ಕೋಟಿ ಕೋಟಿ ಎಲ್ಲ ಲೆಕ್ಕಕ್ಕೇ ಇಲ್ಲ ಇಲ್ಲಿ.. ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳಿವು..!
Highest Grossing Movies Of All Time: ಬಾಹುಬಲಿ, ಕೆಜಿಎಫ್ ಚಿತ್ರಗಳು ಸಾವಿರಗಟ್ಟಲೆ ಹಣವನ್ನು ಬಾಕ್ಸಾಫೀಸಲ್ಲಿ ಬಾಚಿಕೊಂಡಾಗ ಸಿನಿಮಾ ಉದ್ಯಮದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಜಗತ್ತಿನಲ್ಲಿ ಗರಿಷ್ಠ ಗಳಿಕೆ ಮಾಡಿದ ಅಗ್ರ 10 ಸಿನಿಮಾಗಳ ಪಟ್ಟಿಯಲ್ಲಿ ಭಾರತದ ಯಾವೊಂದು ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿಲ್ಲ.
ಅವತಾರ್ (Avatar): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಚಿತ್ರ ವಿಶ್ವದಲ್ಲಿಯೇ ಈವರೆಗೂ ಗರಿಷ್ಠ ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. 2009ರಲ್ಲಿ ಬಿಡುಗಡೆಯಾದ ಈ ಚಿತ್ರ ಈವರೆಗೂ 2,923,706,026 ಯುಎಸ್ ಡಾಲರ್ ಅಂದರೆ 24,317 ಕೋಟಿ ರೂಪಾಯಿ ಆದಾಯ ಗಳಿಕೆ ಮಾಡಿದೆ.
ಅವೆಂಜರ್ಸ್-ಎಂಡ್‌ಗೇಮ್ ( Avengers-Endgame): ಅಂಥೋಣಿ ರುಸ್ಸೋ ಮತ್ತು ಜೋಯ್ ರುಸ್ಸೋ ನಿರ್ದೇಶನದ ಅವೆಂಜರ್ಸ್-ಎಂಡ್‌ಗೇಮ್ ಚಿತ್ರ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರ ಈವರೆಗೂ 2,797,501,328 ಯುಎಸ್ ಡಾಲರ್ ಅಂದರೆ 23, 266 ಕೋಟಿ ರೂಪಾಯಿ ಸಂಪಾದನೆ ಮಾಡಿದೆ.
ಅವತಾರ್-ದ ವೇ ಆಫ್ ವಾಟರ್ (Avatar The Way of Water): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸರಣಿಯ ಮುಂದುವರಿದ ಭಾಗ. ಕಳೆದ ವರ್ಷ ಬಿಡುಗಡೆಯಾಗಿರುವ ಈ ಸಿನಿಮಾ, ಈವರೆಗೂ 2,320,250,281 ಯುಎಸ್ ಡಾಲರ್ ಹಣ ಗಳಿಸಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 19,298 ಕೋಟಿ ರೂಪಾಯಿ.
ಟೈಟಾನಿಕ್ (Titanic): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಮತ್ತೊಂದು ಮಹಾಕಾವ್ಯ. 1997ರಲ್ಲಿ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ ಈ ಚಿತ್ರ ಇಲ್ಲಿಯವರೆಗೂ, 2,257,844,554 ಯುಎಸ್ ಡಾಲರ್ ಗಳಿಕೆ ಮಾಡಿದೆ. ಅಂದರೆ 18,779 ಕೋಟಿ ರೂಪಾಯಿ.
ಸ್ಟಾರ್ ವಾರ್ಸ್- ದಿ ಫೋರ್ಸ್ ಅವೇಕನ್ಸ್ (Star Wars- The Force Awakens): ಜೆಜೆ ಅಬ್ರಾಮ್ಸ್ ನಿರ್ದೇಶದ ಚಿತ್ರ ಸ್ಟಾರ್ ವಾರ್ಸ್- ದಿ ಫೋರ್ಸ್ ಅವೇಕನ್ಸ್ 2015ರ ಡಿಸೆಂಬರರ್ 14 ರಂದು ಬಿಡುಗಡೆಯಾಗಿತ್ತು. ಇಲ್ಲಿಯವರೆಗೂ ಈ ಸಿನಿಮಾ 2,068,223,624 ಯುಎಸ್ ಡಾಲರ್ ಕಮಾಯಿ ಮಾಡಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 17,201 ಕೋಟಿ ರೂಪಾಯಿಗಳು.
ಅವೆಂಜರ್ಸ್-ಇನ್ಫಿನಿಟಿ ವಾರ್ (Avengers- Infinity War): ಅಂಥೋಣಿ ರುಸ್ಸೋ ಮತ್ತು ಜೋಯ್ ರುಸ್ಸೋ ನಿರ್ದೇಶದನ ಮತ್ತೊಂದು ಚಿತ್ರ ಅವೆಂಜರ್ಸ್-ಇನ್ಫಿನಿಟಿ ವಾರ್ 2018ರ ಏಪ್ರಿಲ್ 23 ರಂದು ತೆರೆಗೆ ಅಪ್ಪಳಿಸಿದ ಈ ಚಿತ್ರ ಇಲ್ಲಿಯವರೆಗೂ 2,048,359,754 ಯುಎಸ್ ಡಾಲರ್ ಹಣ ಗಳಿಸಿದೆ. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 17,038 ಕೋಟಿ ರೂಪಾಯಿ.
ಸ್ಪೈಡರ್ ಮ್ಯಾನ್-ನೋ ವೇ ಹೋಮ್ (Spider-Man: No Way Home): ಜಾನ್ ವಾಟ್ಸ್ ನಿರ್ದೇಶದನ ಅಮೆರಿಕದ ಸೂಪರ್ ಹಿರೋ ಸರಣಿಯ 'ಸ್ಪೈಡರ್ ಮ್ಯಾನ್-ನೋ ವೇ ಹೋಮ್' 2021ರ ಡಿಸೆಂಬರ್ 13 ರಂದು ಬಿಡುಗಡೆ ಕಂಡಿತ್ತು. ಇದು ವಿಶ್ವದಾದ್ಯಂತ 1,921,847,111 ಯುಎಸ್ ಡಾಲರ್ ಹಣ ಸಂಪಾದಿಸಿತ್ತು. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 15,986 ಕೋಟಿ ರೂಪಾಯಿಗಳು
ಜುರಾಸಿಕ್ ವರ್ಲ್ಡ್ (Jurassic World): ಕಾಲಿನ್ ಟ್ರೆವೊರೊ ನಿರ್ದೇಶನದ ಸೈನ್ಸ್ ಫಿಕ್ಷನ್ ಆಕ್ಷನ್ ಚಿತ್ರ ಬಿಡುಗಡೆ ಕಂಡಿದ್ದು 2015ರಲ್ಲಿ. ಇಲ್ಲಿಯವರೆಗೂ ಈ ಚಿತ್ರ ಮಾಡಿರುವ ಕಮಾಯಿ 1,671,537,444 ಯುಎಸ್ ಡಾಲರ್. ಅಂದರೆ, 13,905 ಕೋಟಿ ರೂಪಾಯಿ.