ಮೊಬೈಲ್ ಕೂಡಾ ನಿಲ್ಲದ ಪುಟ್ಟ ಪರ್ಸ್, ಅಬ್ಬಬ್ಬಾ.. ಅಂಬಾನಿ ಸೊಸೆ ಸಿಂಪಲ್ ಕ್ಲಚ್ ಬೆಲೆ ಇಷ್ಟೊಂದಾ?
ಬಿಲಿಯನೇರ್ ಅಂಬಾನಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಸಹ ಲಕ್ಸುರಿಯಸ್ ಲೈಫ್ಸ್ಟೈಲ್ ಫಾಲೋ ಮಾಡುತ್ತಾರೆ. ಯಾವಾಗಲೂ ದುಬಾರಿ ಡ್ರೆಸ್, ಆಭರಣಗಳನ್ನು ತೊಟ್ಟು ಗಮನ ಸೆಳೆಯುತ್ತಾರೆ. ಹಾಗೆಯೇ ಇತ್ತೀಚಿಗೆ ಅವರು ಸಮಾರಂಭವೊಂದಕ್ಕೆ ಕೈಯಲ್ಲಿ ಹಿಡ್ಕೊಂಡಿದ್ದ ಪರ್ಸ್ ಬೆಲೆ ಅಬ್ಬಬ್ಬಾ ಎನ್ನುವಂತಿದೆ.
ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಯಾವಾಗಲೂ ತಮ್ಮ ಲಕ್ಸುರಿಯಸ್ ಲೈಫ್ಸ್ಟೈಲ್ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಯಾವಾಗಲೂ ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಾರೆ. ಕಾಸ್ಟ್ಲೀ ಆಸೆಸ್ಸರೀಸ್ ಧರಿಸುತ್ತಾರೆ. ಅಂಬಾನಿ ಸೊಸೆಯಂದಿರು ಧರಿಸೋ ಸೀರೆ, ಆಭರಣಗಳೇ ಕೋಟಿ ಕೋಟಿ ಬೆಲೆ ಬಾಳುತ್ತವೆ.
ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಯ ಐಷಾರಾಮಿ ಜೀವನಶೈಲಿ ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ಹಾಗೆಯೇ ಅಂಬಾನಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಸಹ ಲಕ್ಸುರಿಯಸ್ ಲೈಫ್ಸ್ಟೈಲ್ ಫಾಲೋ ಮಾಡುತ್ತಾರೆ. ಯಾವಾಗಲೂ ದುಬಾರಿ ಡ್ರೆಸ್, ಆಭರಣಗಳನ್ನು ತೊಟ್ಟು ಗಮನ ಸೆಳೆಯುತ್ತಾರೆ.
ಇತ್ತೀಚಿಗೆ ಸಮಾರಂಭವೊಂದಕ್ಕೆ ರಾಧಿಕಾ, ಸರಳವಾದ ಕಸೂತಿಯಿಂದ ಮಾಡಿದ ಸಿಲ್ವರ್ ಕಲರ್ ಸೀರೆಯನ್ನು ಧರಿಸಿದ್ದರು. ಇದರ ಜೊತೆಗೆ ಪೇರ್ ಮಾಡಿದ ಪುಟ್ಟ ಕ್ಲಚ್ ಎಲ್ಲರ ಗಮನ ಸೆಳೆಯಿತು. ಇದರ ಬೆಲೆ ಸಹ ಅಬ್ಬಬ್ಬಾ ಅನ್ನುವಂತಿದೆ. ರಾಧಿಕಾ ಮರ್ಚೆಂಟ್ ತಮ್ಮ ಪುಟ್ಟ ಪರ್ಸ್ಗೆ ಲಕ್ಷ ಲಕ್ಷ ಪಾವತಿಸಿದ್ದರು.
ಹೆಸರಾಂತ ಐಷಾರಾಮಿ ಬ್ರಾಂಡ್ ಹರ್ಮೆಸ್ ಬ್ರ್ಯಾಂಡ್ನದ್ದಾಗಿದೆ. ಇದು ಸಣ್ಣ ಹಳದಿ ಬಣ್ಣದ ಮಿನಿ ಬ್ಯಾಗ್ ಆಗಿದ್ದು, 20-ಕ್ಯಾರೆಟ್ ಚಿನ್ನದ ಡಿಸೈನ್ನೊಂದಿಗೆ ಬರುತ್ತದೆ. ಮಿಮೋಸಾ ಮ್ಯಾಟ್ ಅಲಿಗೇಟರ್ ಮಿನಿ ಪರ್ಸ್ USD 80,000 ಬೆಲೆಯದ್ದಾಗಿದೆ. ಅಂದರೆ ಬರೋಬ್ಬರಿ 66.43 ಲಕ್ಷ ರೂ. ಬೆಲೆ ಬಾಳುತ್ತದೆ.
ರಾಧಿಕಾ ಮರ್ಚೆಂಟ್, ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಕಲೆಕ್ಷನ್ ಲಾಂಚ್ ಪಾರ್ಟಿಯಲ್ಲಿ, ಗೋಲ್ಡನ್ ಬಾರ್ಡರ್ನೊಂದಿಗೆ ಜೋಡಿಯಾಗಿರುವ ರಫಲ್ ಡಿಸೈನ್ ಇರೋ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು.
ಈ ಸೀರೆ ಅಂದಾಜು USD 58,600 ಅಂದರೆ 48 ಲಕ್ಷ ರೂ. ಬೆಲೆ ಬಾಳುತ್ತದೆ. ಲೆದರ್ನ ಮಿನಿ ಎಲಿಗೇಟರ್ ಬ್ಯಾಗ್ ಸಹ ಎಲ್ಲರ ಗಮನ ಸೆಳೆಯಿತು.
ದುಬಾರಿ ಸೀರೆ, ಪರ್ಸ್ ಜೊತೆಗೆ ರಾಧಿಕಾ ಮರ್ಚೆಂಟ್ ವಜ್ರದ ಆಭರಣಗಳನ್ನು ಧರಿಸಿದ್ದರು. ಅನಂತ್ ಅಂಬಾನಿ ಜೊತೆಗಿನ ನಿಶ್ಚಿತಾರ್ಥ ಸಮಾರಂಭದಲ್ಲಿ ರಾಧಿಕಾ ಈ ಗ್ರ್ಯಾಂಡ್ ನೆಕ್ಲೇಸ್ನ್ನು ಧರಿಸಿದ್ದರು.
ಸಬ್ಯಸಾಚಿ ಸೀರೆಯು ಸಾಮಾನ್ಯವಾಗಿ 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಕಾರ್ಯಕ್ರಮದಲ್ಲಿ ರಾಧಿಕಾ ಮರ್ಚೆಂಟ್ ಔಟ್ಫಿಟ್ ಮೌಲ್ಯವು ಹಲವಾರು ಲಕ್ಷಗಳ ಮೌಲ್ಯದ್ದಾಗಿತ್ತು.