MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • The Kerala Story ಅದಾ ಶರ್ಮಾಗೆ ಸೈಜ್​ ಕೇಳಿದ ನೆಟ್ಟಿಗ; ಪ್ರಶ್ನೆ ಕೇಳಿದವ ಮುಟ್ಟಿಕೊಳ್ಳೋ ಉತ್ತರ ಕೊಟ್ಟ ನಟಿ

The Kerala Story ಅದಾ ಶರ್ಮಾಗೆ ಸೈಜ್​ ಕೇಳಿದ ನೆಟ್ಟಿಗ; ಪ್ರಶ್ನೆ ಕೇಳಿದವ ಮುಟ್ಟಿಕೊಳ್ಳೋ ಉತ್ತರ ಕೊಟ್ಟ ನಟಿ

'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಕೇಳಿದ 'ನಿಮ್ಮ ಸೈಜ್ ಎಷ್ಟು?' ಎಂಬ ಅಸಭ್ಯ ಪ್ರಶ್ನೆಗೆ  ಆತ ಮುಟ್ಟಿ ಕೊಳ್ಳುವ ಉತ್ತರ ಕೊಟ್ಟಿದ್ದಾರೆ ನಟಿ. ಅವರು ಹೇಳಿದ್ದೇನು| ವಿಡಿಯೋ ಆಗಿದೆ ವೈರಲ್​

2 Min read
Author : Suchethana D
Published : Apr 04 2026, 12:21 PM IST
Share this Photo Gallery
  • FB
  • TW
  • Linkdin
  • Whatsapp
16
ದಿ ಕೇರಳ ಸ್ಟೋರಿ ನಟಿ
Image Credit : @Adah Sharma

ದಿ ಕೇರಳ ಸ್ಟೋರಿ ನಟಿ

ದಿ ಕೇರಳ ಸ್ಟೋರಿ ಚಿತ್ರದ ಮೂಲಕ ರಾತ್ರೋರಾತ್ರಿ ಸೂಪರ್​ಸ್ಟಾರ್​ ಆದ ನಟಿ ಅದಾ ಶರ್ಮಾ. ನಟಿ ಯಾವಾಗಲೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ನಟಿ ಸದ್ಯ ‘ಸೂಪರ್ ವೆಲ್ಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜೇಶ್ ಬಚ್ಚನ್ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ ಪೊಲೀಸ್ ಅಧಿಕಾರಿ ಮತ್ತು ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ನಿಜ ಜೀವನದ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

26
ಸೋಷಿಯಲ್​​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​
Image Credit : Instagram

ಸೋಷಿಯಲ್​​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​

ಸೋಷಿಯಲ್​​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇರುವ ನಟಿ ಈಚೆಗೆ ಆಸ್ಕ್​ ಮೀ ಎನಿಥಿಂಗ್​ ನಡೆಸಿದ್ದರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದು ಅವರ ಉದ್ದೇಶ. ಈ ಸಂದರ್ಭದಲ್ಲಿ ನಟಿಗೆ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆಲ್ಲಾ ನಟಿ, ಉತ್ತರಿಸಿದ್ದಾರೆ. ಕೆಲವರು ನಟಿಯ ಆ್ಯಕ್ಟಿಂಗ್​ ಬಗ್ಗೆ, ಮದುವೆ, ಭವಿಷ್ಯದ ಪ್ಲ್ಯಾನ್​​ ಇತ್ಯಾದಿಗಳ ಪ್ರಶ್ನೆ ಕೇಳಿದ್ದು, ಎಲ್ಲದಕ್ಕೂ ನಟಿ ಸಮಾಧಾನದಿಂದ ಉತ್ತರಿಸಿದ್ದಾರೆ.

Related Articles

Related image1
ಮಾಂಸಾಹಾರಿಗಳಿಗೆ ಹೀಗೆಲ್ಲಾ ಹೇಳೋದಾ ಅದಾ ಶರ್ಮಾ? ದಿ ಕೇರಳ ಸ್ಟೋರಿ ನಟಿ ವಿರುದ್ಧ ಭಾರಿ ಆಕ್ರೋಶ
Related image2
ಸುಶಾಂತ್ ಸಿಂಗ್​ ನಿಗೂಢವಾಗಿ ಸತ್ತ 'ಭೂತ ಬಂಗ್ಲೆ'ಯಲ್ಲೇ ನೆಲೆಸಿರೋ ನಟಿ ಅದಾ ಶರ್ಮಾ ಅನುಭವ ಕೇಳಿ...
36
ಅಸಭ್ಯ ಪ್ರಶ್ನೆ
Image Credit : Social Media

ಅಸಭ್ಯ ಪ್ರಶ್ನೆ

ಈ ಸಂದರ್ಭದಲ್ಲಿ, ಒಬ್ಬ ನೆಟ್ಟಿಗ ಅದಾ ಶರ್ಮಾ ಅವರಿಗೆ ಅಸಭ್ಯ ಪ್ರಶ್ನೆ ಕೇಳಿದ್ದಾನೆ. ಸಾಮಾನ್ಯವಾಗಿ, ಮುಜುಗರದ ಅಥವಾ ಅಸಭ್ಯ ಪ್ರಶ್ನೆಯನ್ನು ಕೇಳಿದಾಗ, ಸೆಲೆಬ್ರಿಟಿಗಳು ಉತ್ತರಿಸಲು ಹಿಂಜರಿಯುತ್ತಾರೆ. ಅಥವಾ ಅವರು ಅಂತಹ ಪ್ರಶ್ನೆಗಳನ್ನು ಬಿಟ್ಟುಬಿಡುತ್ತಾರೆ. ಆದರೆ, ಅದಾ ಶರ್ಮಾ ಹಾಗೆ ಮಾಡಲಿಲ್ಲ. ಅದಕ್ಕೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಈ ನೆಟ್ಟಿಗ ಕೇಳಿದ್ದು ಏನೆಂದರೆ, 'ನಿಮ್ಮ ಸೈಜ್ ಎಷ್ಟು?' ಎಂದು. ಇದಕ್ಕೆ ಉತ್ತರಿಸಿದ ನಟಿ, ತಮ್ಮ ಚಪ್ಪಲಿ ತೋರಿಸಿ, ಸೈಜ್ 9, ಇದು ನನ್ನ ಸ್ಯಾಂಡಲ್ ಸೈಜ್ ಎಂದು ಹೇಳಿದರು.

46
 PETA ಇಂಡಿಯಾದ ಜಾಹೀರಾತು
Image Credit : instagram @adah sharma

PETA ಇಂಡಿಯಾದ ಜಾಹೀರಾತು

ಇತ್ತೀಚೆಗೆ ಅವರು PETA ಇಂಡಿಯಾದ ಹೊಸ ಜಾಹೀರಾತು ಪ್ರಚಾರದಲ್ಲಿ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ್ದು, ಮಾಂಸಹಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟಕ್ಕೂ ನಟಿ ಅದಾ ಶರ್ಮಾ ಬಾಲ್ಯದಿಂದಲೂ ಸಸ್ಯಾಹಾರಿ. ಮಾಂಸಾಹಾರ ಸೇವನೆಯಿಂದ ದೂರವಿರಿ ಎಂದು ಅಭಿಮಾನಿಗಳಿಗೆ ಅವರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಹೋಮೋ ಸೇಪಿಯನ್ಸ್‌ನ ಕಾಲದಿಂದ ದ್ವಿಪಾದಿಗಳ ಕಾಲದವರೆಗೆ ಜನರು ಬೇಟೆಯಾಡುತ್ತಿದ್ದಾರೆ, ಆದ್ದರಿಂದ ಅವರು ಮೊದಲಿನಿಂದಲೂ ಮಾಂಸಾಹಾರಿಗಳು ಎನ್ನುವ ಮಾತು ಹೇಳಿರುವ ನಟಿ, ಇದು ಸಂಪೂರ್ಣವಾಗಿ ಸರಿ ಎಂದು ನಾನು ಭಾವಿಸುತ್ತೇನೆ. ಮಾಂಸಾಹಾರಿಗಳು ಕಾರಿನಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ, ಅವರು ಗುಹಾನಿವಾಸಿಗಳಂತೆ ಬದುಕಬೇಕು. ಆದ್ದರಿಂದ ಅವರು ಗುಹೆಯಲ್ಲಿ ವಾಸಿಸಬೇಕು ಎಂದಿದ್ದರು!

56
ನಾನು ಹೇಳ್ತೇನೆ ಕೇಳಿ
Image Credit : instagram

ನಾನು ಹೇಳ್ತೇನೆ ಕೇಳಿ

ನಾನು ಹೇಳುತ್ತೇನೆ ಕೇಳಿ. ನೀವು ನಿಮ್ಮ ಕಾರಿನಲ್ಲಿ ಕುಳಿತುಕೊಳ್ಳಬೇಡಿ, ನೀವು ಗುಹೆಯಲ್ಲಿಯೇ ಇದ್ದು ನಿಮ್ಮ ಸ್ವಂತ ಪ್ರಾಣಿಗಳನ್ನು ಕೊಂದು ತಿನ್ನಿರಿ. ಅವರೇ ನಿಜವಾದ ಮಾಂಸಾಹಾರಿಗಳು. ಹಿಂದೆ ಬೇಟೆಯಾಡಿ ತಿನ್ನುತ್ತಿದ್ದರು. ನೀವೂ ಹಾಗೆಯೇ ಮಾಡಿ. ನಿಮ್ಮ ಸ್ವಂತ ಶಿಲಾಯುಗದ ಆಯುಧಗಳು ಮರದ ಕೆಳಗೆ ನೀವು ಸಿಂಹ ಅಥವಾ ಕರಡಿಯನ್ನು ಕಂಡುಕೊಂಡರೆ, ಆ ಸಮಯದಲ್ಲಿ ನೀವು ತಿನ್ನುವ ಯಾವುದೇ ಪ್ರಾಣಿಯನ್ನು ನೀವು ಕಚ್ಚಾ ಅಥವಾ ಹುರಿದು ತಿನ್ನಬಹುದು. ಮಾಂಸಾಹಾರಿಗಳು ಗುಹೆ ಸಂಸ್ಕೃತಿಯನ್ನು ಅನುಸರಿಸಲು ಬಯಸಿದರೆ, ಅವರು ತಮ್ಮ ಎಸಿ ಕಾರುಗಳಲ್ಲಿ ಕುಳಿತು ತಮ್ಮ ಆಹಾರವನ್ನು ಆನಂದಿಸಲು ಸಾಧ್ಯವಿಲ್ಲ ಎಂದಿದ್ದರು.

66
ಗುಹೆಯ ಬದಲು ಇಲ್ಲಿ ವಾಸಿಸಬೇಡಿ
Image Credit : Adah Sharma instagram

ಗುಹೆಯ ಬದಲು ಇಲ್ಲಿ ವಾಸಿಸಬೇಡಿ

ಇಷ್ಟಕ್ಕೇ ಸುಮ್ಮನಾಗದ ನಟಿ, ಗುಹೆಯ ಬದಲು ಇಲ್ಲಿ ವಾಸಿಸುವುದು ಸರಿಯಲ್ಲ. ಇಲ್ಲಿಯಾದರೆ ನಿಮಗೆ ನಾನ್ ವೆಜ್ ತಿನ್ನಬೇಕೆಂದರೆ ಯಾರೋ ಅಡುಗೆ ಮಾಡುತ್ತಿದ್ದಾರೆ, ಯಾರೋ ಹಿಡಿಯುತ್ತಿದ್ದಾರೆ, ಯಾರೋ ಹೊಡೆಯುತ್ತಿದ್ದಾರೆ, ಯಾರೋ ರಕ್ತವನ್ನು ಸ್ವಚ್ಛಗೊಳಿಸುತ್ತಿದ್ದಾರೆ, ಯಾರೋ ಪ್ಲೇಟ್‌ನಲ್ಲಿ ಬಡಿಸುತ್ತಿದ್ದಾರೆ. ಅದು ನಿಮಗೆ ಸರಿ ಬರುವುದಿಲ್ಲ. ನೀವು ಶಿಲಾಯುಗದಂತೆ ಬದುಕಲು ಬಯಸುತ್ತೀರಿ, ನೀವು ಗುಹೆಯಲ್ಲಿ ವಾಸಿಸಬೇಕು, ನೀವು ಚಾಕು ಮತ್ತು ಫೋರ್ಕ್‌ಗಳೊಂದಿಗೆ ಎಸಿ ರೆಸ್ಟೋರೆಂಟ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಮನರಂಜನಾ ಸುದ್ದಿ
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ

Latest Videos
Recommended Stories
Recommended image1
4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ ಸಂಬಳ? ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು?
Recommended image2
ಸೀಕ್ರೆಟ್ ಬಹಿರಂಗ: ಹೈದರಾಬಾದ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಈ ಮಹಾ ಗುಟ್ಟು ಕೊನೆಗೂ ರಟ್ಟಾಯ್ತು!
Recommended image3
ದರ್ಶನ್ ಜೈಲು ಸೇರಿ 365 ದಿನ, ಜಾಮೀನು ಯಾವಾಗ? ರೇಣುಕಾಸ್ವಾಮಿ ಸಹವಾಸ, ದಾಸ 365 ದಿನ ವನವಾಸ.!
Related Stories
Recommended image1
ಮಾಂಸಾಹಾರಿಗಳಿಗೆ ಹೀಗೆಲ್ಲಾ ಹೇಳೋದಾ ಅದಾ ಶರ್ಮಾ? ದಿ ಕೇರಳ ಸ್ಟೋರಿ ನಟಿ ವಿರುದ್ಧ ಭಾರಿ ಆಕ್ರೋಶ
Recommended image2
ಸುಶಾಂತ್ ಸಿಂಗ್​ ನಿಗೂಢವಾಗಿ ಸತ್ತ 'ಭೂತ ಬಂಗ್ಲೆ'ಯಲ್ಲೇ ನೆಲೆಸಿರೋ ನಟಿ ಅದಾ ಶರ್ಮಾ ಅನುಭವ ಕೇಳಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved