- Home
- Entertainment
- Vijay Raghavendra ಜೊತೆ Anchor Anushree Photo Viral: ಚಿರಕಾಲ ಹೀಗೆ ಇರಲಿ ಸ್ನೇಹ ಎಂದ ಫ್ಯಾನ್ಸ್!
Vijay Raghavendra ಜೊತೆ Anchor Anushree Photo Viral: ಚಿರಕಾಲ ಹೀಗೆ ಇರಲಿ ಸ್ನೇಹ ಎಂದ ಫ್ಯಾನ್ಸ್!
ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ರಾಘವೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತೆ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಆ್ಯಂಕರ್ ಅನುಶ್ರೀ ವಿಜಯ ರಾಘವೇಂದ್ರ ಜೊತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನ ಬಳಿಕ ಮತ್ತೆ ಡಿಕೆಡಿ ಶೋಗೆ ಭಾಗಿಯಾಗಿದ್ದಾರೆ. ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟಿವ್ ಆಗಿದ್ದಾರೆ.
ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ರಾಘವೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತೆ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್‌ಕುಮಾರ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು.
ಈ ಕಾರ್ಯಕ್ರಮವನ್ನು ಆ್ಯಂಕರ್ ಅನುಶ್ರೀ ನಡೆಸಿಕೊಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಜಯ ರಾಘವೇಂದ್ರ ಜೊತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಟೋ ಸಖತ್ ವೈರಲ್ ಆಗಿದೆ.
ಕೆಲವು ಭಾವಚಿತ್ರಗಳು ಭಾವಗಳನ್ನು ತಾನಾಗೇ ನುಡಿಯುತ್ತೆ. ಸ್ನೇಹ ಬಾಳನ್ನು ಬೆಳಗುತ್ತೆ. Best moment with Bestie ವಿಜಯ ರಾಘವೇಂದ್ರ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋಗೆ ನೆಟ್ಟಿಗರು, ಮರೆಯಲಾಗದ ಬಂಧ, ನೆನಪುಗಳು ಶಾಶ್ವತ, ಚಿನ್ನಾರಿಮುತ್ತ! ಹೀಗೆ ನಗುನಗುತ್ತಾ ಇರಿ, ದುಃಖದಿಂದ ಸುಖದ ನಿಲ್ದಾಣಕ್ಕೆ ಹಾಗೂ ಬಿಗ್ ಬಾಸ್ ಸೀಸನ್ 1 ರಿಂದ DKD ವರೆಗೆ ನಿಮ್ಮ ಸ್ನೇಹವು ಅಂತ್ಯವಿಲ್ಲ ಮತ್ತು ಲೆಕ್ಕವಿಲ್ಲದಷ್ಟು ನೆನಪುಗಳು ನಿಮ್ಮ ಜೀವನದುದ್ದಕ್ಕೂ ಇರುತ್ತದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟಿಸಿದ್ದಾರೆ.
ಇನ್ನು ವಿಜಯ-ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಜನಿಸಿದರು. ಕಳೆದ ತಿಂಗಳು ಕುಟುಂಬದ ಆಪ್ತರ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದಾಗ, ಹಾರ್ಟ್ ಅಟ್ಯಾಕ್‌ನಿಂದ ವಿಜಯ ಪತ್ನಿ ನಿಧನರಾದರು. ಸ್ಪಂದನಾ ಅಗಲಿಕೆ ವಿಜಯ ಕುಟುಂಬಕ್ಕೆ ಶಾಕ್ ಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.