- Home
- Entertainment
- ಮಹಿಳಾ ಫ್ಯಾನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ Dhurandhar ಸಿಂಗರ್ ಜಾಸ್ಮಿನ್ ಮಾಡಿದ್ದೇನು ನೋಡಿ..
ಮಹಿಳಾ ಫ್ಯಾನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ Dhurandhar ಸಿಂಗರ್ ಜಾಸ್ಮಿನ್ ಮಾಡಿದ್ದೇನು ನೋಡಿ..
Jasmine Sandlas Viral Video: ಸಂಗೀತ ಪ್ರದರ್ಶನದ ಸಮಯದಲ್ಲಿ ಗುಂಪಿನಲ್ಲಿದ್ದ ಕೆಲವು ಪುರುಷರು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವುದನ್ನು ಜಾಸ್ಮಿನ್ ಗಮನಿಸಿದರು. ಆಗ ಅವರು ತಕ್ಷಣ ಪ್ರದರ್ಶನವನ್ನು ನಿಲ್ಲಿಸಿದರು. ಆ ನಂತರ..

ಇದ್ದಕ್ಕಿದ್ದಂತೆ ಬದಲಾಯಿತು ವಾತಾವರಣ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಾಸ್ಮಿನ್ ಸ್ಯಾಂಡ್ಲಾಸ್ (Jasmine Sandlas) ಅವರ ಸಂಗೀತ ಕಚೇರಿಯಲ್ಲಿ ಜನಸಮೂಹದಲ್ಲಿ ಕೆಲವರು ಮಹಿಳಾ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಗಾಯಕಿ ಗಮನಿಸಿದ್ದೇ ತಡ ವಾತಾವರಣ ಇದ್ದಕ್ಕಿದ್ದಂತೆ ಬದಲಾಯಿತು.
ಶಾಕ್ ಅದ ಜನರು
ಜಾಸ್ಮಿನ್ ತಕ್ಷಣ ಪ್ರದರ್ಶನವನ್ನು ನಿಲ್ಲಿಸಿದರು. ವೇದಿಕೆಯಿಂದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸುವಂತೆ ಕರೆ ನೀಡಿದರು. ಈ ದೃಶ್ಯವನ್ನು ನೋಡಿ ಅಲ್ಲಿದ್ದ ಜನರು ಶಾಕ್ ಆದರು. ಹುಡುಗಿಯರು ತನ್ನ ಸಂಗೀತ ಕಚೇರಿಗಳಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ನಾನು ಹಾಡುವುದಿಲ್ಲ ಎಂದು ಗಾಯಕಿ ಸ್ಪಷ್ಟವಾಗಿ ಹೇಳಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕಿರುಕುಳ ನೀಡುತ್ತಿರುವುದನ್ನ ಗಮನಿಸಿದ ಜಾಸ್ಮಿನ್
ಸಂಗೀತ ಪ್ರದರ್ಶನದ ಸಮಯದಲ್ಲಿ ಗುಂಪಿನಲ್ಲಿದ್ದ ಕೆಲವು ಪುರುಷರು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವುದನ್ನು ಗಮನಿಸಿದ ಜಾಸ್ಮಿನ್, ತಕ್ಷಣ ತನ್ನ ಹಾಡನ್ನು ನಿಲ್ಲಿಸಿ, ಭದ್ರತಾ ಸಿಬ್ಬಂದಿಗೆ ಸಂಗೀತ ಕಚೇರಿಯಿಂದ ಅವರನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದಾರೆ.
ಗಾಯಕಿಯ ನಡೆಗೆ ಪ್ರಶಂಸೆ
"ಮಹಿಳೆಯರು ಸುರಕ್ಷಿತವಾಗಿರದಿದ್ದರೆ, ಯಾವುದೇ ಶೋ ಇರಲ್ಲ. ಇಂತಹ ಜನರನ್ನು ಕಾರ್ಯಕ್ರಮದಿಂದ ತೆಗೆದುಹಾಕಬೇಕೆಂದು ಗಾಯಕಿ ಒತ್ತಾಯಿಸಿದ್ದಲ್ಲದೆ, ಹುಡುಗಿಯರು ಸುರಕ್ಷಿತವಾಗಿಲ್ಲದಿದ್ದರೆ ನಾನು ಪ್ರದರ್ಶನ ನೀಡುವುದಿಲ್ಲ" ಎಂದೂ ಹೇಳಿದರು. ಜಾಸ್ಮಿನ್ ಅವರ ಈ ಕಾರ್ಯವನ್ನು ಸದ್ಯ ಜನರು ಶ್ಲಾಘಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್
ಜಾಸ್ಮಿನ್ ಅವರ ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನೇಕ ಜನರು ಗಾಯಕಿಯನ್ನು ಪ್ರಶಂಸಿಸಿದ್ದು, 'ಜನಸಮೂಹದ ಮುಂದೆ ತಪ್ಪನ್ನು ತಪ್ಪು ಎಂದು ಹೇಳಬಲ್ಲವಳು ಮಾತ್ರ ನಿಜವಾದ ಶಕ್ತಿ' ಎಂದು ಹೇಳಿದರೆ, ಮತ್ತೆ ಕೆಲವರು ಅವರನ್ನು "ಕ್ವೀನ್" ಎಂದು ಕರೆದಿದ್ದಾರೆ.
ಸಮಾರಂಭದಲ್ಲಿ ಆಯೇಷಾ ಭಾಗಿ
ಅಂದಹಾಗೆ ಇದೇ ಸಂಗೀತ ಕಚೇರಿಯಲ್ಲಿ "ಶರರತ್" ಹಾಡಿನಲ್ಲಿ ಕಾಣಿಸಿಕೊಂಡ ಆಯೇಷಾ ಖಾನ್ ಕೂಡ ವೇದಿಕೆ ಏರಿದರು. ಇಬ್ಬರೂ ಒಟ್ಟಿಗೆ ನೃತ್ಯ ಮಾಡಿದರು. ಜನಸಮೂಹ ಉತ್ಸಾಹದಿಂದ ಉಕ್ಕಿ ಹರಿಯಿತು. ಆಯೇಷಾ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, ವೇದಿಕೆಗೆ ಬಂದಾಗ ತನ್ನ ಸ್ಟೆಪ್ಸ್ ಸಹ ಮರೆತಿದ್ದೇನೆ. ಆದರೆ ಜಾಸ್ಮಿನ್ ಜೊತೆ ಇರುವುದು ತನಗೆ ವಿಶೇಷವಾಗಿತ್ತು ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
🚨 Queen Act 🚨
Jasmine Sandlas refuses to sing as some boys were teasing girls in the crowd! She asked the security deployed there to remove those boys.
Queen behaviour! 🔥 pic.twitter.com/oeTW6CrnmV— Prashant Kumar (@scribe_prashant) February 11, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
