MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಸೀರೆಯಲ್ಲಿ Slim & Tall ಕಾಣಬೇಕೆ? ಈ ಡ್ರೇಪಿಂಗ್‌ ಮಿಸ್ಟೇಕ್ ಅವಾಯ್ಡ್ ಮಾಡಿ

ಸೀರೆಯಲ್ಲಿ Slim & Tall ಕಾಣಬೇಕೆ? ಈ ಡ್ರೇಪಿಂಗ್‌ ಮಿಸ್ಟೇಕ್ ಅವಾಯ್ಡ್ ಮಾಡಿ

Fashion Tips: ಸೀರೆ ಭಾರತೀಯ ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಉಡುಗೆಯಾಗಿದ್ದು, ಯಾವುದೇ ಸಂದರ್ಭಕ್ಕೂ ಅದ್ಭುತವಾದ ಸೊಬಗನ್ನು ನೀಡುತ್ತದೆ; ಆದರೂ, ನಿಮ್ಮ ನೆಚ್ಚಿನ ಸೀರೆಯನ್ನು ಧರಿಸಿದ ನಂತರವೂ, ಟಾಲ್ ಆಗಿ ಕಾಣದೇ ಇದ್ದಾಗ ಈ ಟ್ರಿಕ್ಸ್ ಟ್ರೈ ಮಾಡಿ 

2 Min read
Author : Pavna Das
Published : Jul 02 2026, 06:53 PM IST
Share this Photo Gallery
  • FB
  • TW
  • Linkdin
  • Whatsapp
16
ಸೀರೆಯಲ್ಲಿ ಎತ್ತರವಾಗಿ ಕಾಣಲು ಬಯಸಿದ್ದೀರಾ?
Image Credit : pinterest

ಸೀರೆಯಲ್ಲಿ ಎತ್ತರವಾಗಿ ಕಾಣಲು ಬಯಸಿದ್ದೀರಾ?

ನೀವು ಸೀರೆಯಲ್ಲಿ ಎತ್ತರವಾಗಿ ಮತ್ತು ಸ್ಲಿಮ್ ಆಗಿ ಕಾಣಬೇಕೆಂದು ಬಯಸಿದರೆ, ಕೇವಲ ಬಟ್ಟೆಯಿಂದ ಸಾಧ್ಯ ಇಲ್ಲ. ನೀವು ಅದನ್ನು ಉಡುವ ವಿಧಾನವೂ ಅಷ್ಟೇ ಮುಖ್ಯ. ನಾವು ಸೀರೆಯನ್ನು ಉಡುವಾಗ ಕೆಲವೊಂದು ಸಣ್ಣ ತಪ್ಪುಗಳನ್ನು ಮಾಡುತ್ತೇವೆ, ಅದು ನಮ್ಮನ್ನು ದಪ್ಪ ಅಥವಾ ಕುಳ್ಳಗೆ ಕಾಣುವಂತೆ ಮಾಡುತ್ತದೆ. ಹಾಗಾಗಿ ನಿವು ಯಾವ ಮಿಸ್ಟೇಕ್ ಅವಾಯ್ಡ್ ಮಾಡಬೇಕು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೀರೆ ಉಟ್ಟ ನಂತರ ಪಾದರಕ್ಷೆ ಹಾಕಿಕೊಳ್ಳುವುದು
Image Credit : others

ಸೀರೆ ಉಟ್ಟ ನಂತರ ಪಾದರಕ್ಷೆ ಹಾಕಿಕೊಳ್ಳುವುದು

ಹೆಚ್ಚಿನ ಮಹಿಳೆಯರು ಮಾಡುವ ಸಾಮಾನ್ಯ ತಪ್ಪು ಇದು. ಸೀರೆ ಉಡಲು ಪ್ರಾರಂಭಿಸುವ ಮೊದಲು ಯಾವಾಗಲೂ ನಿಮ್ಮ ಸ್ಯಾಂಡಲ್ ಅಥವಾ ಹೀಲ್ಸ್ ಅನ್ನು ಧರಿಸಿ. ನೀವು ಸೀರೆ ಉಟ್ಟ ನಂತರ ಹೀಲ್ಸ್ ಧರಿಸಿದರೆ, ಸೀರೆಯು ನಿಮ್ಮ ಪಾದಗಳಿಂದ ಮೇಲಕ್ಕೆ ನಿಂತುಕೊಳ್ಳುತ್ತದೆ. ಇದು ಸೀರೆಯ ಡ್ರಾಪ್ ಅನ್ನು ಹಾಳುಮಾಡುವುದಲ್ಲದೆ ನಿಮ್ಮ ಕಾಲುಗಳನ್ನು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ, ಇದರಿಂದಾಗಿ ನೀವು ಕುಳ್ಳಗೆ ಕಾಣುತ್ತೀರಿ. ಹಾಗಾಗಿ ಹೀಲ್ಸ್ ಧರಿಸಿ ಅದಕ್ಕೆ ತಕ್ಕಂತೆ ಸೀರೆಯನ್ನು ಕೆಳಗಿನವರೆಗೂ ಡ್ರೇಪ್ ಮಾಡಿ.

Related Articles

Related image1
Maternity Fashion: ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!
Related image2
Ajrakh Saree: ದಿನನಿತ್ಯ ಬಳಕೆಗೆ ಬೆಸ್ಟ್ ಕಾಟನ್ ಅಜ್ರಖ್ ಸೀರೆಗಳ ಈ 6 ಡಿಸೈನ್ಸ್!
36
ಬಹಳ ಅಗಲವಾದ ನೆರಿಗೆ ಹಿಡಿಯುವುದು
Image Credit : instagram

ಬಹಳ ಅಗಲವಾದ ನೆರಿಗೆ ಹಿಡಿಯುವುದು

ಸೀರೆಯ ಮುಂಭಾಗದ ನೆರಿಗೆಗಳು ನಿಮ್ಮ ಸಂಪೂರ್ಣ ಲುಕ್ ಬದಲಾಯಿಸಬಹುದು. ಬೇಗನೆ ರೆಡಿಯಾಗುವ ಅವಸರದಲ್ಲಿ ನಾವು ಹೆಚ್ಚಾಗಿ ಅಗಲವಾದ ನೆರಿಗೆ ಹಿಡಿಯುತ್ತೇವೆ. ಇದರಿಂದಾಗಿ ಹೊಟ್ಟೆಯ ಬಳಿ, ಹೆಚ್ಚು ಬಟ್ಟೆ ಸಂಗ್ರಹವಾಗುತ್ತದೆ. ಇದು ಹೆವಿ ಲುಕ್ ನೀಡುತ್ತದೆ. ಸ್ಲಿಮ್ ಆಗಿ ಕಾಣಲು, ಯಾವಾಗಲೂ ತೆಳುವಾದ, ಅಚ್ಚುಕಟ್ಟಾಗಿ , ಒಂದೇ ರೀತಿಯಾಗಿರುವ ಪ್ಲೀಟ್ಸ್ ಮಾಡಿ ಚೆನ್ನಾಗಿ ಪಿನ್ ಮಾಡಿ.ಇದರಿಂದ ನೀವು ಸ್ಲಿಮ್ ಆಗಿ ಕಾಣುವಿರಿ.

46
ಪೆಟಿಕೋಟ್ ತುಂಬಾ ಮೇಲೆ ಅಥವಾ ಕೆಳಗೆ ಕಟ್ಟುವುದು
Image Credit : instagram

ಪೆಟಿಕೋಟ್ ತುಂಬಾ ಮೇಲೆ ಅಥವಾ ಕೆಳಗೆ ಕಟ್ಟುವುದು

ನಿಮ್ಮ ಪೆಟಿಕೋಟ್ ಅಥವಾ ಶೇಪ್‌ವೇರ್‌ನ ಸ್ಥಾನ ಕೂಡ ನಿಮ್ಮ ಎತ್ತರವನ್ನು ನಿರ್ಧರಿಸುತ್ತದೆ. ಸೀರೆಯನ್ನು ನಾಭಿಗಿಂತ ತುಂಬಾ ಮೇಲೆ ಕಟ್ಟುವುದರಿಂದ ನಿಮ್ಮ ಮೇಲ್ಭಾಗವು ಚಿಕ್ಕದಾಗಿ ಕಾಣುತ್ತದೆ, ಅದನ್ನು ತುಂಬಾ ಕೆಳಗೆ ಕಟ್ಟುವುದರಿಂದ ಲುಕ್ ಹಾಳಾಗುತ್ತದೆ ಮತ್ತು ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ಯಾವಾಗಲೂ ನಾಭಿಯ ಸುತ್ತಲೂ ಅಥವಾ ಸ್ವಲ್ಪ ಕೆಳಗೆ ಕಟ್ಟಿಕೊಳ್ಳಿ. ಪೆಟಿಕೋಟ್ ಬದಲಿಗೆ 'ಸೀರೆ ಶೇಪ್‌ವೇರ್' ಧರಿಸಿ. ಇದು ಸ್ಲಿಮ್ ಲುಕ್ ನೀಡುತ್ತದೆ.

56
ಪಲ್ಲು ಉದ್ದವಾಗಿರಲಿ
Image Credit : instagram

ಪಲ್ಲು ಉದ್ದವಾಗಿರಲಿ

ನಾವು ಸಾಮಾನ್ಯವಾಗಿ ಪಲ್ಲು ಹಾಕುವಾಗ ಅದನ್ನು ಚಿಕ್ಕದಾಗಿ ಮಾಡುತ್ತೇವೆ. ನೀವು ಎತ್ತರವಾಗಿ ಕಾಣಲು ಬಯಸಿದರೆ, ಯಾವಾಗಲೂ ಪಲ್ಲು ಉದ್ದವಾಗಿಡಿ. ಏಕೆಂದರೆ ಉದ್ದವಾದ ಪಲ್ಲು ಲಂಬ ರೇಖೆಯನ್ನು ಸೃಷ್ಟಿಸುತ್ತದೆ, ಇದು ನಿಮ್ಮನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಪಲ್ಲು ಪ್ಲೀಟ್‌ಗಳನ್ನು ತುಂಬಾ ಬಿಗಿಯಾಗಿ ಪಿನ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ನಿಮ್ಮ ಭುಜಗಳನ್ನು ಅಗಲವಾಗಿ ಮತ್ತು ಹೆವಿಯಾಗಿ ಕಾಣುವಂತೆ ಮಾಡುತ್ತದೆ.

66
ಆಯ್ಕೆ ಮಾಡುವ ಸೀರೆಯೂ ಮುಖ್ಯ
Image Credit : instagram

ಆಯ್ಕೆ ಮಾಡುವ ಸೀರೆಯೂ ಮುಖ್ಯ

ಡ್ರೇಪಿಂಗ್ ಸ್ಟೈಲ್ ಜೊತೆಗೆ, ಬಟ್ಟೆಯ ಬಗ್ಗೆಯೂ ಗಮನ ಕೊಡಿ. ಚಿಫೋನ್, ಜಾರ್ಜೆಟ್ ಮತ್ತು ಸ್ಯಾಟಿನ್ ನಂತಹ ಬಟ್ಟೆಗಳು ದೇಹಕ್ಕೆ ಅಂಟಿಕೊಳ್ಳುತ್ತವೆ, ಇದು ನಿಮ್ಮನ್ನು ತೆಳ್ಳಗೆ ಮತ್ತು ಎತ್ತರವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಫ್ಯಾಷನ್
ಸೀರೆ
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Gen Z ಯುವಜನರ ಹೊಸ ಕ್ರೇಝ್: ಕೃಷ್ಣನಿಂದ ಸ್ಫೂರ್ತಿ ಪಡೆದ 7 ಸಿಲ್ವರ್ ಜ್ಯುವೆಲ್ಲರಿ ಡಿಸೈನ್ಸ್ ನೋಡಿ
Recommended image2
Apple Earring: ಆ್ಯಪಲ್ ಶೇಪ್‌ನ 7 ಫಂಕಿ ಸ್ಟಡ್ ಇಯರಿಂಗ್ಸ್ ಡಿಸೈನ್ಸ್ ಇಲ್ಲಿವೆ ನೋಡಿ
Recommended image3
ನೆಕ್ಲೇಸ್, ಜುಮ್ಕಾ ಬೇಕಿಲ್ಲ; ಸಿಂಪಲ್ ಸೀರೆಯಲ್ಲಿ ಮಿಂಚಲು ಹೀಗೆ ಬಳೆ ಹಾಕೊಳ್ಳಿ
Related Stories
Recommended image1
Maternity Fashion: ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!
Recommended image2
Ajrakh Saree: ದಿನನಿತ್ಯ ಬಳಕೆಗೆ ಬೆಸ್ಟ್ ಕಾಟನ್ ಅಜ್ರಖ್ ಸೀರೆಗಳ ಈ 6 ಡಿಸೈನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved