- Home
- Life
- Fashion
- ಅಹಮದಾಬಾದ್ Gen Z ಗಳಲ್ಲಿ ಶುರುವಾಗಿದೆ ಹೊಸ ಟ್ರೆಂಡ್ : ಐವಿ ಡ್ರಿಪ್ ಥೆರಪಿಯತ್ತ ಯುವಜನರ ಆಸಕ್ತಿ
ಅಹಮದಾಬಾದ್ Gen Z ಗಳಲ್ಲಿ ಶುರುವಾಗಿದೆ ಹೊಸ ಟ್ರೆಂಡ್ : ಐವಿ ಡ್ರಿಪ್ ಥೆರಪಿಯತ್ತ ಯುವಜನರ ಆಸಕ್ತಿ
ನವರಾತ್ರಿ ದಾಂಡಿಯಾ ಶುರುವಾಗುವ ಮುನ್ನವೇ ಗುಜರಾತ್ನ ಅಹಮದಾಬಾದ್ನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. Gen Z ಯುವಜನರು ಸೇರಿದಂತೆ ಹಲವರು IV ಡ್ರಿಪ್ ಥೆರಪಿಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಐವಿ ಡ್ರಿಪ್ ಎಂದ್ರೇನು ಎನ್ನುವ ಮಾಹಿತಿ ಇಲ್ಲಿದೆ.

IV ಡ್ರಿಪ್ ಥೆರಪಿ ಎಂದರೇನು?
IV ಡ್ರಿಪ್ ಅಂದರೆ Intravenous Drip. ಅಂದರೆ, ರಕ್ತನಾಳದ ಮೂಲಕ ದೇಹಕ್ಕೆ ದ್ರವಗಳು, ವಿಟಮಿನ್ಗಳು ಮತ್ತು ಇತರ ಪೋಷಕಾಂಶಗಳನ್ನು ನೀಡುವ ವೈದ್ಯಕೀಯ ವಿಧಾನ. ಕೆಲವು ಅಹಮದಾಬಾದ್ನ ಎಸ್ತೆಟಿಕ್ ಕ್ಲಿನಿಕ್ಗಳಲ್ಲಿ ನವರಾತ್ರಿ ಸಮಯದಲ್ಲಿ ಈ ಥೆರಪಿಗೆ ಬೇಡಿಕೆ ಹೆಚ್ಚಾಗಿದೆ. ವಿಟಮಿನ್ C, ವಿಟಮಿನ್ B ಕಾಂಪ್ಲೆಕ್ಸ್, ಜಿಂಕ್ ಮತ್ತು ಗ್ಲುಟಾಥಯೋನ್ನಂತಹ ಅಂಶಗಳನ್ನು ಒಳಗೊಂಡ IV ಡ್ರಿಪ್ಗಳನ್ನು ಗ್ಲೋಯಿಂಗ್ ಸ್ಕಿನ್, ಫ್ರೆಶ್ ಲುಕ್ ಮತ್ತು ಎನರ್ಜಿ ಪಡೆಯುವ ಉದ್ದೇಶದಿಂದ ಕೆಲವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
Gen Z ಯುವಜನರಲ್ಲಿ ಹೆಚ್ಚಿದ ಆಸಕ್ತಿ!
ಇಂದಿನ Gen Z ಯುವಜನರು ತಮ್ಮ ಲುಕ್, ಸ್ಕಿನ್ ಕೇರ್ ಮತ್ತು ಫಿಟ್ನೆಸ್ಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಫ್ರೆಶ್ ಆಗಿ ಕಾಣಿಸಿಕೊಳ್ಳಬೇಕು, ದಣಿವಿಲ್ಲದೆ ಸಂಭ್ರಮದಲ್ಲಿ ಭಾಗವಹಿಸಬೇಕು ಅನ್ನೋ ಕಾರಣಕ್ಕೆ ಇಂತಹ ಥೆರಪಿಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಯುವಜನರಷ್ಟೇ ಅಲ್ಲದೆ, 30 ರಿಂದ 40 ವರ್ಷದ ವೃತ್ತಿಪರರೂ ಈ ಟ್ರೆಂಡ್ನತ್ತ ಆಕರ್ಷಿತರಾಗುತ್ತಿದ್ದಾರೆ. ಕೆಲಸದ ಒತ್ತಡದ ನಡುವೆಯೂ ನವರಾತ್ರಿ ಸಂಭ್ರಮದಲ್ಲಿ ಭಾಗವಹಿಸಬೇಕು, ಜೊತೆಗೆ ತಮ್ಮ ಲುಕ್ ಬಗ್ಗೆಯೂ ಕಾಳಜಿ ವಹಿಸಬೇಕು ಅನ್ನೋದು ಕೆಲವರ ಉದ್ದೇಶವಾಗಿದೆ.
IV ಡ್ರಿಪ್ ಥೆರಪಿಗೆ ಎಷ್ಟು ಖರ್ಚಾಗುತ್ತದೆ?
ಅಹಮದಾಬಾದ್ನ ಕೆಲವು ಕ್ಲಿನಿಕ್ಗಳಲ್ಲಿ ಒಂದು IV ಡ್ರಿಪ್ ಸೆಷನ್ಗೆ ಸುಮಾರು ₹4,000ರಿಂದ ₹10,000ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ. ಇನ್ನು ಕೆಲವು ಕಡೆ ಪ್ಯಾಕೇಜ್ಗಳ ಬೆಲೆ ₹15,000ವರೆಗಿದೆ. ಆದರೆ, ಈ ಥೆರಪಿಯ ವೆಚ್ಚವು ಕ್ಲಿನಿಕ್, ಬಳಸುವ ಪದಾರ್ಥಗಳು ಮತ್ತು ನೀಡುವ ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ. ದುಬಾರಿ ಥೆರಪಿ ತೆಗೆದುಕೊಂಡರೆ ಮಾತ್ರ ಉತ್ತಮ ಸ್ಕಿನ್ ಅಥವಾ ಹೆಚ್ಚು ಎನರ್ಜಿ ಸಿಗುತ್ತದೆ ಎಂದೇನಿಲ್ಲ.
ರಾತ್ರಿ ಗರ್ಬಾ, ಬೆಳಗ್ಗೆ ಆಫೀಸ್!
ಅಹಮದಾಬಾದ್ನ ಪ್ರಹ್ಲಾದ್ ನಗರದಲ್ಲಿ ವಾಸಿಸುವ 24 ವರ್ಷದ ಡಿಜಿಟಲ್ ಸ್ಟ್ರಾಟಜಿಸ್ಟ್ ರಿಯಾ ಶಾ ಈ ಟ್ರೆಂಡ್ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲಸದ ಡೆಡ್ಲೈನ್ಗಳ ನಡುವೆ ನವರಾತ್ರಿ ಸಂಭ್ರಮದಲ್ಲೂ ಭಾಗವಹಿಸಬೇಕು ಅನ್ನೋದು ಅವರ ಆಸೆ. ರಾತ್ರಿ ಗರ್ಬಾ ಆಡಿದ ನಂತರವೂ ಮರುದಿನ ಫ್ರೆಶ್ ಆಗಿ ಕಾಣಿಸಿಕೊಳ್ಳಲು ಇಂತಹ ಆಯ್ಕೆಗಳ ಬಗ್ಗೆ ಆಸಕ್ತಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ವೈದ್ಯರು ಹೇಳುವುದೇನು?
IV ಡ್ರಿಪ್ ಥೆರಪಿ ಬಗ್ಗೆ ಚರ್ಮರೋಗ ತಜ್ಞೆ ಡಾ. ಕಿಂಜಲ್ ಮೆಹ್ತಾ ಎಚ್ಚರಿಕೆ ನೀಡಿದ್ದಾರೆ. ಇದು ಕೇವಲ ಬ್ಯೂಟಿ ಟ್ರೀಟ್ಮೆಂಟ್ ಅಲ್ಲ, ವೈದ್ಯಕೀಯ ವಿಧಾನ. ಆದ್ದರಿಂದ ಥೆರಪಿ ಪಡೆಯುವ ಮೊದಲು ವ್ಯಕ್ತಿಯ ಆರೋಗ್ಯ ಸ್ಥಿತಿ ಪರಿಶೀಲಿಸುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ಅಗತ್ಯವಿಲ್ಲದಿದ್ದರೂ ವಿಟಮಿನ್ಗಳನ್ನು ನೇರವಾಗಿ ರಕ್ತನಾಳದ ಮೂಲಕ ತೆಗೆದುಕೊಳ್ಳುವುದು ಎಲ್ಲರಿಗೂ ಸೂಕ್ತವಲ್ಲ. ಇದರಿಂದ ಅಲರ್ಜಿಯ ಪ್ರತಿಕ್ರಿಯೆ, ದೇಹದಲ್ಲಿ ಅತಿಯಾದ ದ್ರವ ಸಂಗ್ರಹವಾಗುವುದು ಮತ್ತು ಕೆಲವು ಸಂದರ್ಭಗಳಲ್ಲಿ ಅಂಗಾಂಗಗಳ ಮೇಲೆ ಒತ್ತಡ ಉಂಟಾಗುವಂತಹ ಅಪಾಯಗಳಿರಬಹುದು.
ಎನರ್ಜಿ ಪಡೆಯಲು IV ಡ್ರಿಪ್ ಅಗತ್ಯವೇ?
ನವರಾತ್ರಿ ಸಮಯದಲ್ಲಿ ರಾತ್ರಿ ತಡವಾಗಿ ಮಲಗುವುದು, ನಿದ್ರೆ ಕಡಿಮೆಯಾಗುವುದು ಮತ್ತು ನಿರಂತರವಾಗಿ ಡ್ಯಾನ್ಸ್ ಮಾಡುವುದು ದಣಿವಿಗೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಸಾಕಷ್ಟು ನಿದ್ರೆ, ನೀರು ಕುಡಿಯುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಮುಖ್ಯ. IV ಡ್ರಿಪ್ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಮೊದಲು ವೈದ್ಯರ ಸಲಹೆ ಪಡೆಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

