Fashion Tips : ಈ ದೀಪಾವಳಿಗೆ ದುಬಾರಿ ಬಟ್ಟೆಗಳನ್ನು ಖರೀದಿಸುವ ಬದಲು ನಿಮ್ಮ ಸರಳ ಸೂಟ್‌ ಅನ್ನೇ ಸುಂದರವಾಗಿ ಸ್ಟೈಲ್ ಮಾಡಿ. ಸರಿಯಾದ ದುಪಟ್ಟಾ, ಆಭರಣ, ಫುಟ್‌ವೇರ್ ಮತ್ತು ಮೇಕಪ್ ಮೂಲಕ ನಿಮ್ಮ ಹಳೆಯ ಸೂಟ್‌ಗೂ ಹೊಸ ಹಾಗೂ ರಾಯಲ್ ಲುಕ್ ನೀಡಬಹುದು. ಸ್ವಲ್ಪ ಕ್ರಿಯೇಟಿವಿಟಿ ಬಳಸಿದರೆ ಸಾಕು!

ದೀಪಾವಳಿಗೆ ಸಿಂಪಲ್ ಸೂಟ್‌ಗೆ ರಾಯಲ್ ಲುಕ್

ದೀಪಾವಳಿ ಎಂದರೆ ಬೆಳಕು, ಸಂತೋಷ ಮತ್ತು ಸಂಭ್ರಮದ ಹಬ್ಬ. ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಲು ಬಯಸುತ್ತಾರೆ. ಹೀಗಿರುವಾಗ ಈ ದೀಪಾವಳಿಗೆ ಹೊಸ ಬಟ್ಟೆ ಖರೀದಿಸುವ ಬದಲು ನಿಮ್ಮ ಹಳೆಯ ಅಥವಾ ಸಿಂಪಲ್ ಸೂಟ್ ಅನ್ನೇ ಧರಿಸಲು ಯೋಚಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸರಿಯಾದ ಸ್ಟೈಲಿಂಗ್ ಮತ್ತು ಆಕ್ಸೆಸರೀಸ್‌ಗಳ ಸಹಾಯದಿಂದ ಸರಳವಾದ ಸೂಟ್‌ಗೂ ಹೆವಿ ಹಾಗೂ ರಾಯಲ್ ಲುಕ್ ನೀಡಬಹುದು. ಅದು ಹೇಗೆ ನೋಡೋಣ.

ಹೆವಿ ದುಪಟ್ಟಾದಿಂದ ರಾಯಲ್ ಲುಕ್

ಸರಳವಾದ ಸೂಟ್‌ಗೆ ಹಬ್ಬದ ಕಳೆ ನೀಡಲು ಹೆವಿ ದುಪಟ್ಟಾ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಸೂಟ್‌ನೊಂದಿಗೆ ಬನಾರಸಿ, ಸಿಲ್ಕ್, ಆರ್ಗೆಂಜಾ ಅಥವಾ ಗೋತಾ-ಪಟ್ಟಿ ವರ್ಕ್ ಇರುವ ದುಪಟ್ಟಾ ಧರಿಸಬಹುದು. ನಿಮ್ಮ ಸೂಟ್ ಒಂದೇ ಬಣ್ಣದಲ್ಲಿದ್ದರೆ ಅದಕ್ಕೆ ಕಾಂಟ್ರಾಸ್ಟ್ ಬಣ್ಣದ ದುಪಟ್ಟಾ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಸಂಪೂರ್ಣ ಲುಕ್‌ಗೆ ವಿಶೇಷ ಮೆರುಗು ನೀಡುತ್ತದೆ.

ಸ್ಟೇಟ್‌ಮೆಂಟ್ ಜ್ಯುವೆಲ್

ಸಿಂಪಲ್ ಸೂಟ್‌ಗೆ ಹೆವಿ ಲುಕ್ ನೀಡುವಲ್ಲಿ ಆಭರಣಗಳ ಪಾತ್ರ ಬಹಳ ಮುಖ್ಯ. ನೀವು ಆಭರಣಗಳನ್ನು ಧರಿಸಲು ಇಷ್ಟಪಡುವವರಾಗಿದ್ದರೆ ಚಾಂದ್‌ಬಾಲಿ, ಕುಂದನ್ ಜುಮ್ಕಾ, ಹೆವಿ ನೆಕ್ಲೆಸ್ ಅಥವಾ ಆಕ್ಸಿಡೈಸ್ಡ್ ಜ್ಯುವೆಲ್ಲರಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಸೂಟ್‌ನ ಕತ್ತಿನ ವಿನ್ಯಾಸ ಸರಳವಾಗಿದ್ದರೆ ಅದರೊಂದಿಗೆ ಚೋಕರ್ ಅಥವಾ ಸ್ಟೇಟ್‌ಮೆಂಟ್ ನೆಕ್ಲೆಸ್ ಚೆನ್ನಾಗಿ ಹೊಂದಿಕೆಯಾಗುತ್ತದೆ. ಅದೇ ರೀತಿ ಹೆವಿ ಇಯರಿಂಗ್ ಧರಿಸುತ್ತಿದ್ದರೆ ನೆಕ್ಲೆಸ್ ಲೈಟ್ ಆಗಿರಲಿ.

ಬೆಲ್ಟ್‌ನೊಂದಿಗೆ ದುಪಟ್ಟಾವನ್ನು ಸ್ಟೈಲ್ ಮಾಡಿ

ನಿಮ್ಮ ಎಥ್ನಿಕ್ ಲುಕ್‌ಗೆ ಸ್ವಲ್ಪ ಮಾಡರ್ನ್ ಟಚ್ ನೀಡಲು ಬಯಸಿದರೆ ದುಪಟ್ಟಾದೊಂದಿಗೆ ಎಥ್ನಿಕ್ ಬೆಲ್ಟ್ ಟ್ರೈ ಮಾಡಬಹುದು. ಸೊಂಟದ ಭಾಗದಲ್ಲಿ ಬೆಲ್ಟ್ ಧರಿಸುವುದರಿಂದ ಸೂಟ್‌ಗೆ ವಿಭಿನ್ನ ಸ್ಟೈಲ್ ಸಿಗುತ್ತದೆ. ಜೊತೆಗೆ ದುಪಟ್ಟಾ ಕೂಡ ತನ್ನ ಜಾಗದಲ್ಲಿಯೇ ಇರುತ್ತದೆ. ಇದಕ್ಕಾಗಿ ಮೆಟಲ್, ಎಂಬ್ರಾಯ್ಡರಿ ಅಥವಾ ಫ್ಯಾಬ್ರಿಕ್ ಬೆಲ್ಟ್‌ಗಳನ್ನು ಆಯ್ಕೆ ಮಾಡಬಹುದು.

ಫೆಸ್ಟಿವ್ ಫುಟ್‌ವೇರ್ ಆಯ್ಕೆ ಮಾಡಿ

ಒಂದು ಸುಂದರವಾದ ಉಡುಗೆಗೆ ಸೂಕ್ತವಾದ ಫುಟ್‌ವೇರ್ ಕೂಡ ಅಗತ್ಯ. ದೀಪಾವಳಿಯಂದು ನಿಮ್ಮ ಸಿಂಪಲ್ ಸೂಟ್‌ನೊಂದಿಗೆ ಎಂಬ್ರಾಯ್ಡರಿ ವರ್ಕ್ ಇರುವ ಚಪ್ಪಲ್ ಅಥವಾ ಗೋಲ್ಡನ್-ಸಿಲ್ವರ್ ಸ್ಯಾಂಡಲ್‌ಗಳನ್ನು ಧರಿಸಬಹುದು. ಸೂಟ್ ಸರಳವಾಗಿದ್ದರೆ ಸ್ವಲ್ಪ ವರ್ಕ್ ಇರುವ ಚಪ್ಪಲಿಗಳು ನಿಮ್ಮ ಲುಕ್‌ಗೆ ಮತ್ತಷ್ಟು ಮೆರುಗು ನೀಡುತ್ತವೆ. ಆದರೆ ಫುಟ್‌ವೇರ್ ಆಯ್ಕೆ ಮಾಡುವಾಗ ಆರಾಮಕ್ಕೂ ಆದ್ಯತೆ ನೀಡಿ.

ಹೇರ್‌ಸ್ಟೈಲ್‌ನಿಂದ ಬದಲಿಸಿ ನಿಮ್ಮ ಸಂಪೂರ್ಣ ಲುಕ್

ದೀಪಾವಳಿಗೆ ಕೇವಲ ಬಟ್ಟೆ ಮತ್ತು ಆಭರಣಗಳ ಕಡೆಗೆ ಗಮನ ನೀಡಿದರೆ ಸಾಲದು. ನಿಮ್ಮ ಲುಕ್‌ಗೆ ಪರ್ಫೆಕ್ಟ್ ಫಿನಿಶಿಂಗ್ ನೀಡಲು ಸರಿಯಾದ ಹೇರ್‌ಸ್ಟೈಲ್ ಕೂಡ ಮುಖ್ಯ. ಸೂಟ್‌ನೊಂದಿಗೆ ಸ್ಲೀಕ್ ಬನ್, ಲೋ ಬನ್, ಸಾಫ್ಟ್ ಕರ್ಲ್ಸ್ ಅಥವಾ ಹಾಫ್-ಅಪ್ ಹೇರ್‌ಸ್ಟೈಲ್ ಟ್ರೈ ಮಾಡಬಹುದು. ಬನ್‌ನೊಂದಿಗೆ ಹೂವನ್ನ ಮುಡಿದರೆ ಟ್ರೆಡಿಶನಲ್ ಲುಕ್ ಪಡೆಯಬಹುದು. ಇನ್ನು ಓಪನ್ ಹೇರ್ ಸಾಫ್ಟ್ ಕರ್ಲ್ಸ್ ಮಾಡಿಕೊಂಡರೆ ಮಾಡರ್ನ್ ಹಾಗೂ ಸ್ಟೈಲಿಶ್ ಆಗಿ ಕಾಣಬಹುದು.