳಲ್ಲಿ ಹಾಕಿ, ಫ್ರೀಜ್ ಮಾಡಿ. ಇದು ಹೈಪರ್‌ಪಿಗ್ಮೆಂಟೇಶನ್ ಮತ್ತು ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುತ್ತೆ.

58
Image Credit : Freepik

ಕಾಫಿ ಐಸ್ ಕ್ಯೂಬ್‌ಗಳು - ಡಾರ್ಕ್ ಸರ್ಕಲ್ ಮತ್ತು ಉಬ್ಬಿದ ಕಣ್ಣುಗಳಿಗೆ

ಸಾಮಗ್ರಿಗಳು:

1 ಕಪ್ ಕುದಿಸಿ ತಣ್ಣಗಾದ ಕಾಫಿ

ತಯಾರಿಸುವ ವಿಧಾನ

ಇದನ್ನು ಸೋಸಿ ಟ್ರೇಗಳಲ್ಲಿ ಹಾಕಿ, ಫ್ರೀಜ್ ಮಾಡಿ. ಊತ ಮತ್ತು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಕಣ್ಣುಗಳ ಸುತ್ತಲೂ ನಿಧಾನವಾಗಿ ಮಸಾಜ್ ಮಾಡಿ.

68
Image Credit : our own

ಬೀಟ್ರೂಟ್ ಐಸ್ ಕ್ಯೂಬ್‌ಗಳು - ರೋಸಿ ಗ್ಲೋಗಾಗಿ

ಸಾಮಗ್ರಿಗಳು:

1 ಸಣ್ಣ ಬೀಟ್ರೂಟ್ (beetroot)

1/2 ಕಪ್ ನೀರು

ತಯಾರಿಸುವ ವಿಧಾನ

ಎರಡನ್ನು ಮಿಕ್ಸಿ ಮಾಡಿ ರಸವನ್ನು ಸೋಸಿ, ಪ್ರೀಜ್ ಮಾಡಿ. ಈ ಐಸ್ ಕ್ಯೂಬನ್ನು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿ ಇದು ಮುಖದಲ್ಲಿನ ಹೊಳಪನ್ನು ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತೆ.

78
Image Credit : pixabay

ಟೊಮೆಟೊ ಐಸ್ ಕ್ಯೂಬ್‌ಗಳು - ದೊಡ್ಡ ರಂಧ್ರಗಳು ಮತ್ತು ಎಣ್ಣೆಯುಕ್ತ ಚರ್ಮಕ್ಕಾಗಿ

ಸಾಮಗ್ರಿಗಳು:

1 ಮಾಗಿದ ಟೊಮೆಟೊ

ಕೆಲವು ಹನಿ ನಿಂಬೆ ರಸ

ತಯಾರಿಸುವ ವಿಧಾನ

ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಸೋಸಿ, ಫ್ರೀಜ್ ಮಾಡಿ. ಈ ಕ್ಯೂಬನ್ನು ಮುಖಕ್ಕೆ ಹಚ್ಚೋದ್ರಿಂದ ಮುಖದ ರಂಧ್ರಗಳು ಬಿಗಿಯಾಗುತ್ತವೆ, ಅಲ್ಲದೇ ಮುಖದಲ್ಲಿನ ಎಣ್ಣೆಯನ್ನು ಕಡಿಮೆ ಮಾಡಲು ಇವು ಬೆಸ್ಟ್.

88
Image Credit : unsplash

ಅರಿಶಿನ ಮತ್ತು ಕಡಲೆ ಹಿಟ್ಟು ಐಸ್ ಕ್ಯೂಬ್‌ಗಳು - ಹೊಳೆಯುವ ಚರ್ಮಕ್ಕಾಗಿ

ಸಾಮಗ್ರಿಗಳು

1 ಟೀಚಮಚ ಅರಿಶಿನ

2 ಚಮಚ ಬೇಸನ್

1/2 ಕಪ್ ರೋಸ್ ವಾಟರ್ (rose water) ಅಥವಾ ನೀರು

ತಯಾರಿಸುವ ವಿಧಾನ

ಇವೆಲ್ಲವನ್ನೂ ನಯವಾಗಿ ಪೇಸ್ಟ್ ಮಾಡಿ, ಬೇಕಾದಷ್ಟು ನೀರು ಸೇರಿಸಿ, ಫ್ರೀಜ್ ಮಾಡಿ. ಇದರಿಂದ ಮಸಾಜ್ ಮಾಡೋದ್ರಿಂದ ಸ್ಕಿನ್ ಹೊಳೆಯೋದಕ್ಕೆ ಶುರುವಾಗುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೌಂದರ್ಯ ಸಲಹೆಗಳು

Latest Videos
Recommended Stories
Recommended image1
ಹೆಂಗಸ್ರು ಬಿಟ್ರು- ಗಂಡಸ್ರು ಅಪ್ಪಿಕೊಂಡ್ರು: ಈಗ ಮಂಗಳಸೂತ್ರದ ಸರದಿ! ಪ್ರಿಯಾಂಕಾ ಪತಿಯ ಬ್ರೇಸ್​ಲೈಟ್​ ನೋಡಿ
Recommended image2
ಡಯಟ್ ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ; ಎಲ್ಲಾ ಊಟಕ್ಕಿಂತ 'ಈ ಊಟ'ವೇ ಶ್ರೇಷ್ಠ ಎಂದ ಕನ್ನಡದ ಕುವರಿ!
Recommended image3
ಕಾಸ್ಮೆಟಿಕ್ ಸರ್ಜರಿ ನಡೆಸಿದ ನಾಲ್ಕೇ ದಿನಕ್ಕೆ 20ರ ಹರೆಯದ ಇನ್‌ಫ್ಲುಯೆನ್ಸರ್ ಸಾವು, ವೈದ್ಯರ ಎಚ್ಚರಿಕೆ
Related Stories
Recommended image1
Bridal skin care tips: ಬೇಸಿಗೆ ಬಿಸಿಲು, ಬೆವರುವಿಕೆ ನಡುವೇ ವಧು ಚರ್ಮದ ಆರೈಕೆ ಮಾಡೋದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್!
Recommended image2
Skin Care: ಯಾವುದೇ ಕಾರಣಕ್ಕೂ ಇವುಗಳನ್ನು ಮುಖಕ್ಕೆ ಹಚ್ಚಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved