ಬ್ಲ್ಯಾಕ್ ಸೀರೆಯುಟ್ಟು ಸೆರಗು ಹಾರಿಸಿದ ಅನುಪಮಾ ಗೌಡ, ಜ್ಯೂನಿಯರ್ ಆರತಿ ಎಂದು ಹೊಗಳಿದ ಫ್ಯಾನ್ಸ್!
ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಬ್ಲ್ಯಾಕ್ ಸೀರೆಯುಟ್ಟು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಅನುಪಮಾ ಅಂದ ನೋಡಿ ಜ್ಯೂನಿಯರ್ ಆರತಿ ಎಂದು ಹೊಗಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಕ್ಲಾಸೀ ಬ್ಲ್ಯಾಕ್ ಸ್ಯಾರಿ ಧರಿಸಿ ಮುದ್ದಾಗಿ ಪೋಟೋಗೆ ಫೋಸ್ ನೀಡಿದ್ದಾರೆ.
ಅನುಪಮಾ ಗೌಡ, ಬ್ಲ್ಯಾಕ್ ಸೀರೆಯುಟ್ಟು ಸ್ಲೀವ್ಲೆಸ್ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಸುಂದರವಾದ ನೆಕ್ಲೇಸ್ ಸೆಟ್ ಹಾಕ್ಕೊಂಡು ಕಪ್ಪು ಬಿಂದಿಯನ್ನು ಹಣೆಗೆ ಇಟ್ಟುಕೊಂಡಿದ್ದಾರೆ. ಮುಖದ ಮೇಲೆ ಹಾರುವ ಮುಂಗುರುಳಿನ ಜೊತೆ ಅನುಪಮಾ ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ.
ಅನುಪಮಾ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅನುಪಮಾ ಅಂದ ನೋಡಿ ಜ್ಯೂನಿಯರ್ ಆರತಿ ಎಂದು ಹೊಗಳಿದ್ದಾರೆ.
ಸೋ ಕ್ಯೂಟ್, ಬರ್ತಾ ಬರ್ತಾ ವಯಸ್ಸು ಕಮ್ಮಿ ಆಗ್ತಾ ಇದೆ, ನಗು ಚೆಂದ, ನಿಮಗೆ ಸೀರೆ ತುಂಬಾ ಚೆಂದ ಕಾಣುತ್ತೆ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿ ಹೊಗಳಿದ್ದಾರೆ. ಮತ್ತೆ ಕೆಲವರು, 'ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್', ಸೂಪರ್ ಅನು, ಸೋ ಕ್ಯೂಟ್, 'ಅನು ಡಾರ್ಲಿಂಗ್ ಮದುವೆ ಯಾವಾಗ' ಎಂದು ಪ್ರಶ್ನಿಸಿದ್ದಾರೆ.
ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ. ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು.
ಆ ನಂತರ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.
ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.
ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.